ಹಲೋ ಸ್ನೇಹಿತರೇ ಎಲ್ ಪಿ ಜಿ ಬಗ್ಗೆ ಹೊಸ ಮಾಹಿತಿ ಹೊರಡಿಸಲಾಗಿದೆ. ಕೆಲವು ಜನರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ರದ್ದು ಮಾಡಲಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಡಿಸೆಂಬರ್ ಒಳಗೆ ಈ ಸಣ್ಣ ಕೆಲಸವನ್ನು ಮಾಡಿ ಯಾವುದು ಆ ಕೆಲಸ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಪ್ರಸ್ತುತ ಡಿಜಿಟಲ್ ಜಗತ್ತಿನಲ್ಲಿ ಅದರಲ್ಲೂ ಹೆಚ್ಚು ಜನ ಬಳಕೆದಾರರನ್ನು ಹೊಂದಿರುವ ವಾಟ್ಸಾಪ್ ಅಪ್ಲಿಕೇಶನ್ ಗಳಲ್ಲಿ ಎಲ್ಲಾ ಸುದ್ದಿಗಳು ಬೇಗನೆ ವೈರಲ್ ಆಗುತ್ತದೆ ಜನರು ಒಂದು ಸುದ್ದಿ ಬಂದ ಬಳಿಕ ಅದರ ಸತ್ಯಸತ್ಯತೆ ಅನ್ನು ಖಚಿತಪಡಿಸಿಕೊಳ್ಳದೇ ಮತ್ತೊಬ್ಬರಿಗೆ ಶೇರ್ ಮಾಡುತ್ತಾರೆ.
ಗ್ಯಾಸ್ ಸಿಲಿಂಡರ್ ಬಳಕೆ ಮಾಡುವ ಗ್ರಾಹಕರು ಡಿಸೆಂಬರ್ 31 ರ ಒಳಗೆ ತಮ್ಮ ಗ್ಯಾಸ್ ಏಜೆನ್ಸಿ ಕಚೇರಿಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಳ್ಳಬೇಕಾಗುತ್ತದೆ ಜನವರಿ 1 ರ ನಂತರ ಸಬ್ಸಿಡಿಯಲ್ಲಿ ಗ್ಯಾಸ್ ಸಿಲಿಂಡರ್ ಪಡೆಯಬವುದು ಇಲ್ಲದಿದ್ದರೆ ಪೂರ್ತಿ ಹಣವನ್ನು ಪಾವತಿ ಮಾಡಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡಬೇಕು ಎಂದು ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಲಾಗಿದೆ.
ಇದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೆಲವು ಮಾಹಿತಿಯನ್ನು ಖಚಿತ ಈ ಅಂಕಣದಲ್ಲಿ ಪ್ರಕಟಗೊಳಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಇ-ಕೆವೈಸಿ ವಿಚಾರದಲ್ಲಿ ಇದೆ ಅಗಿದೆ ಈ ಕೆಳಗೆ ತಿಳಿಸಿರುವ ಸಂದೇಶವು ಬಹು ಬೇಗನೆ ರಾಜ್ಯ ವ್ಯಾಪಿ ವೈರಲ್ ಆಗಿದೆ ಇದರ ಪರಿಣಾಮದಿಂದಾಗಿ ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಇ-ಕೆವೈಸಿ ಮಾಡಿಕೊಳ್ಳಲು ಸಾಲು ಗಟ್ಟಿ ನಿಲ್ಲುವಂತಾಗಿದೆ.
ಡಿಸೆಂಬರ್ 31 ರ ಒಳಗೆ ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅದಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕ ಅಥವಾ ಆಧಾರ್ ಕಾರ್ಡ್ ಈ ಮೂರು ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ಯಾಸ್ ಎಜೆನ್ಸಿ ಬಳಿ ಹೋಗಿ KYC ಮಾಡಿಸಬೇಕಾಗುತ್ತದೆ.
ಮಾಡಿಸಿದ್ರೆ ನಿಮಗೆ ಜನವರಿ1 ರಿಂದ ಸಬ್ಸಿಡಿ ದೊರೆಯುತ್ತದೆ. ಈಗಿರುವ 903 ಇರುವ ಸಿಲಿಂಡರ್ 500 ರೂ. ಗೆ ಸಿಗುತ್ತದೆ. Kyc ಮಾಡಿಸದಿದ್ದರೆ ಸಬ್ಸಿಡಿ ರಹಿತವಾಗಿ ಕಮರ್ಷಿಯಲ್ ಆಗಿ ಮಾರ್ಪಟ್ಟು 1400 ಕ್ಕೆ ಪಡೆಯಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಎನ್ನುವ ಸಂದೇಶವು ವಾಟ್ಸಾಪ್ ಗುಂಪುಗಳಲ್ಲಿ ವೈರಲ್ ಆಗಿದೆ.
