rtgh

Information

ಅನ್ನದಾತರ ಭಾರ ಇಳಿಸಿದ ಸರ್ಕಾರ.!! ಅಂತು ಬಂತು ಹೊಸ ಸ್ಕೀಮ್‌; ತಡಮಾಡದೇ ಇಂದೇ ಅಪ್ಲೇ ಮಾಡಿ

Published

on

ಹಲೋ ಸ್ನೇಹಿತರೇ, ರೈತರು ತಮ್ಮ ಭೂಮಿಯಲ್ಲಿ ಕೃಷಿ ಬೆಳೆಯುವುದು ಅಂದ್ರೆ ದೊಡ್ಡ ಸವಾಲು. ಆ ಕೆಲಸವನ್ನು ಮಾಡುವುದು ಅಷ್ಟು ಸುಲಭವಲ್ಲ. ಯಾಕಂದ್ರೆ ಕೃಷಿಯಲ್ಲಿ ರೈತರು ಎದುರಿಸಬೇಕಾದ ಸವಾಲುಗಳು ಸಾಕಷ್ಟು ಮುಂಗಾರು ಹಾಗೂ ಹಿಂಗಾರು ಮಳೆಯನ್ನು ಅವಲಂಬಿಸಿರುತ್ತದೆ.

agricultural loan karnataka

ಪ್ರತಿವರ್ಷವು ಮಳೆ ಸರಿಯಾಗಿ ಬಾರದೆ ಇದ್ದರೆ ಉತ್ತಮ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲ. ಅದರಲ್ಲಿಯೂ ಈ ವರ್ಷ ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿಯೇ ಸಾಕಷ್ಟು ಪ್ರದೇಶವನ್ನು ಬರ ಪೀಡಿತ ಪ್ರದೇಶ ಎಂದು ಕೂಡ ಗುರುತಿಸಲಾಗಿದೆ.

ರೈತರು ತಮ್ಮ ಕೃಷಿ ಕೆಲಸಕ್ಕಾಗಿ ಹಲವು ಬಾರಿ ಕೃಷಿ ಸಾಲವನ್ನು ಮಾಡಬೇಕಾಗಿರುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಕೃಷಿ ಸಾಲ ಅಥವಾ ಬೆಳೆ ಸಾಲವನ್ನು ಹತ್ತಿರದ ಬ್ಯಾಂಕ್ಗಳಲ್ಲಿ ತೆಗೆದುಕೊಳ್ಳಬಹುದು ಇದರ ಜೊತೆಗೆ ಸರ್ಕಾರದ ಕೆಲವು ಸಬ್ಸಿಡಿ ಪ್ರಯೋಜನವನ್ನು ಪಡೆಯಬಹುದು


ಆದರೂ ಕೂಡ ಬೆಳೆ ಸರಿಯಾಗಿ ಬಾರದೆ ಇರುವ ಹಿನ್ನೆಲೆಯಲ್ಲಿ ರೈತರಿಗೆ ತಾವು ತೆಗೆದುಕೊಂಡ ಕೃಷಿ ಸಾಲವನ್ನು ಸುಲಭವಾಗಿ ತೀರಿಸಲು ಸಾಧ್ಯವಾಗುವುದಿಲ್ಲ, ಇದರಿಂದ ರೈತರಿಗೆ ತಮ್ಮ ಕುಟುಂಬವನ್ನು ನಡೆಸಬೇಕು ಇತ್ತ ಸಾಲವನ್ನು ತೀರಿಸಬೇಕು ಎನ್ನುವ ದೊಡ್ಡ ಸಮಸ್ಯೆ ಎದುರಾಗುತ್ತದೆ

ಇದನ್ನು ಪರಿಹರಿಸುವುದಕ್ಕಾಗಿ ಸರ್ಕಾರ ಬಹಳ ದೊಡ್ಡ ಉಪಕ್ರಮ ಕೈಗೊಂಡಿರುವುದಾಗಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ರೈತರ ಸಾಲ ಮರು ಪರಿವರ್ತನೆ ಅಥವಾ ವಿಸ್ತರಣೆ

ರಾಜ್ಯದ ರೈತರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸಕಾಲಕ್ಕೆ ರೈತರು ತಾವು ತೆಗೆದುಕೊಂಡ ಸಾಲವನ್ನು ಹಿಂತಿರುಗಿಸದೆ ಇದ್ದಲ್ಲಿ ಬ್ಯಾಂಕ್ ಸುಮ್ಮನಿರುವುದಿಲ್ಲ ರೈತರನ್ನು ಮತ್ತೆ ಮತ್ತೆ ಸಾಲ ತೀರಿಸುವಂತೆ ಕೇಳುತ್ತಿದೆ. ಇನ್ನೂ ಸಾಲ ತೀರಿಸದೇ ಇದ್ದಾಗ ಬ್ಯಾಂಕ್ನಿಂದ ನೋಟಿಸ್ ಕೂಡ ಜಾರಿ ಆಗಬಹುದು.

