ಹಲೋ ಸ್ನೇಹಿತರೇ, ಇದು ಸ್ಮಾರ್ಟ್ ಫೋನ್ ಯುಗ. ಫೋನ್ ಸಣ್ಣದಾಗಿಯೇ ಇರಲಿ ಅಥವಾ ದೊಡ್ಡದಾಗಿಯೇ ಇರಲಿ ಮೊಬೈಲ್ ನೋಡುವುದನ್ನು ಯಾರು ಬಿಡುವುದಿಲ್ಲ. ಮಕ್ಕಳ ಬಳಿ ಫೋನ್ ಇಲ್ಲ ಎಂದರೆ ಅ ಮಗು ಊಟವನ್ನು ಮಾಡುವುದಿಲ್ಲ, ಯಾರನ್ನು ಮಾತನಾಡಿಸುವುದಿಲ್ಲ, ಯಾವಾಗಲು ಅಳುತ್ತದೆ. ಇದು ಎಲ್ಲಾ ತಾಯಿಯರು ಹೇಳುವ ಸಮಾನ್ಯ ವಿಷಯವಾಗಿದೆ. ಈ ರೀತಿ ಮಾಡುವುದರಿಂದ ಮುಂದೆ ನಿಮ್ಮ ಜೀವನದ ಮೇಲೆ ಏನು ಪರಿಣಾಮ ಬೀರುತ್ತದೆ ಎನ್ನುವುದನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ಕೊನೆವರೆಗೂ ತಪ್ಪದೇ ಈ ಲೇಖನವನ್ನು ಓದಿ.
ಫೋನ್ ಪ್ರತಿಯೊಬ್ಬರಿಗೂ ಒಂದು ಪ್ರಪಂಚನ್ನೆ ಸೃಷ್ಟಿಸುತ್ತದೆ, ಊಟ ತಿನ್ನಲು ಕೂಡ ಮೊಬೈಲ್ ಫೋನ್ ಬೇಕು. ನೀವು ಸ್ನಾನಗೃಹಕ್ಕೆ ಹೋಗಲು ನಿರ್ಧಾರಿಸಿದರೆ, ನೀವು ಸೆಲ್ ಫೋನ್ ಇಲ್ಲದೆ ಹೋಗೂವುದೇ ಇಲ್ಲ. ಸ್ಮಾರ್ಟ್ ಫೋನ್ಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನುಷ್ಯ ಕೂಡ ಸೆಲ್ ಫೋನ್ ಗೆ ವ್ಯಸನಿಯಾಗುತ್ತಿದ್ದಾನೆ. ಸ್ವಲ್ಪ ಫ್ರೀ ಟೈಮ್ ಸಿಕ್ಕಿದರೆ ಸಾಕು. ಜನರೊಂದಿಗೆ ಮಾತನಾಡುವುದನ್ನು ನಿಲ್ಲಿಸಿ.
ಆದ್ರೆ ಫೋನ್ ಬಳಕೆಯು ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಯಾರೂ ಯೋಚಿಸುವುದೆ ಇಲ್ಲ. ಸೆಲ್ ಫೋನ್ ಗಳ ಬಗ್ಗೆ ಇತ್ತೀಚಿನ ಸಂಶೋಧನೆಯು ಈಗಾಗಲೇ ಆಸಕ್ತಿದಾಯಕ ಸಂಗತಿಗಳನ್ನು ಈಗಾಗಲೇ ಬಹಿರಂಗಪಡಿಸಿದೆ. ಹದಿಹರೆಯದವರು ತಮ್ಮ ಸ್ಮಾರ್ಟ್ ಫೋನ್‌ಗಳು ಪ್ರತಿದಿನ 4 ಗಂಟೆಗಳಿಗಿಂತ ಹೆಚ್ಚು ಗಂಟೆಗಳ ಕಾಲ ನೋಡುತ್ತಾರೆ. ಮಾನಸಿಕ ಒತ್ತಡವು ಖಿನ್ನತೆಗೆ ಕಾರಣವಾಗಬಹುದು, ಇದರಿಂದ ನಿದ್ರೆಯ ಸಮಸ್ಯೆಗಳು ಹಾಗೂ ಕಣ್ಣಿನ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತೋರಿಸಲಾಗಿದೆ.
