ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯ ಸರ್ಕಾರದಲ್ಲಿ ನಡೆದಂತಹ ಸಚಿವ ಸಂಪುಟದಲ್ಲಿ ಹಲವಾರು ಮಹತ್ವದ ತೀರ್ಮಾನ ಕೈಗೊಂಡಿದೆ. ಮುಖ್ಯವಾಗಿ ಬುಡಕಟ್ಟು ಪಂಗಡದವರಿಗೆ ಸಿಹಿ ಸುದ್ದಿ ನೀಡಿದೆ. ಈ ಬಗ್ಗೆ ಬೃಹತ್ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ಕುರಿತು ವಿವರವಾದ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ರಾಜ್ಯ ಸರ್ಕಾರವು ಬುಡಕಟ್ಟು ಪಂಗಡದವರಿಗೆ ಕೂಡ ಸರ್ಕಾರ ಗುಡ್ ನ್ಯೂಸ್ ನೀಡಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ವಾಸಿಸುವ 11 ಬುಡಕಟ್ಟು ಸಮುದಾಯದವರಿಗೆ ಸರ್ಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. 11 ಬುಡಕಟ್ಟು ಪಂಗಡಗಳಾದ 47,759 ಕುಟುಂಬಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ಉಚಿತ ಪೌಷ್ಠಿಕ ಆಹಾರವನ್ನು 6 ತಿಂಗಳ ಬದಲಿಗೆ ಇನ್ಮುಂದೆ 12 ತಿಂಗಳೂ ಸಹ ಉಚಿತ ಪೌಷ್ಠಿಕ ಆಹಾರ ನೀಡಲು 120 ಕೋಟಿ ರೂಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೊರಗ, ಜೇನು ಕುರುಬ, ಕಾಡು ಕುರುಬ, ಬೆಟ್ಟ ಕುರುಬ, ಸೋಲಿಗ, ಎರವ, ಮಲೆ ಕುಡಿಯ, ಸಿದ್ಧಿ, ಹಸಲರು, ಗೌಡಲು, ಗೊಂಡ ಸಹಿತ ಒಟ್ಟು 11 ಪಂಗಡಗಳು ಇದರ ಲಾಭವನ್ನು ಪಡೆಯಲಿವೆ.
ಇದನ್ನೂ ಸಹ ಓದಿ: ನಿರುದ್ಯೋಗಿಗಳಿಗೆ ಗುಡ್ ನ್ಯೂಸ್.!! ಸರ್ಕಾರಿ ಉದ್ಯೋಗಗಳ ಪಟ್ಟಿ ಪ್ರಕಟ; ನೀವೂ ಚೆಕ್ ಮಾಡಿ ಅಪ್ಲೇ ಮಾಡಿ
ಇದಲ್ಲದೇ ಸಚಿವ ಸಂಪುಟದಲ್ಲಿ ಇನ್ನು ಹಲವು ನಿರ್ಣಯಗಳನ್ನು ಕೈಗೊಂಡಿದೆ. ಏಷ್ಯಾನ್ ಬ್ಯಾಂಕ್ ನೆರವಿನೆಡೆ ಮಂಗಳೂರಿನಲ್ಲಿ 125 ಎಂಎಲ್‌ಡಿ ನೀರು ಶುದ್ದೀಕರಣ ಘಟಕ ಸ್ಥಾಪನೆ, KSRTC ಮತ್ತು ವಾಯುವ್ಯ ಸಾರಿಗೆಗಳಿಗೆ 752 ಎಲೆಕ್ಟ್ರಿಕ್ ಬಸ್‌ಗಳಿಗೆ ಕಾರ್ಯಾಚರೆಣೆಗೆ ಅನುಮೋದನೆ, BMTC 20 ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಅನುಮೋದನೆ, ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕಾತಿಗೆ ನಿರ್ಧಾರ, ಸರ್ಕಾರ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 342 ಡಿ ಗ್ರೂಪ್ ನೌಕರರು, 102 ಡಾಟಾ ಎಂಟ್ರಿ ಅಪರೇಟರ್ ಹೊರಗುತ್ತಿಗೆ ಆಧಾರದ ನೇಮಕಾತಿಯಲ್ಲೂ ಮೀಸಲಾತಿ ಅನುಮೋದನೆಗೆ ನಿರ್ಧಾರ ಕೈಗೊಂಡಿದೆ.
ಪಿಯು ಜಂಟಿ ನಿರ್ದೇಶಕರು ಮತ್ತು ಪ್ರಾಂಶುಪಾಲರ ನೇಮಕಾತಿ ತಿದ್ದುಪಡಿ, KPSC – KAE ಪರಿಕ್ಷೆಗಳ ಮೂಲಕ ನೇಮಕಾತಿಗೆ ಸಂಪುಟ ಸಭೆ ಸಮ್ಮತಿ ಸೂಚಿಸಿದೆ. ಇದಲ್ಲದೇ ಕೋವಿಡ್ ಮುಖ್ಯಸ್ಥರಿಗೆ ಗೊತ್ತಿಲ್ಲದೇ ಇಲಾಖೆ ಹಣ ಇತರೆಡೆಗೆ ವರ್ಗಾವಣೆಯಾಗಿರುವ ಕೋವಿಡ್ ನಿರ್ವಹಣೆಗೆ ಪ್ರತ್ಯೇಕ ಸಂಪುಟ ಉಪಸಿಮಿತಿ ರಚಿಸಲು ಮುಖ್ಯಮಂತ್ರಿಗೆ ಅಧಿಕಾರ ನೀಡಲಾಗಿದೆ.
ಇತರೆ ವಿಷಯಗಳು:
ಜ.1 ರಿಂದ ಗ್ಯಾಸ್ ಸಬ್ಸಿಡಿ ಕ್ಯಾನ್ಸಲ್.! ಡಿ. 31 ರ ಒಳಗೆ ಈ ಕೆಲಸ ಕಡ್ಡಾಯ ಅಧಿಕಾರಿಗಳಿಂದ ಸ್ಪಷ್ಟನೆ
ಮತ್ತೆ ಆರಂಭವಾಯ್ತು ಉಚಿತ ಲ್ಯಾಪ್‌ಟಾಪ್ ಯೋಜನೆ..! ಜನವರಿಯಿಂದ ಅರ್ಜಿ ಸಲ್ಲಿಕೆ ಪ್ರಾರಂಭ