rtgh

Scheme

ಗೃಹಲಕ್ಷ್ಮಿಯರಿಗೆ ಹೊಸ ರೂಲ್ಸ್:‌ ಇನ್ಮುಂದೆ ಹಣ ಪಡೆಯಲು ಈ ಕಾರ್ಡ್‌ ಕಡ್ಡಾಯ.!

Published

on

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯುವ ಫಲಾನುಭವಿಗಳು ಇನ್ಮುಂದೆ ತಮ್ಮ ಬಳಿ ಈ ಪಿಂಕ್‌ ಕಾರ್ಡ್‌ ಬಳಸಿಕೊಂಡು ಪ್ರತಿ ತಿಂಗಳು ಹಣ ಜಮಾ ಅಗುವ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಈ ಪಿಂಕ್‌ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ ಮಿಸ್‌ ಮಾಡದೆ ಕೊನೆಯವರೆಗೂ ಓದಿ.

Gruha lakshmi scheme kannada

ಗೃಹಲಕ್ಷ್ಮಿ ಯೋಜನೆ (Gruha lakshmi scheme) ಯ ಮೂಲಕ ಪ್ರತಿ ತಿಂಗಳು ಯಜಮಾನಿಯರ ಖಾತೆಗೆ 2000 ರೂಪಾಯಿಗಲೂ ಜಮಾ ಆಗುತ್ತಿದೆ. ಈ ಯೋಜನೆಯಿಂದ ಪ್ರತಿ ತಿಂಗಳು ಮಹಿಳೆಯರ ಮನೆ ಸಣ್ಣ ಪುಟ್ಟ ಖರ್ಚುಗಳಿಗೆ ನಿಜಕ್ಕೂ ಬಹಳ ಅನುಕೂಲವಾಗುತ್ತಿದೆ ಎನ್ನಬಹುದು.

ಹಾಗೆಯೇ ಈಗಾಗಲೇ 4 ಕಂತುಗಳ ಹಣ ಬಿಡುಗಡೆಯಾಗಿದೆ. 80% ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಆದರೆ ಇನ್ನು 20% ಮಹಿಳೆಯರ ಖಾತೆಗೆ ಇನ್ನು ಹಣ ಜಮಾ ಆಗಿಲ್ಲ. ಹಣ ಜಮಾ ಆಗುವುದು ವಿಳಂಬವಾದರೂ ಎಲ್ಲಾ ಫಲಾನುಭವಿಗಳಿ ಹಣ ವರ್ಗಾವಣೆ ಮಾಡುತ್ತೇವೆ ಎಂದು ಸರ್ಕಾರ ಭರವಸೆ ನೀಡಿದೆ.


ಅದರಂತೆ ಈ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತೊಂದು ಅಪ್ಡೇಟ್‌ ಅನ್ನು ನೀಡಿದೆ. ಇನ್ಮುಂದೆ ಗೃಹಲಕ್ಷ್ಮಿ ಯೋಜನೆಯ ಹಣದ ಮಾಹಿತಿ ಪಡೆದುಕೊಳ್ಳುವ ಬಗ್ಗೆ ಪ್ರತಿ ತಿಂಗಳು ಮಹಿಳೆಯರು ಚಿಂತಿಸಬೇಕಿಲ್ಲ. ಯಾವುದೇ ಬ್ಯಾಂಕ್‌ ಗೆ ಹೋಗಿ ಕಾಯಬೇಕಿಲ್ಲ, ಇದೊಂದು ಕಾರ್ಡ್‌ ನಿಮ್ಮ ಬಳಿ ಇದ್ರೆ ಸಾಕು ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್‌ ಮೂಲಕವೇ ಹಣದ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಪಿಂಕ್ ಕಾರ್ಡ್ ವಿತರಣೆ

ಗೃಹಲಕ್ಷ್ಮಿ ಯೋಜನೆ ಆರಂಭದಲ್ಲಿ ಎಲ್ಲ ಫಲಾನುಭವಿಗಳಿಗೂ ಪಿಂಕ್‌ ಕಾರ್ಡ್‌ ವಿತರಣೆ ಮಾಡುವುದಾಗಿ ಸರ್ಕಾರ ಘೋಷಣೆ ಮಾಡಿತ್ತು, ಆದರೆ ಎಲ್ಲಾ ಗ್ಯಾರಂಟಿ ಯೋಜನೆ (guarantee schemes) ಗಳನ್ನು ಜಾರಿಗೆ ತರುವ ಗೊಂದಲ ಪರಿಹರಿಸಿಕೊಳ್ಳುವುದರಲ್ಲಿಯೇ ಸರ್ಕಾರಕ್ಕೆ ಪಿಂಕ್ ಕಾರ್ಡ್ ವಿತರಣೆ ಮಾಡಲು ಇಷ್ಟು ದಿನ ಸಾಧ್ಯವಾಗಿಲ್ಲ, ಆದರೆ ಇನ್ನೂ ಸ್ವಲ್ಪ ದಿನಗಳಲ್ಲಿ ಎಲ್ಲಾ ಫಲನುಭವಿಗಳಿಗೆ ಪಿಂಕ್‌ ಕಾರ್ಡ್‌ ವಿತರಣೆ ಮಾಡಲಾಗುವುದು.

ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ವಿತರಿಸುವ ಪಿಂಕ್‌ ಕಾರ್ಡ್‌ನಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆಗೆ ಮಹಿಳಾ ಮತ್ತು ಮಕ್ಕಖ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಚ್ಚಾಳ್ಕರ್‌ ಈ ಮೂವರ ಫೋಟೋ ಕಾಣಬಹುದು. ಹಾಗೆಯೇ ಈ ಯೋಜನೆಯ ಹೆಸರು ಮತ್ತು ಎರಡು ಸಾವಿರ ರೂಪಾಯಿ ಎಂದು ಬರೆಯಲಾಗಿರುತ್ತದೆ. ಗುಲಾಬಿ ಅಥವಾ ಪಿಂಕ್ ಬಣ್ಣದಲ್ಲಿ ಇರುತ್ತದೆ.

ಇದನ್ನೂ ಸಹ ಓದಿ: ಈ ಬ್ಯಾಂಕ್‌ ನಲ್ಲಿ ಸಾಲ ಮಾಡಿದ್ರೆ ನಿಮ್ಮ ಸಾಲ ಮನ್ನಾ.! ಕ್ರಿಸ್ಮಸ್‌ ದಿನವೇ ಸಿದ್ದು ಘೋಷಣೆ!!

ಪಿಂಕ್ ಕಾರ್ಡ್ ನಿಂದ ಆಗುವ ಪ್ರಯೋಜನ ಏನು?

ಗೃಹಲಕ್ಷ್ಮಿ ಯೋಜನೆ ಮಹಿಳ ಫಲಾನುಭವಿಗಳು ಪ್ರತಿ ತಿಂಗಳು ಖಾತೆಗೆ ಜಮಾ ಆಗುವ ಹಣದ ಬಗ್ಗೆ ತಮ್ಮ ಬಳಿ ಇರುವ ಪಿಂಕ್‌ ಕಾರ್ಡ್‌ ಮೂಲಕ ಮಾಹಿತಿ ಪಡೆದುಕೊಳ್ಳಬಹುದು.

ಪಿಂಕ್‌ ಕಾರ್ಡ್‌ನಲ್ಲಿ ಕ್ಯೂಆರ್‌ ಕೋಡ್‌ ಸಹ ಇರುತ್ತದೆ. ಇದರ ಮೂಲಕ ಸ್ಕ್ಯಾನ್ ಮಾಡಿದ್ರೆ ನಿಮ್ಮ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ಹಣದ ಬಗ್ಗೆ ಮಾಹಿತಿ ನಿಮಗೆ ಸಿಗುತ್ತೆ, ಅದರ ಜೊತೆಗೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಅಪ್ಡೇಟ್‌ಗಳ ಬಗ್ಗೆ ಮಾಹಿತಿ ತಿಳಿಯುತ್ತದೆ.

ಪಿಂಕ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸಬೇಕೇ?

ಗೃಹಲಕ್ಷ್ಮಿ ಯೋಜನೆಗೆ ಈಗಾಗಲೇ ಸಾಕಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದರು ಖಾತೆಗೆ ಇನ್ನು ಹಣ ಜಮಾ ಅಗಿಲ್ಲ. ಇನ್ನು ಕೆಲವರು ಕಷ್ಟ ಪಟ್ಟು ಖಾತೆಗೆ ಹಣ ಬರುವಂತೆ ಮಾಡಿಕೊಂಡಿದ್ದಾರೆ, ಹಾಗಾಗಿ ಸ್ಮಾರ್ಡ್‌ ಕಾರ್ಡ್‌ ಪಿಂಕ್‌ ಸ್ಮರ್ಟ್‌ ಕಾರ್ಡ್‌ ಗೆ ಮತ್ತೆ ಅರ್ಜಿ ಸಲ್ಲಿಸಬೇಕು ಎಂದು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.

ನೀವು ಈ ಕಾರ್ಡ್‌ ಪಡೆಯಲು ಅರ್ಜಿ ಸಲ್ಲಿಸಲು ಎಲ್ಲಿಯೂ ಹೋಗಬೇಕಾಗಿಲ್ಲ, ಮನೆ ಬಾಗಿಲಿಗೆ ಬಂದು ಪಿಂಕ್‌ ಕಾರ್ಡ್‌ ವಿತರಣೆ ಮಾಡುತ್ತಾರೆ ಎಂದು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮಾಹಿತಿ ನೀಡಿದ್ದಾರೆ.

ಅನ್ನದಾತರ ಭಾರ ಇಳಿಸಿದ ಸರ್ಕಾರ.!! ಅಂತು ಬಂತು ಹೊಸ ಸ್ಕೀಮ್‌; ತಡಮಾಡದೇ ಇಂದೇ ಅಪ್ಲೇ ಮಾಡಿ

ಅನ್ನದಾತರ ಭಾರ ಇಳಿಸಿದ ಸರ್ಕಾರ.!! ಅಂತು ಬಂತು ಹೊಸ ಸ್ಕೀಮ್‌; ತಡಮಾಡದೇ ಇಂದೇ ಅಪ್ಲೇ ಮಾಡಿ

Treading

Load More...