rtgh

News

ಕೃಷಿ ನವೋದ್ಯಮ ಯೋಜನೆ: 50% ಸಬ್ಸಿಡಿಯಲ್ಲಿ ಗರಿಷ್ಠ ₹20 ಲಕ್ಷದವರೆಗೆ ಆರ್ಥಿಕ ನೆರವು

Published

on

ಹಲೋ ಸ್ನೇಹಿತರೇ, ರಾಜ್ಯಾದ್ಯಂತ ಕೃಷಿ ವಲಯದಲ್ಲಿ ನೂತನ ಆವಿಷ್ಕಾರಗಳು ನಡೆಯುತ್ತಿದೆ, ನವೀನ ಉತ್ಪನ್ನಗಳು, ಸೇವೆಗಳು ಒಳಗೊಂಡಿರುವ ಕೃಷಿ ನವೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದೊಂದಿಗೆ ‘ಕೃಷಿ ನವೋದ್ಯಮ’ ಯೋಜನೆಯನ್ನು ರಾಜ್ಯ ಸರ್ಕಾರ ಅನುಷ್ಠಾನಕ್ಕೆ ತಂದಿದೆ. ಈ ಯೋಜನೆಯ ಲಾಭವನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

krishi navodyama yojana

ಯೋಜನೆಗೆ ಆರಂಭಿಕ ವರ್ಷದಲ್ಲಿ 10 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದ್ದು, ರಾಜ್ಯದ ಯಾವ ಭಾಗಗಳಿಂದ ಅರ್ಜಿಗಳು ಬಂದರೂ ಕೆಲವು ಮಾನದಂಡಗಳ ಮೇಲೆ ಪರಿಗಣಿಸಲು ತೀರ್ಮಾನ ಮಾಡಲಾಗಿದೆ

ಗ್ರಾಮೀಣ ಭಾಗದ ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ಕಂಪನಿಗಳ ಕದತಟ್ಟುವ ಬದಲು ಕೃಷಿ ಕ್ಷೇತ್ರದಲ್ಲಿ ಹೊಸ ಆಲೋಚನೆಯನ್ನು, ತಂತ್ರಜ್ಞಾನಗಳೊಂದಿಗೆ ಸ್ವಂತ ಉದ್ಯಮ ಆರಂಭಿಸುವರಿಗೆ ಕೃಷಿ ಇಲಾಖೆಯು ‘ಕೃಷಿ ನವೋದ್ಯಮ ಯೋಜನೆಯಡಿ ಆರ್ಥಿಕ ನೆರವವನ್ನು ನೀಡುತ್ತಿದೆ.