ಇದರ ಬಗ್ಗೆ ಸ್ಪಷ್ಟನೆ ನೀಡಿವ ಸಂಬಂಧಪಟ್ಟ ಅಧಿಕಾರಿಗಳು ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿ. 31 ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು KYC ಮಾಡಿಸುವ ಅಗತ್ಯವಿಲ್ಲ. ಒಂದು ವೇಳೆ ಕೆವೈಸಿ ಮಾಡಿಸದಿದ್ದರೆ ನಿಮ್ಮ ಸಬ್ಸಿಡಿ ಕಮರ್ಷಿಯಲ್ ಆಗಿ ಬದಲಾಗುತ್ತದೆ ಎಂಬ ಸುದ್ದಿ ಸುಳ್ಳು. ಅಂತವರು ಗೃಹಬಳಕೆಯ ಗ್ರಾಹಕರಾಗಿ ಮುಂದುವರೆಯುತ್ತಾರೆ ಎಂದು ತಿಳಿಸಲಾಗಿದೆ.
ಇನ್ನು ಈ ಬಗ್ಗೆ ಉಜ್ವಲ ಯೋಜನೆಯ ನೋಡಲ್ ಅಧಿಕಾರಿಯಾದ ರಾಹುಲ್ ಕೂಡ ಸ್ಪಷ್ಟನೆ ನೀಡಿದ್ದು, ವೈರಲ್ ಆಗಿರುವ ವಾಟ್ಸಪ್ ಸಂದೇಶದಲ್ಲಿ ಯಾವುದೆ ಸತ್ಯವಿಲ್ಲ. ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡುವುದು. ಅವರು ಮಾತ್ರ ಆಧಾರ ದೃಢೀಕರಿಸಬೇಕು ಎಂದು ತಿಳಿಸಿದ್ದಾರೆ. ಹಾಗಾಗಿ ಉಳಿದ ಗ್ರಾಹಕರು ಗೊಂದಲಕ್ಕೊಳಗಾಗುವುದು ಬೇಡ ಎಂದಿದ್ದಾರೆ.
LPG Ekyc-ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ:
ಈಗಾಗಲೇ ಬಹುತೇಕ ಮನೆಗಳಲ್ಲಿ ಬಳಕೆಗೆ ಸಿಲಿಂಡರ್ಗಳನ್ನು ಉಜ್ವಲ ಯೋಜನೆಯಡಿ ಪಡೆಯುವಾಗ ಇ-ಕೆವೈಸಿ ಮಾಡಿಯೇ ಸಿಲಿಂಡರ್ಗಳನ್ನು ನೀಡಲಾಗುತಿದ್ದು ಬಿಟ್ಟು ಹೋಗಿರುವ ಗ್ರಾಹಕರು ಮಾತ್ರ ಅಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಮೊಬೈಲ್ ನಂಬರ್ ಸಮೇತವಾಗಿ ನೀವು ಪ್ರತಿ ತಿಂಗಳು ಗ್ಯಾಸ್ ನೀಡುವ ಏಜೆನ್ಸಿಯನ್ನು ಭೇಟಿ ಮಾಡಿ ಇ-ಕೆವೈಸಿ ಮಾಡಿಕೊಳ್ಳಿ ಈ ಕುರಿತು ನಿಮ್ಮ ಮನೆಗೆ ಪ್ರತಿ ತಿಂಗಳು ಗ್ಯಾಸ್ ನೀಡಲು ಬರುವ ಗ್ಯಾಸ್ ಏಜೆನ್ಸಿ ಪ್ರತಿನಿಧಿಯ ಬಳಿ ಈ ವಿಚಾರದ ಬಗ್ಗೆ ತಿಳಿಯಿರಿ.
ಇತರೆ ವಿಷಯಗಳು
10.34 ಕೋಟಿ ಜನ್ ಧನ್ ಖಾತೆ ಸ್ಥಗಿತ!! ನೀವು ಖಾತೆ ಹೊಂದಿದ್ದರೆ ತಕ್ಷಣವೇ ಈ ಕೆಲಸ ಮಾಡಿ
ಮತ್ತೆ ಆರಂಭವಾಯ್ತು ಉಚಿತ ಲ್ಯಾಪ್‌ಟಾಪ್ ಯೋಜನೆ..! ಜನವರಿಯಿಂದ ಅರ್ಜಿ ಸಲ್ಲಿಕೆ ಪ್ರಾರಂಭ