ಹಲೋ ಸ್ನೇಹಿತರೇ, ಮಹಿಳೆಯರಿಗೆ ನೀಡುವ ಯೋಜನೆಗಳು ಹೆಚ್ಚು ಚಾಲ್ತಿಯಲ್ಲಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಹಿಳೆಯರಿಗೆ ಪ್ರೋತ್ಸಹವನ್ನು ನೀಡುತ್ತಿವೆ. ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಹಾಗೂ ಶಕ್ತಿ ಯೋಜನೆಗಳು ಸಾಕಷ್ಟು ಸುದ್ದಿ ಮಾಡುತ್ತಿದ್ದು ಈಗ ಕೇಂದ್ರ ಸರ್ಕಾರ ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರಿಗೆ ಹೊಸ ಯೋಜನೆ ಜಾರಿಗೆ ತರುತ್ತಿದೆ. ಯಾವುದು ಆ ಯೋಜನೆ ತಿಳಿಯಿರಿ.
ಕೇಂದ್ರ ಸರ್ಕಾರ ಈಗ ಬಾಣಂತಿ ಮತ್ತು ಗರ್ಭಿಣಿಯರಿಗೆ ಮಾತೃ ವಂದನಾ ಯೋಜನೆಯನ್ನು ಜಾರಿಗೆ ತರುತ್ತಿದೆ. ಇದರಿಂದ ಬಾಣಂತಿ ಮಹಿಳೆಯರಿಗೆ ಪೌಷ್ಠಿಕ ಆಹಾರವನ್ನು ಪಡೆದುಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನವನ್ನು ಬಾಣಂತಿ ಮತ್ತು ಗರ್ಭಿಣಿ ಮಹಿಳೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಪಡೆದುಕೊಳ್ಳಬಹುದು.
ಅರ್ಜಿ ಆಹ್ವಾನ:
ಈ ಯೋಜನೆಗೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶವನ್ನು ನೀಡಿದ್ದು. ಎರಡು ಮಕ್ಕಳವರೆಗು ಮಾತೃ ವಂದನಾ ಯೋಜನೆಯ ಮುಖಾಂತರ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಮೊದಲನೇ ಮಗು ಹೆಣ್ಣಾಗಿದ್ದರೆ 5,000 ರೂ ಸರ್ಕಾರ ನೀಡುತ್ತದೆ. 2 ನೇ ಮಗುವು ಹೆಣ್ಣಾದರೆ 1 ಕಂತಿನಲ್ಲೇ 6,000 ರೂ ಸಿಗುತ್ತದೆ.
ಹಣ ಬಿಡುಗಡೆ:
ಈ ಯೋಜನೆಯಲ್ಲಿ 3 ಕಂತಿನ ಮೂಲಕ ಹಣ ಬಿಡುಗಡೆಯಾಗುತ್ತದೆ. ಗರ್ಭಿಣಿಯರಿಗೆ 1 ಕಂತಿನಲ್ಲಿ 1,000 ರೂ. 2 ನೇ ಕಂತಿನಲ್ಲಿ 2,000 ರೂ ನೀಡಲಾಗುತ್ತದೆ. 3 ನೇ ಕಂತಿನಲ್ಲಿ 2,000 ರೂ ಜಮೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಿ:
ಈ ಅರ್ಜಿಗೆ ನೋಂದಣಿಯನ್ನು ಮಾಡಿಕೊಳ್ಳಲಾಗುತ್ತಿದ್ದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಬೇಕಾಗತ್ತದೆ. ಅಥವಾ https://pmmvy.wed.gov.in ಈ ಲಿಂಕ್ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪೌಷ್ಢಿಕ ಆಹಾರವನ್ನು ಪಡೆಯಲು ಆಯ್ಕೆಯಾದ ಫಲಾನುಭವಿಗಳ ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಇವರಿಗೆ ಆನ್ವಯಿಸುವುದಿಲ್ಲ:
ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗ ಮಾಡುತ್ತಿರುವವರಿಗೆ ಈ ಯೋಜನೆಯ ಸಿಗುವುದಿಲ್ಲ. ಇಂತಹ ಕೆಲಸದಲ್ಲಿ ಇರುವ ಮಹಿಳೆಯರಿಗೆ ಈ ಯೋಜನೆ ಲಾಭ ಸಿಗುವುದಿಲ್ಲ.
ಇತರೆ ವಿಷಯಗಳು
ನೂರರ ಗಡಿ ದಾಟಿದ 1 ಕೆಜಿ ಅಕ್ಕಿಯ ಬೆಲೆ!! ಬರದಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೆ
ರೈಲ್ವೆ ಪ್ರಯಾಣಿಕರ ಗಮನಕ್ಕೆ..! ಜನರಲ್ ಟಿಕೆಟ್ ಪಡೆದು ಪ್ರಯಾಣಿಸುವ ಜನರಿಗೆ ಹೊಸ ನಿಯಮ