ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, BPL ರೇಷನ್ ಕಾರ್ಡ್ಗಳನ್ನು ರದ್ದು ಪಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food and Civil Supply department) ನಿರ್ಧರ ಮಾಡಿದೆ. ಸದ್ದು ಗದ್ದಲ ಇಲ್ಲದೆ ಲಕ್ಷಾಂತರ ಪಡಿತರ ಚೀಟಿಗಳನ್ನು ರದ್ದಾಗುತ್ತಿವೆ. ಇದರ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ರಾಜ್ಯ ಸರ್ಕಾರ ಒಂದು ಕಡೆ ಹೊಸ ಹೊಸ ಯೋಜನೆಗಳ ಮೂಲಕ, ಜನರಿಗೆ ಸಂತೋಷ ನೀಡುತ್ತಿದ್ದರೆ, ಇನ್ನೊಂದು ಕಡೆ ಸುದ್ದಿ ಇಲ್ಲದೆ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುತ್ತಿದೆ. ಯಾರು ಯಾವಾಗ ತಮ್ಮ ರೇಷನ್ ಕಾರ್ಡ್ ಕಳೆದುಕೊಳ್ಳುತ್ತಾರೆ ಎಂದು ಊಹಿಸುವುದು ಕೂಡ ಕಷ್ಟ.
ರೇಷನ್ ಕಾರ್ಡ್ ವಿಚಾರದಲ್ಲಿ ಕಟ್ಟುನಿಟ್ಟಿನ ನಿರ್ಧಾರ!
ಇಲ್ಲಿವರೆಗೆ ರೇಷನ್ ಕಾರ್ಡ್ (Ration Card) ಬೇಕಾಬಿಟ್ಟಿಯಾಗಿ ಪ್ರತಿಯೊಬ್ಬರಿಗೂ ಕೂಡ ವಿತರಣೆ ಮಾಡಲಾಗುತ್ತಿತ್ತು. ನಿಜವಾಗಿ ಹೇಳಬೇಕು ಎಂದರೆ BPL ರೇಷನ್ ಕಾರ್ಡ್ ಕೇವಲ ಬಡ ರೇಖೆಗಿಂತ ಕೆಳಗಿರುವವರು ಮಾತ್ರ ಬಳಕೆ ಮಾಡತಕ್ಕದ್ದು.
ಆದರೆ ಉಳ್ಳವರು ಕೂಡ BPL ಪಡಿತರ ಚೀಟಿ ಬಳಸುತ್ತಿದ್ದಾರೆ. ಸರ್ಕಾರ ಈ ವಿಷಯ ಇತ್ತೀಚಿಗೆ ಗಮನಕ್ಕೆ ಬಂದಿದೆ. ಹಾಗಾಗಿ 20216ರ ಪಡಿತರ ಚೀಟಿ ನಿಯಮಗಳನ್ನು ಉಲ್ಲಂಘಿಸಿ, ಮಾನದಂಡದ ಒಳಗಡೆ ಬಾರದೆ ಇರುವ BPL ಕಾರ್ಡ್ ರದ್ದುಪಡಿ ಕೆಲಸವನ್ನು ಬಹಳ ವೇಗವಾಗಿ ಸರ್ಕಾರ ನಡೆಸುತ್ತಿದೆ.
ಲಕ್ಷಾಂತರ ಬಿಪಿಎಲ್ ಕಾರ್ಡ್ ರದ್ದು!
ಈಗಾಗಲೇ ಸರ್ಕಾರ ಲಕ್ಷಾಂತರ BPL ಕಾರ್ಡ್ ರದ್ದುಪಡಿ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದೆ ಯಾವಾ ಮಾನದಂಡದ ಮೇಲೆ ಅಥವಾ ಯಾವ ರೀತಿ ಪರಿಶೀಲನೆ ಮಾಡಿ ಬಿಪಿಎಲ್ ಪಡಿತರ ಚೀಟಿ ನಿಷ್ಕಿಯಗೊಳಿಸಲಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟನೆ ಇಲ್ಲ.
ಇದನ್ನೂ ಸಹ ಓದಿ: ಫೆಬ್ರವರಿ 1 ರಿಂದ ಹೊಸ ನಿಯಮ! ಪಿಂಚಣಿದಾರರಿಗೆ ಈ ರೂಲ್ಸ್ ಅನ್ವಯ
ಬಹುಶ: ಸರ್ಕಾರಿ ನೌಕರಿಯಲ್ಲಿ ಇರುವವರು ಅಥವಾ ಆದಾಯ ತೆರಿಗೆ ಪಾವತಿ ಮಾಡುವವರು ಉಳ್ಳವರು ಎಂದು ಪರಿಗಣಿಸಿ ಅಂಥವರ ಬಳಿ ಇರುವ ಕಾರ್ಡ್ ರದ್ದುಪಡಿ ಮಾಡಬಹುದು.
