ಹಲೋ ಸ್ನೇಹಿತರೇ, ಅತಿವೃಷ್ಟಿ & ಅನಾವೃಷ್ಟಿ ಉಂಟಾಗಿ ಆಗುವ ಬೆಳೆ & ಆಸ್ತಿ-ಪಾಸ್ತಿ ನಷ್ಟಕ್ಕೆ ರಾಜ್ಯ ಸರ್ಕಾರದಿಂದ ಪರಿಹಾರವನ್ನು ನೀಡಲಾಗುವುದು. ಈ ವೆಬ್ಸೈಟ್ ನಲ್ಲಿ ಬೆಳೆ ಪರಿಹಾರದ ಹಣ ಜಮೆಯಾದ ಫಲಾನುಭವಿ ರೈತರ ಪಟ್ಟಿಯನ್ನು ಪ್ರಕಟಿಸಲಾಗಿದೆ ಆದ್ದರಿಂದ ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.
ಸಾರ್ವಜನಿಕರು ಈ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ವಿವಿಧ ಬಗ್ಗೆಯ ಪರಿಹಾರ ಅರ್ಜಿಗಳ ಸ್ಥಿತಿ & ಹಣ ವರ್ಗಾವಣೆ ಮಾಹಿತಿಯನ್ನು ತಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದಾಗಿದೆ.
ಈ ಜಾಲತಾಣವು ಕಂದಾಯ ಇಲಾಖೆಯಿಂದ ನಿರ್ವಹಿಸಲ್ಪಟ್ಟಿದ್ದು ಅತೀಯಾದ ಮಳೆಯಿಂದ & ಪ್ರಕೃತಿ ವಿಕೋಪಗಳಿಂದ ಸಾರ್ವಜನಿಕರ ಮನೆ, ಅಸ್ತಿ-ಪಾಸ್ತಿ & ಬೆಳೆ ಹಾನಿಯ ಸಂದರ್ಭದಲ್ಲಿ ಪಾರದರ್ಶಕವಾಗಿ ಪರಿಹಾರದ ಮೊತ್ತವನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು “ಪರಿಹಾರ ತಂತ್ರಾಂಶ” ಬಳಕೆ ಮಾಡಲಾಗುವುದು.
ಯಾವುದಕ್ಕೆಲ್ಲಾ ಪರಿಹಾರವನ್ನು ನೀಡಲಾಗುವುದು?
- ಬರ ಪರಿಹಾರ.
- ಪ್ರವಾಹ ಮತ್ತು ಹೆಚ್ಚು ಮಳೆಯಿಂದಾಗುವ ಹಾನಿ ಪರಿಹಾರ.
- ರೋಗ-ಕೀಟಗಳಿಂದ ಉಂಟಾಗುವ ಹಾನಿ.
- ಭೂ-ಕುಸಿತಕ್ಕೆ.
ಹಣ ಬಿಡುಗಡೆಯಾದ ಫಲಾನುಭವಿ ರೈತರ ಪಟ್ಟಿ ಪಡೆಯುವ ವಿಧಾನ:
Step-1: ಈ ಲಿಂಕ್ Parihara status check ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ “ಪರಿಹಾರ” ಭೇಟಿ ಮಾಡಿ. ಬಳಿಕ ಇಲ್ಲಿ ನಿಮ್ಮ ಜಿಲ್ಲೆ, ಹಳ್ಳಿ, ತಾಲ್ಲೂಕು, ಹೋಬಳಿ, ಹೆಸರನ್ನು ಆಯ್ಕೆ ಮಾಡಿಕೊಂಡು ನೀವು ನೋಡಬೇಕಾದ ವರ್ಷವನ್ನು ಆಯ್ಕೆ ಮಾಡಿಕೊಳ್ಳಬೇಕು.