ಉದ್ಯಮ ಆರಂಭಿಸುವವರಿಗೆ ಈ ಯೋಜನೆಯಡಿಯಲ್ಲಿ ಕನಿಷ್ಠ 5 ರಿಂದ ಗರಿಷ್ಠ 20 ಲಕ್ಷ ರೂ.ವರೆಗೂ ಸಹಾಯಧನ ನೀಡಲಾಗುವುದು. ಈಗಾಗಲೇ ಸ್ಥಾಪಿಸಲಾದ ಕೃಷಿ ನವೋದ್ಯಮಗಳ ವಿಸ್ತರಣೆಗೆ ಕನಿಷ್ಠ 20 ರಿಂದ ಗರಿಷ್ಠ 50 ಲಕ್ಷ ರೂ.ವರೆಗೂ ಅಥವಾ ಶೇ. 50 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಆಯ್ಕೆಯಾದ ನಾನಾ ತರಬೇತಿ ಕೇಂದ್ರಗಳಲ್ಲಿ ಮತ್ತು ಇನ್‌ಕ್ಯುಬೇಷನ್‌ ಸೆಂಟರ್‌ಗಳಲ್ಲಿ ತರಬೇತಿ ಪಡೆಯಲು ಅವಕಾಶ ಇದೆ. ಈ ವರ್ಷ 58 ಮಂದಿಗೆ ಸಹಾಯಧನದ ನೆರವು ನೀಡುವ ಗುರಿ ಹೊಂದಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಆಹಾರ ಬೆಳೆಗಳ ಉತ್ಪಾದಕತೆಯ ಏರಿಕೆ, ಸಂಪನ್ಮೂಲಗಳ ಸದ್ಭಳಕೆ, ಸುಧಾರಿತ ಕೃಷಿ ಜೊತೆಗೆ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆಯಿಂದ ರೈತರ ಆದಾಯ ಏರಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈಗಾಗಲೇ ತಮ್ಮ ಉತ್ಪನ್ನವನ್ನು ಮಧ್ಯವರ್ತಿಗಳಿಲ್ಲದೆ ಮಾರಾಟ ಮಾಡುವಲ್ಲಿ ಸಾಕಷ್ಟು ಜನ ಯಶಸ್ವಿಗಳಾಗಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಉದ್ಯಮಶೀಲತೆಯನ್ನು ಏರಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜನೆಗಾಗಿ ಕೃಷಿಯಲ್ಲಿನ ನೂತನ ತಾಂತ್ರಿಕತೆಯನ್ನು ಮತ್ತು ನವೀನ ಪರಿಕಲ್ಪನೆಗಳ ವಾಣಿಜ್ಯೀಕರಣವನ್ನು ಉತ್ತೇಜನ ಮಾಡಲು ಕೃಷಿ ನವೋದ್ಯಮ ಕಾರ್ಯಕ್ರಮ ಜಾರಿಗೆ ತರಲಾಗಿದೆ. ಈಗಾಗಲೇ ಕೆಲವರು ಅರ್ಜಿಯನ್ನು ಸಲ್ಲಿಸಲು ಆರಂಭಿಸಿದ್ದಾರೆ. ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರ ರೈತರು, ನವೋದ್ಯಮಿಗಳು & ಇತರೆ ಫಲಾನುಭವಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಈ ಕೃಷಿ ನವೋದ್ಯಮಕ್ಕೆ ಅಭ್ಯರ್ಥಿಗಳು & ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸದ್ಯ ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಲು ಮಾತ್ರ ಅವಕಾಶ ನೀಡಲಾಗಿದ್ದು. ಶೀಘ್ರದಲ್ಲೇ ಆನ್‌ಲೈನ್‌ ವ್ಯವಸ್ಥೆ ಜಾರಿಬರಲಿದೆ.

ನವೀನ ತಾಂತ್ರಿಕತೆಗಳು ಹಾಗೂ ನೂತನ ಪರಿಕಲ್ಪನೆಯ ಕೃಷಿಯ ನವೋದ್ಯಮ ಪ್ರಾರಂಭ ಇಲಾಖೆಯ ಮುಖ್ಯ ಆಶಯವಾಗಿದೆ. ಸಿರಿಧಾನ್ಯಗಳ ಸಂಸ್ಕರಣೆ, ಹೊಸ ಬಗೆಯ ಉತ್ಪನ್ನಗಳ ಕುರಿತಾದ ಉದ್ಯಮದಾರರಿಗೆ ವಿಶೇಷ ಆದ್ಯತೆಯನ್ನು ನೀಡಲಾಗಿದೆ ಎಂದು ಕೃಷಿ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.

ಇತರೆ ವಿಷಯಗಳು

ಗ್ರಾಹಕರಿಗೆ ಬಿಗ್‌ ಶಾಕ್; ಫೆಬ್ರವರಿ 29‌ರಿಂದ Paytm ಆ್ಯಪ್‌ ಬ್ಯಾನ್.! RBI ಮಹತ್ವದ ನಿರ್ಧಾರ

ನಿಮ್ಮ ಹೆಸರಲ್ಲಿ ಭೂಮಿ ಇಲ್ಲದಿದ್ದರು ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿ! ಕೇಂ‌ದ್ರದಿಂದ ಗುಡ್‌ ನ್ಯೂಸ್

Treading

Load More...