ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯಾದ್ಯಂತ ರೇಷನ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಉತ್ತಮವಾಗಿರುವ ಹೊಸ ಯೋಜನೆಗಳನ್ನು ಪರಿಚಿಯಿಸಿ ಹೊಸ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಅದರಲ್ಲಿಯೂ BPL ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಸರ್ಕಾರಿದಂದ ಉತ್ತಮವಾಗಿರುವ ಯೋಜನೆಗಳನ್ನು ಪರಿಚಯಿಸಿ ಅದರ ಪ್ರಯೋಜನವನ್ನು ಹೊಂದಿರುವವರಿಗೆ ಅನ್ನಭಾಗ್ಯ ಯೋಜನೆಯ ಮೂಲಕ ಕೇಂದ್ರ ಸರ್ಕಾರ ನೀಡುತ್ತಿರುವಂತಹ 5 ಕೆ.ಜಿ ಉಚಿತ ಅಕ್ಕಿಯೊಂದಿಗೆ ರಾಜ್ಯ ಸರ್ಕಾರ ಕೂಡ 5 ಕೆ.ಜಿ ಅಕ್ಕಿಯ ಬದಲಾಗಿ ಪ್ರತಿ ಕೆ.ಜಿಗೆ 34 ರೂಪಾಯಿಯಂತೆ 170 ರೂಪಾಯಿಗಳನ್ನು ಫಲಾನುಭವಿಯ ಖಾತೆಗೆ ನೇರವಾಗಿ ಜಮಾ ಮಾಡುತ್ತಿದೆ.
ಸರ್ಕಾರ ಅನ್ನಭಾಗ್ಯ ಯೋಜನೆಯ ಮೂಲಕ ಜನರಿಗೆ ಅಕ್ಕಿಯನನು ನೀಡುವ ಬದಲಾಗಿ ಹಣವನ್ನು ಖಾತೆಗೆ ಡಿಬಿಟಿ ಮೂಲಕ ಹಂಚಿಕೆ ಮಾಡುತ್ತಿದೆ. ಕಳೆದ ತಿಂಗಳಿನಿಂದ ಇದುವವರೆಗೆ ರಾಜ್ಯದಲ್ಲಿ ಫಲಾನುಭವಿಗಳ ಕುಟುಂಬಕ್ಕೆ ಹೆಚ್ಚುವರಿ ಅಕ್ಕಿಯನ್ನು ರಾಜ್ಯ ಸರ್ಕಾರಕ್ಕೆ ಕೊಡಲು ಆಗದ ಕಾರಣ ಈಗಲು ಕೂಡ ಅಕ್ಕಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಇನ್ನು ಮುಂದೆ ಇಂಥವರ ಖಾತೆಗೆ ಒಂದು ರೂಪಾಯಿ ಹಣವನ್ನು ಸರ್ಕಾರ ಹಾಕುವುದಿಲ್ಲ.
ಕೆವೈಸಿ ಆಗದೆ ಇದ್ದರೆ ಜಮಾ ಆಗುವುದಿಲ್ಲ ಅನ್ನಭಾಗ್ಯ ಯೋಜನೆಯ ಹಣ
ಫಲಾನುಭವಿಗಳ ಕುಟುಂಬದ ಸದಸ್ಯರ ಖಾತೆಗೆ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ಹಣವನ್ನು ಖಾತೆಗೆ ಜಮಾ ಆಗಬೇಕು ಅಂದ್ರೆ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದುವರೆಗೂ ಖುಡ ಸಾಕಷ್ಟು ಜನ ಇ-ಕೆವೈಸಿ ಮಾಡಿಸಿಕೊಳ್ಳದೆ ಇರುವುದರಿಂದ ಅವರ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.
ಇದನ್ನು ಸಹ ಓದಿ: ತೋಟಗಾರಿಕೆ ಉಪಕರಣಗಳು ಅಗ್ಗದಲ್ಲಿ ಲಭ್ಯ! ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ
ನಿಮ್ಮ ಖಾತೆಯಲ್ಲಿ ಇರುವ ಲೋಪ ದೋಷಗಳನ್ನು ತಕ್ಷಣ ಸರಿಪಡಿಸಿಕೊಳ್ಳಿ!
ಮನೆಯ ಯಜಮಾನನ OR ಯಜಮಾನಿಯ ಹೆಸರಿನಲ್ಲಿ ರೇಷನ್ ಕಾರ್ಡ್ ಇದ್ದರೆ ಆ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಲಾಗುತ್ತದೆ. ರೇಷನ್ ಕಾರ್ಡ್ನಲ್ಲಿ ಮತ್ತು ಬ್ಯಾಂಕ್ ನಲ್ಲಿ ಇರುವ ಹೆಸರು ಒಂದಕ್ಕೊಂದು ಹೊಂದಾಣಿಕೆಯಾಗಬೇಕು.
