rtgh

News

ಬಜೆಟ್‌ಗೂ ಮುನ್ನ ಅಗ್ಗವಾಯ್ತು ಅಡುಗೆ ಎಣ್ಣೆ.! ಸರ್ಕಾರದಿಂದ ಹೊಸ ಬೆಲೆ ನಿಗದಿ

Published

on

ಹಲೋ ಸ್ನೇಹಿತರೇ, ಅಡುಗೆ ಎಣ್ಣೆಯ ಅಂತರರಾಷ್ಟ್ರೀಯ ಬೆಲೆಯ ಪ್ರಕಾರ ತಮ್ಮ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಲು ತೈಲ ಕಂಪನಿಗಳನ್ನು ಸರ್ಕಾರ ಕೇಳಿದೆ. ಇದಕ್ಕೆ ಒಪ್ಪಿದ ಕಂಪನಿಗಳು ಬೆಲೆಯಲ್ಲಿ ಎಷ್ಟು ಇಳಿಕೆ ಮಾಡಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

cooking oil price decrease

ಮಧ್ಯಂತರ ಬಜೆಟ್‌ಗೂ ಮುನ್ನ ಅಡುಗೆ ಮನೆ ಬಜೆಟ್‌ಗೆ ಸಂಬಂಧಿಸಿದ ಸಮಾಧಾನದ ಸುದ್ದಿ. ಅಸೋಸಿಯೇಷನ್ ​​ಆಫ್ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಪ್ರಕಾರವಾಗಿ, ಅಡುಗೆ ಎಣ್ಣೆಯ ಅಂತರರಾಷ್ಟ್ರೀಯ ಬೆಲೆಯ ಪ್ರಕಾರ ತಮ್ಮ ಉತ್ಪನ್ನಗಳ ಬೆಲೆಯನ್ನು ಕಡಿಮೆ ಮಾಡಲು ತೈಲ ಕಂಪನಿಗಳಿಗೆ ಸರ್ಕಾರ ಕೇಳಿದೆ. ಅಂದರೆ ಅಡುಗೆ ಎಣ್ಣೆಯ ಬೆಲೆ ಕಡಿಮೆಯಾಗಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಆದರೆ, ತೈಲ ಬೆಲೆಯಲ್ಲಿ ತಕ್ಷಣಕ್ಕೆ ಇಳಿಕೆ ಸಾಧ್ಯವಿಲ್ಲ ಎಂದು ಕಂಪನಿಗಳು ತಿಳಿಸಿವೆ.

ಸಾಸಿವೆ ಬೆಳೆ ಕಟಾವು ಪ್ರಾರಂಭ
ಮಾರ್ಚ್ ವರೆಗೆ ಚಿಲ್ಲರೆ ದರ ಇಳಿಕೆ ಸಾಧ್ಯವಿಲ್ಲ ಎಂದು ತೈಲ ಕಂಪನಿಗಳು ಹೇಳಿಕೆ ನೀಡಿವೆ. ಇದರ ನಂತರ, ಸಾಸಿವೆ ಬೆಳೆ ಕಟಾವು ಆರಂಭವಾಗುತ್ತದೆ. ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾದ ಅಧ್ಯಕ್ಷರಾದ ಅಜಯ್ ಜುಂಜುನ್‌ವಾಲಾ ಮಾತನಾಡಿ,  ಸೋಯಾಬೀನ್, ಸೂರ್ಯಕಾಂತಿ & ತಾಳೆ ಎಣ್ಣೆಯ ಮೇಲಿನ MRP ಅಂತರರಾಷ್ಟ್ರೀಯ ದರ ಕುಸಿತಕ್ಕೆ ಅನುಗುಣವಾಗಿ ಮಾಡಲಾಗಿಲ್ಲ ಎಂದು ‘ಗ್ರಾಹಕ ವ್ಯವಹಾರಗಳ ಸಚಿವಾಲಯದ ಪರವಾಗಿ ತಿಳಿಸಿದ್ದಾರೆ. ಆದರೆ, ಸದ್ಯ ಬೆಲೆ ಕಡಿಮೆಗೆ ಅವಕಾಶವಿಲ್ಲ ಎಂದು ಉದ್ಯಮಿಗಳು ತಿಳಿಸಿದ್ದಾರೆ ಎಂದು ಹೇಳಿಲಾಗಿದೆ. 


ಬೆಲೆಯಲ್ಲಿ ಭಾರೀ ಹೆಚ್ಚಿಗೆ ಅಥವಾ ಕಡಿಮೆಯಾಗಿಲ್ಲ ಎಂದು ಅದಾನಿ ವಿಲ್ಮಾರ್ ಸಿಇಒ ಅಂಗ್ಶು ಮಲ್ಲಿಕ್ ತಿಳಿಸಿದ್ದಾರೆ. ಅಡುಗೆ ಎಣ್ಣೆ ದರವು ಸ್ಥಿರವಾಗಿದೆ. ಪ್ರಸ್ತುತ ಬೆಲೆ ಪ್ರವೃತ್ತಿಗಳಿಗೆ ಅನುಗುಣವಾಗಿ ನಮ್ಮ MRPಪ್ರತಿ ತಿಂಗಳು ಪರಿಷ್ಕರಣೆಯಾಗುತ್ತದೆ. ಬೆಲೆಗಳಲ್ಲಿ ತಕ್ಷಣದ ಸುಧಾರಣೆಯನ್ನು ನಾವು ನಿರೀಕ್ಷಣೆ ಮಾಡುವುದಿಲ್ಲ. ನಾವು ಅಂತರಾಷ್ಟ್ರೀಯ ಸರಕುಗಳ ಬೆಲೆಗಳ ಮೇಲೆ ನಿಗಾ ಇಡುತ್ತೇವೆ & ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. 

3-4 % ದಷ್ಟು ಇಳಿಕೆ ಸಾಧ್ಯತೆ  :
ಡಿಸೆಂಬರ್ ನಲ್ಲಿ ದರದಲ್ಲಿ ಶೇ.10ರಷ್ಟು ಇಳಿಕೆಯಾಗಿದೆ. ಜನವರಿಯಲ್ಲಿ ದರಗಳು ಮತ್ತೆ 8% ಏರಿಕೆಯಾಗಲಿದೆ ಎಂದು ತೈಲ ಬ್ರೋಕರೇಜ್ ಕಂಪನಿ ಸನ್ ವಿನ್ ಗ್ರೂಪ್ ನ CEO ಸಂದೀಪ್ ಬಜೋರಿಯಾ ಹೇಳಿದ್ದಾರೆ. ಹೆಚ್ಚಿನ ಕಂಪನಿಗಳು ಕೇವಲ 3-4% ರಷ್ಟು ದರವನ್ನು ಕಡಿತಗೊಳಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇತರೆ ವಿಷಯಗಳು

ಪಿಎಂ ಆವಾಸ್ ಯೋಜನೆ ಹೊಸ ಪಟ್ಟಿ ಬಿಡುಗಡೆ.! ನಿಮ್ಮ ಹೆಸರಿದಿಯಾ ಈ ಲಿಂಕ್‌ನಲ್ಲಿ ಚೆಕ್‌ ಮಾಡಿಕೊಳ್ಳಿ

ಫೆ.1 ರಂದು ಹಿರಿಯ ನಾಗರಿಕರಿಗೆಲ್ಲಾ ಸಿಹಿ ಸುದ್ದಿ!! ಮಿತಿಯನ್ನು 25,000 ರೂ.ನಿಂದ 50,000 ರೂ.ಗೆ ಏರಿಕೆ

Treading

Load More...