ಯಾರಿಗೆ ಬಿಪಿಎಲ್ ರೇಷನ್ ಕಾರ್ಡ್ ಕೇವಲ ಒಂದು ಗುರುತಿನ ಚೀಟಿಯಾಗಿ ಮಾತ್ರ ಬೇಕು, ಯಾವುದೇ ಪಡಿತರ ವಸ್ತುಗಳನ್ನು ಪಡೆದುಕೊಳ್ಳವುದಿಲ್ಲ ಎಂದುಕೊಳ್ಳುತ್ತಾರೋ ಅಂತವರು ತಕ್ಷಣ ತಮ್ಮ BPL ಕಾರ್ಡ್ ಅನ್ನು ಸಂಬಂಧ ಪಟ್ಟ ಇಲಾಖೆಗೆ ಸರೆಂಡರ್ ಮಾಡಿದ್ರೆ ಒಳ್ಳೆಯದು ಎಂದು ಸರ್ಕಾರ ತಿಳಿಸಿದೆ.
ಯಾಕೆಂದರೆ ಉಳ್ಳವರು ಪಡೆದುಕೊಂಡಿರುವ BPL ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವವರಿಗೆ ಹಾಗೂ ಅಗತ್ಯ ಇರುವವರಿಗೆ ವಿತರಣೆ ಮಾಡಬಹುದು ಎನ್ನುವುದು ಸರ್ಕಾರ ಉದ್ದೇಶವಾಗಿದೆ.
ಈಗಾಗಲೇ ಲಕ್ಷಾಂತರ ಅರ್ಜಿಗಳು ಸರ್ಕಾರಕ್ಕೆ ಸಂದಾಯ ಆಗಿವೆ. ಈ ಎಲ್ಲಾ BPL ಹಾಗೂ ಇತರೆ ರೇಷನ್ ಕಾರ್ಡ್ ಅರ್ಜಿಗಳನ್ನು ಸರ್ಕಾರ ಒಂದೊಂದಾಗಿ ಪರಿಶೀಲನೆ ನಡೆಸುತ್ತಿದ್ದು, ಸದ್ಯದಲ್ಲಿ ಹೊಸ ಪಡಿತರ ಚೀಟಿ ವಿತರಣೆಗೂ ಕೂ ಚಿಂತನೆ ನಡೆಸಿದೆ, ಹಾಗಾಗಿ ಎಲ್ಲವನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೆಲವು ರೇಷನ್ ಕಾರ್ಡ್ ರದ್ದುಗೊಳಿಸಿ ಇನ್ನು ಕೆಲವು ಹೊಸ ರೇಷನ್ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ.
ಬಿಪಿಎಲ್ ಕಾರ್ಡ್ ಉಳಿಸಿಕೊಳ್ಳಲು ಏನು ಮಾಡಬೇಕು!
ನಿಮ್ಮ ಮನೆಯಲ್ಲಿ ಸರ್ಕಾರಿ ಕೆಲಸದಲ್ಲಿ ಇರುವ ಸದಸ್ಯ ಅಥವಾ ಆದಾಯ ತೆರಿಗೆ ಪಾವತಿ ಮಾಡುವ ಸದಸ್ಯ ಇದ್ದರೆ ಅವರ ಹೆಸರನ್ನು ರೇಷನ್ ಕಾರ್ಡ್ ನಿಂದ ತೆಗೆದು ಹಾಕುವುದರ ಮೂಲಕ ರೇಷನ್ ಕಾರ್ಡ್ ಕ್ಯಾನ್ಸಲ್ ಆಗುವುದನ್ನು ತಡೆಗಟ್ಟಬಹುದು. ಅಥವಾ BPL ಕಾರ್ಡ್ ಬದಲು APL ಕಾರ್ಡ್ಗೆ ಬದಲಾಯಿಸಿಕೊಳ್ಳಲು ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಕಾರ್ಡ್ ಕ್ಯಾನ್ಸಲ್ ಆಗದಂತೆ ಉಳಿಸಿಕೊಳ್ಳಬಹುದು.
ಇತರೆ ವಿಷಯಗಳು:
‘ಡ್ರೋನ್ ಪ್ರತಾಪ್’ ವಿರುದ್ಧ 2.50 ಕೋಟಿ ರೂ. ಮಾನನಷ್ಟ ಮೊಕದ್ದಮೆ..!
ಸರ್ಕಾರದಿಂದ ಪ್ರತಿ ಮನೆಗೂ ಉಚಿತ ಸೌರ ಪಂಪ್ ವಿತರಣೆ.! ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