ಆಧಾರ್ ಕಾರ್ಡ್ ಜೊತೆಗೆ ರೇಷನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಕೂಡ ಲಿಂಕ್ ಆಗಿರಲೇಬೇಕು. ಈ ರೀತಿ ಮಾಡಿಕೊಳ್ಳದೆ ಖಾತೆಯಲ್ಲಿ ಸಮಸ್ಯೆ ಉಳಿದಿದ್ದರೆ ಅಂತಹವರ ಖಾತೆಗೆ ಅಕ್ಕಿ ಹಣ ಬರಲು ಸಾಧ್ಯವೇ ಇಲ್ಲ.
ಅನ್ನಭಾಗ್ಯ ಯೋಜನೆಯಲ್ಲಿ ಕಳೆದ 4 ತಿಂಗಳುಗಳಿಂದಲೂ ಕೂಡ ಫಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಲಾಗುತ್ತಿದೆ. ನಿಮ್ಮ ಖಾತೆಗೆ ಯಾವುದಾದರೂ ಕಂತಿನ ಹಣವು ಬಾರದೇ ಇದ್ದರೆ ನಿಮ್ಮ ಖಾತೆಯಲ್ಲಿ ಇರುವಂತಹ ಸಮಸ್ಯೆ ಇದಕ್ಕೆ ಕಾರಣವಾಗಿರುತ್ತದೆ.
ನೀವು ಮೊದಲು ನಿಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕ ನೀವು E-kyc ಯನ್ನು ಚೆಕ್ ಮಾಡಿಕೊಳ್ಳಬಹುದು. ಲಿಂಕ್ ಆಗಿದ್ದರೆ ನಿಮ್ಮ ಬ್ಯಾಂಕ್ನ ವಿವರಗಳನ್ನು ಇಲ್ಲಿ ನೋಡಬಹುದು. ಲಿಂಕ್ ಆಗದಿದ್ದರೆ ತಕ್ಷಣವೇ ಬ್ಯಾಂಕ್ಗೆ ಹೋಗಿ ಈ ಕೆಲಸ ಮಾಡಿರಿ.
ಇನ್ನು ಕಳೆದ ಕೆಲವು ತಿಂಗಳುಗಳಿಂದ ರೇಷನ್ ಪಡೆದುಕೊಳ್ಳದೆ ಇರುವ ಕುಟುಂಬಗಳಿಗೂ ಕೂಡ ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಲಾಗುವುದಿಲ್ಲ. ಎಂದು ಆಹಾರ ಇಲಾಖೆಯ ಸಚಿವರು ತಿಳಿಸಿದ್ದಾರೆ. ಈಗಾಗಲೇ 4ರಿಂದ 5 ತಿಂಗಳುಗಳಲ್ಲಿ ಒಮ್ಮೆಯೂ ಪಡಿತರ ಪಡೆದುಕೊಳ್ಳದೆ ಇದ್ದರೆ ಈ ತಿಂಗಳಿನಿಂದ ಪಡಿತರ ತೆಗೆದುಕೊಂಡ ನಂತರ ನಿಮಗೆ ಅಕ್ಕಿ ಹಣ ಸಿಗುತ್ತದೆ. ಇಲ್ಲವಾಗದರೆ ನಿಮಗೆ ಅಕ್ಕಿ ದುಡ್ಡು ನಿಮ್ಮ ಖಾತೆಗೆ ಜಮಾವಾಗುವುದಿಲ್ಲ. ಅದೂ ಅಲ್ಲದೇ ರೇಷನ್ ಕಾರ್ಡ್ ಕೂಡ ರದ್ದಾಗುತ್ತದೆ.
ಇತರೆ ವಿಷಯಗಳು:
ಹೊಸ ವರ್ಷದಲ್ಲಿ ನಿರುದ್ಯೋಗಿಗಳಿಗೆ ಸಿಕ್ತು ದೊಡ್ಡ ಉಡುಗೊರೆ: ಸರ್ಕಾರದ ಘೋಷಣೆ
ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಜಾಕ್ಪಾಟ್: ತುಟ್ಟಿಭತ್ಯೆಯ ಜೊತೆ HRA ಯಲ್ಲಿಯೂ ಹೆಚ್ಚಳ!