ಇದನ್ನೂ ಸಹ ಓದಿ: ಮಹಿಳೆಯರಿಗೆ ಮತ್ತೊಂದು ಯೋಜನೆ ಜಾರಿ.! ಭೂ ಒಡೆತನ ಯೋಜನೆ 10 ಲಕ್ಷ ಉಚಿತ.! ಈ ಕೂಡಲೇ ಅರ್ಜಿ ಸಲ್ಲಿಸಿ

ಆದರೆ ಇನ್ನು ಮುಂದೆ ಈ ಟೆನ್ಶನ್ ಇಲ್ಲ ಯಾಕೆಂದರೆ ರೈತರು ತಾವು ತೆಗೆದುಕೊಂಡ ಕೃಷಿ ಸಾಲ ಅಥವಾ ಬೆಳೆ ಸಾಲವನ್ನು ತೀರಿಸಲು ಅವಧಿ ವಿಸ್ತರಣೆಗೆ ಸರಕಾರ ಬ್ಯಾಂಕ್ ಗಳಿಗೆ ಸೂಚಿಸಿದೆ.

ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದಂತೆ ಬ್ಯಾಂಕ್ಗಳು ಮತ್ತು ರೈತರು ತೆಗೆದುಕೊಂಡ ಅಲ್ಪಾವಧಿಯ ಸಾಲವನ್ನು ಮಧ್ಯಮ ಅವಧಿಗೆ ಹಾಗೂ ಮಧ್ಯಮಾವಧಿಗೆ ಸಾಲವನ್ನು ದೀರ್ಘಾವಧಿಗೆ ವಿಸ್ತರಿಸಬೇಕು ಎಂದು ತಿಳಿಸಿದ್ದಾರೆ. ಇದರಿಂದಾಗಿ ರೈತರಿಗೆ ಸಾಲವನ್ನು ತೀರಿಸಲು ಹೆಚ್ಚು ಸಮಯ ಲಭ್ಯವಾಗುತ್ತದೆ. ವರ್ಷದ ಬೆಳೆ ಬಂದ ನಂತರವೇ ರೈತರು ಸಾಲ ತೀರಿಸಿಕೊಳ್ಳಬಹುದು.

ರೈತರು ಸಾಲ ಮನ್ನಾ ಆಗಿರುವ ಬಗ್ಗೆ ತಿಳಿದುಕೊಳ್ಳುವುದು ಹೇಗೆ?

ಕಳೆದ ವರ್ಷ ರೈತರ ಸಾಲ ಮನ್ನಾ ಮಾಡಲಾಗಿತ್ತು. ಇದರ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳಲು ಈ ವೆಬ್ಸೈಟ್ಗೆ ಭೇಟಿ ನೀಡಿ. ಇಲ್ಲಿ ಮಾದರಿ ಎನ್ನುವ ಆಯ್ಕೆಯಲ್ಲಿ ರೈತ ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ. ಬಳಿಕ ನಿಮ್ಮ ಗ್ರಾಮ ಹೋಬಳಿ ಹಾಗೂ ಸಾಲದ ಮತ್ತಿತರ ವಿವರಗಳನ್ನು ನೀಡಿ ಸಬ್ಮಿಟ್ ಎಂದು ಲಿಂಕ್ ಮಾಡಿದರೆ ನಿಮ್ಮ ಸಾಲ ಮನ್ನಾ ಆಗಿರುವ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು.

ಕರ್ನಾಟಕ ರಾಜ್ಯದಲ್ಲಿ ಘೋಷಣೆ ಆಗಿರುವ ಕೆಲವು ಬರಪೀಡಿತ ಪ್ರದೇಶಗಳಲ್ಲಿ ಫಲಾನುಭವಿ ರೈತರಿಗೆ 2000 ರೂ. ಗಳನ್ನು ಬರ ಪರಿಹಾರ ನಿಧಿ ಆಗಿ ಜಮಾ ಮಾಡಲಾಗಿದೆ. ಚಳ್ಳಕೆರೆಯ ತಾಲೂಕಿನಲ್ಲಿ ಫಲಾನುಭವಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವುದರ ಮೂಲಕ ಈ ಯೋಜನೆಗೆ ಚಾಲನೆಯನ್ನು ನೀಡಲಾಗಿದೆ. ಇನ್ನು ಸದ್ಯದಲ್ಲಿಯೇ ಬರ ಪೀಡಿತ ಪ್ರದೇಶದ ಫಲಾನುಭವಿ ರೈತರ ಖಾತೆಗೆ ಸರ್ಕಾರದಿಂದ ಬಿಡುಗಡೆಯಾಗಿರುವ 2000 ರೂ. ಸಂದಾಯವಾಗಲಿವೆ.

ಸೋಲಾರ್ ರೂಫ್‌ಟಾಪ್ ಸಬ್ಸಿಡಿ ಲಭ್ಯ! ಸರ್ಕಾರದಿಂದ ಸಿಗಲಿದೆ ಉಚಿತ 72 ಸಾವಿರ ಸಹಾಯಧನ!!

ಹೆಣ್ಣು ಮಕ್ಕಳೇ ಹುಷಾರ್.!!‌ ಒಂದೇ ಆಧಾರ್‌ ಕಾರ್ಡ್‌ನಲ್ಲಿ ಇಬ್ಬರು ಮಹಿಳೆಯರಿಗೆ ಉಚಿತ ಪ್ರಯಾಣ

Treading

Load More...