ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಕಾಂಗ್ರಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಕೂಡ ಒಂದು. ಈ ಯೋಜನೆಯಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯನಿಗೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ. ಇದರಲ್ಲಿ 5 ಕೆಜಿ ಅಕ್ಕಿ ಹೆಚ್ಚುವರಿ 5 ಕೆಜಿ ಅಕ್ಕಿಯಬದಲು ಹಣ ನೀಡಲಾಗುತ್ತಿದೆ. ಈಗ ಈ ಹಣದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ. ಇದರ ಬಗ್ಗೆ ನಾವು ನಿಮಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಅನ್ನಭಾಗ್ಯ ಯೋಜನೆ ಪ್ರಾರಂಭದಲ್ಲಿ ಘೋಷಣೆ ಮಾಡಿದಂತೆ ಹೆಚ್ಚುವರಿ 5 Kg ಅಕ್ಕಿ ವಿತರಿಸಲು ಅಕ್ಕಿ ಎಲ್ಲಿಯೂ ಸಿಗುತ್ತಿಲ್ಲ. ಸದ್ಯಕ್ಕೆ ಹೆಚ್ಚುವರಿ ಅಕ್ಕಿಯ ಬದಲಿಗೆ ಹಣ ಪಾವತಿಸುವುದನ್ನು ಮುಂದುವರೆಸಲಾಗುವುದು ಎಂದು ಆಹಾರ ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.
ಇದನ್ನೂ ಸಹ ಓದಿ: ಎಲ್ಲಾ ರೈತರಿಗೆ 6000 ರೂ ಬದಲಿಗೆ 8000 ರೂ. 8.5 ಕೋಟಿ ರೈತರಿಗೆ ಕಿಸಾನ್ 16 ನೇ ಕಂತು ಬಿಡುಗಡೆ!
ದೊಡ್ಡಬಳ್ಳಾಪುರದ ಗೂಳ್ಯ ಗ್ರಾಮದಲ್ಲಿ ಮಾತಾನಾಡಿದ ಅವರು, ಆಂಧ್ರಪ್ರದೇಶದೊಂದಿಗೆ ಅಕ್ಕಿ ಖರೀದಿಗಾಗಿ ಮಾತುಕತೆ ನಡೆಸಲಾಗಿದ್ದು, ಅಲ್ಲಿಯೂ ಅಕ್ಕಿಯ ಕೊರತೆ ಇರುವ ಕಾರಣ, ಇನ್ನು ಇದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಹೆಚ್ಚುವರಿ ಅಕ್ಕಿ ವಿತರಿಸುವುದು ಈ ಬಾರೀಯೂ ಕಷ್ಟವಾಗಲಿದೆ ಎಂದು ಹೇಳಿದ್ದಾರೆ.
ಫಲಾನುಭವಿಗಳಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತಿದೆ. ಮುಂಗಾರು ಕೊರತೆಯಾಗಿ ಬರ ಪರಿಸ್ಥಿತಿ ಇರುವುದರಿಂದ ಸಾಕಷ್ಟು ಜನರು ಅಕ್ಕಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಡುತ್ತಿದ್ದಾರೆ. ಸದ್ಯದ ಪರಿಸ್ಥಿಯಲ್ಲಿ ಹೆಚ್ಚುವರಿ ಅಕ್ಕಿ ವಿತರಣೆ ಮಾಡುವುದು ಕಷ್ಟವಾಗಿದೆ. ಹೆಚ್ಚುವರಿ ಅಕ್ಕಿ ವಿತರಣೆ ಮಾಡಲು ಅಕ್ಕಿ ಎಲ್ಲಲೂ ಸಿಗದ ಕಾರಣ ಹಣ ಕೊಡುವುದನ್ನೇ ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.
ಇತರೆ ವಿಷಯಗಳು:
ಮನೆಯಲ್ಲಿ ಕುಳಿತು 5 ಲಕ್ಷಕ್ಕಿಂತ ಹೆಚ್ಚು ಗಳಿಸಬೇಕಾ? ಹಾಗಿದ್ರೆ ಪೋಸ್ಟ್ ಆಫೀಸ್ ಸ್ಕೀಮ್‌ನ ಲಾಭ ಪಡೆಯಿರಿ
ಉದ್ಯೋಗಿಗಳಿಗೆ ಬಿಗ್ ನ್ಯೂಸ್: ಪಿಂಚಣಿ ಹೆಚ್ಚಳ ಘೋಷಣೆ ಮಾಡಿದ ಸರ್ಕಾರ!