Step-2: ನಂತರ ಮುಂಗಾರು ಹಿಂಗಾರು ಬೇಸಿಗೆ ಇವುಗಳಲ್ಲಿ ಒಂದು ಹಂಗಾಮ ಆಯ್ಕೆ ಮಾಡಿ ಪರಿಹಾರದ ವಿಧ ಆಯ್ಕೆ ಮಾಡಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹಳ್ಳಿಯ ಪರಿಹಾರ ಹಣ ಜಮಾ ಆಗಿರುವ ರೈತರ ಫಲಾನುಭವಿ ಪಟ್ಟಿಯನ್ನು ನೋಡಿ.
ವಿಶೇಷ ಸೂಚನೆ: ಪರಿಹಾರದ ವಿಧ ಆಯ್ಕೆಯಲ್ಲಿ Flood ಎಂದರೆ ಹೆಚ್ಚು ಮಳೆಯಿಂದ ಆಗಿರುವ ಹಾನಿ “Drought” ಎಂದರೆ ಮಳೆ ಕೊರತೆಯಿಂದ ಬರ ಉಂಟಾಗುವುದು “Heavy rain” ಹಾನಿ ಎಂದರೆ ಅತೀಯಾದ ಮಳೆಯಿಂದ ಆದ ಹಾನಿ.
ಪರಿಹಾರ ಪಟ್ಟಿಯಲ್ಲಿ ಫಲಾನುಭವಿಗಳ ರೈತರ ಹೆಸರು, ಅಧಾರ್ ಕಾರ್ಡ್ ಸಂಖ್ಯೆಯ ಕೊನೆಯ 4 ನಂಬರ್ & ಜಮೆಯಾದ ಪರಿಹಾರದ ಮೊತ್ತ, ಪಾವತಿ ಸ್ಥಿತಿ ಕಾಣಬಹುದು.
Step-3: ನಂತರ”View Status” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಯಾವ ಸರ್ವೆ ನಂಬರ್ ಗೆ ಪರಿಹಾರ ಹಣ ಜಮೆಯಾಗಿದೆ ಅನ್ನುವ ಮಾಹಿತಿಯನ್ನು ನೋಡಬಹುದು.
ಪರಿಹಾರ ಅರ್ಜಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡುವ ವಿಧಾನ:
ಬೆಳೆ ಹಾನಿ ಸಂಭವಿಸಿದಾಗ ನಿಮ್ಮ ಹತ್ತಿರದ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಅಥವಾ ಕೃಷಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ್ದರೆ ನಾವು ಕೆಳಗೆ ನೀಡಿರುವ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಚೆಕ್ ಮಾಡಿಕೊಳ್ಳಿ
Step-1: ಮೊದಲು ಈ ಲಿಂಕ್ Parihara status ಮೇಲೆ ಒತ್ತಿ ಪರಿಹಾರ ವೆಬ್ಸೈಟ್ ಭೇಟಿ ಮಾಡಿದ ಬಳಿಕ ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತವೆ ಇಲ್ಲಿ ಆಧಾರ್ ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳಿ.
Step-2: ನಂತರ “ಪರಿಹಾರ ವಿಧ ಅಥವಾ Calamity Type” ಆಯ್ಕೆಯಲ್ಲಿ ಒಂದನ್ನು ಆಯ್ಕೆ ಮಾಡಿ, “ವರ್ಷ/Year” ಆಯ್ಕೆ ಮಾಡಿ ಅರ್ಜಿದಾರರ ಅಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ಪಕ್ಕದಲ್ಲಿ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “ವಿವರವನ್ನು ಪಡೆಯಲು” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪರಿಹಾರದ ಅರ್ಜಿ ಯಾವ ಹಂತದಲ್ಲಿದೆ ಎಂದು ಅದು ತೋರಿಸುತ್ತದೆ.
ಇತರೆ ವಿಷಯಗಳು
ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದೀರಾ? ಹಾಗಿದ್ರೆ ಸಿಗುತ್ತೆ ಸರ್ಕಾರದಿಂದ ಉಚಿತ 90 ಸಾವಿರ
ಹಸು ಸಾಕಾಣಿಕೆದಾರರಿಗೆ ಸಿಹಿ ಸುದ್ದಿ! ಸರ್ಕಾರದಿಂದ 1.60 ಲಕ್ಷ ರೂ. ಸಹಾಯಧನ