ಇದನ್ನೂ ಸಹ ಓದಿ: ಈ ಯೋಜನೆಯಡಿ ಖಾತೆ ತೆರೆದರೆ ಸಾಕು..! ಪ್ರತಿ ತಿಂಗಳು ಸರ್ಕಾರದಿಂದ ಜಮಾ ಆಗಲಿದೆ 10 ಸಾವಿರ
ಸೆಲ್ ಫೋನ್ ಬಳಕೆಯ ಅಡ್ಡಪರಿಣಾಮಗಳು
ಕೊರಿಯಾದ ಹ್ನ್ಯಾಂಗ್ ಯೂನಿವರ್ಸಿಟಿ ಮೆಡಿಕಲ್ ಸೆಂಟರ್ ನ ತಂಡವು ಹದಿಹರೆಯದವರು ಸ್ಮಾರ್ಟ್ ಫೋನ್ ನ ಬಳಕೆಯ ಬಗ್ಗೆ ಹಲವಾರು ಸಂಶೋಧನೆಗಳನ್ನು ನಡೆಸಿದೆ. ಈ ಬಗ್ಗೆ 50,000 ಕ್ಕೂ ಹೆಚ್ಚು ಜನರನ್ನು ಅಧ್ಯಯನ ಮಾಡಲಾಗಿದೆ. ಈ ಹಂತದಲ್ಲಿ ಜನರು ದಿನಕ್ಕೆ 4 ಗಂಟೆಗಳಿಗಿಂತ ಹೆಚ್ಚು ಕಾಲ ಸ್ಮಾರ್ಟ್ ಫೋನ್ ಬಳಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮೊಬೈಲ್ ಫೋನ್ ಗಳು ಹೆಚ್ಚಿನ ಮಟ್ಟದ ಒತ್ತಡ ಮತ್ತು ಖಿನ್ನತೆ, ಆಲೋಚನೆಗಳು ಹಾಗೂ ಮಾದಕವಸ್ತು ಬಳಕೆಗೆ ಸಂಬಂಧಿಸಿದೆ. ಫೋನ್ ನ್ನು ಕಡಿಮೆ ಬಳಸುವವರು ಇದೇ ರೀತಿಯ ಆಲೋಚನೆಗಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ದೃಷ್ಟಿ ದೌರ್ಬಲ್ಯವು ಯಾವಾಗ ಸಂಭವಿಸುತ್ತದೆ
ಫೋನ್ ನ ಅತಿಯಾದ ಬಳಕೆಯು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ ಮಲಗುವ ಮೊದಲು ನೀವು ಫೋನ್ ಪರದೆಯನ್ನು ನೋಡಿದರೆ, ನಿಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ. ಫೋನ್ ಬೆಳಕು ಕಣ್ಣಿನ ಮೇಲೆ ಹೆಚ್ಚು ಬಿದ್ದರೆ. ನಿದ್ರೆಯ ಕೊರತೆಯು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಫೋನ್ ನೋಡುವುದರಿಂದ ಕಣ್ಣುಗಳು ಒಣಗುವುದು, ತಲೆನೋವು, ಮಂಪರು, ಆಯಾಸ ಇತ್ಯಾದಿಗಳಿಗೆ ಕಾರಣವಾಗಬಹುದು. ಇದು ಕಣ್ಣಿನ ಸಮಸ್ಯೆಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ದಿನವಿಡೀ ಫೋನ್ ಬಳಸುವುದರಿಂದ ಕುತ್ತಿಗೆ ಮತ್ತು ಬೆನ್ನುಮೂಳೆಯ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಸೆಲ್ ಫೋನ್ ಬಳಸುವವರು ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಇತರೆ ವಿಷಯಗಳು:
ಪಿಂಚಣಿಯಲ್ಲಿ ಹೊಸ ನಿಯಮ! 40 ನೇ ವಯಸ್ಸಿನಲ್ಲಿ 50,000 ಪಿಂಚಣಿಯನ್ನು ಪಡೆಯಬಹುದು ಹೇಗೆ ಗೊತ್ತಾ?
ಬಾಡಿಗೆದಾರರಿಗೆ ಹೊಸ ನಿಯಮ.!! ಹಿಡುವಳಿದಾರ ಆಸ್ತಿಯನ್ನು ತನ್ನದಾಗಿಸಿಕೊಳ್ಳಬಹುದೇ? ಇಲ್ಲಿದೆ ಕಂಪ್ಲೀಟ್ ಅಪ್ಡೇಟ್