rtgh

Scheme

ಕೃಷಿ ಇಲಾಖೆಯಿಂದ ಬಂಪರ್‌ ಸಬ್ಸಿಡಿ ಸ್ಕೀಮ್ಸ್.!‌ ಹಲವು ಯೋಜನೆಗಳಿಗೆ ಅರ್ಜಿ ಆಹ್ವಾನ.! ಕೆಲವೇ ದಿನಗಳು ಬಾಕಿ ಕೂಡಲೇ ಅರ್ಜಿ ಸಲ್ಲಿಸಿ

Published

on

ಹಲೋ ಸ್ನೇಹಿತರೇ, ಪ್ರಸ್ತುತ ವರ್ಷದಿಂದ ಕೃಷಿ ಜೊತೆಗೆ ಇತರ ಉಪಕಸುಬುಗಳನ್ನು ಉತೇಜನ ನೀಡಲು ಮೂಲಕ ಕೃಷಿ ಇಲಾಖೆಯಿಂದ “ಸೆಕೆಂಡರಿ ಕೃಷಿ ನಿರ್ದೇಶನಾಲಯ” ಎಂಬ ಹೊಸ ವಿಭಾಗವನ್ನು ಜಾರಿಗೆ ತರಲಾಗಿದೆ. ಈ ವಿಭಾಗದ ಮುಖಾಂತರ 50% ಸಹಾಯಧನದಲ್ಲಿ ಸಾಕಷ್ಟು ಯೋಜನೆಗಳನ್ನು ಅನುಷ್ಥಾನ ಗೊಳಿಸಲು ಅರ್ಜಿ ಆಹ್ವಾನ ಮಾಡಲಾಗಿದೆ. ಯಾವೆಲ್ಲಾ ಯೋಜನೆಗಳು ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

agriculture department subsidy schemes

ರೈತರು ಕೃಷಿ ಕೆಲಸದಲ್ಲಿ ನಿರಂತರವಾಗಿ ಸ್ಥಿತ ಆದಾಯವನ್ನು ಪಡೆಯಲು 1 ಬೆಳೆ ಅಥವಾ ಕೇವಲ 1 ಮೂಲದ ಆದಾಯದ ಮೇಲೆ ಹೆಚ್ಚಾಗಿ ಅವಲಂಬನೆ ಅಗಿರದೇ ಕೃಷಿ ಉಪಕಸುಬಿನಲ್ಲಿ ಸಹ ಹೆಚ್ಚು ತೂಡಗಿಕೊಳ್ಳುವುದು ಉತ್ತಮ ಮುಖ್ಯವಾಗಿದೆ.

ಏಕೆಂದರೆ 1 ಬೆಳೆ ಅಥವಾ 1 ಅದಾಯ ಮೂಲದ ಮೇಲೆ ಅತೀಯಾಗಿ ಅವಲಂಬನೆಯು ಅರ್ಥಿಕವಾಗಿ ನಷ್ಟ ಉಂಟು ಮಾಡುತ್ತದೆ, ಮಾರುಕಟ್ಟೆಯ ಏರಿಳಿತ, ಬೆಳೆಗಳಿಗೆ ರೋಗ ಮತ್ತು ಕೀಟ ಸಮಸ್ಯೆ, ಹಾಗೂ ಹವಾಮಾನ ಬದಲಾವಣೆ ಇಂತಹ ಸಮಸ್ಯೆಯಿಂದ ರೈತರು ಪಾರಾಗಲು ಕೃಷಿ ಉಪಕಸುಬಿನಲ್ಲಿ ತೂಡಗಿಕೊಳ್ಳುವುದು ಅಗತ್ಯ.


ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ:

ರೈತರರಿಗೆ ಸಂಬಂದಪಟ್ಟಿರುವ ಎಲ್ಲಾ ಇಲಾಖೆ ಮತ್ತು ಮಂಡಳಿಗಳು, ರಾಜ್ಯದ ಎಲ್ಲಾ ಕೃಷಿ ವಿಶ್ವ ವಿದ್ಯಾಲಯಗಳ ಸಹಯೋಗದಲ್ಲಿ ಕೃಷಿ ಇಲಾಖೆಯ ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ ಮಾಡಲಾಗಿದೆ ಇದರ ಮೂಲಕ 50% ಸಹಾಯಧನ ಈ ಕೆಳಗಿನ ಯೋಜನೆಗಳಿಗೆ ಅನುಷ್ಥಾನ ಮಾಡಲಾಗುತ್ತದೆ. ಆಸಕ್ತ ಹೊಂದಿದ ಫಲಾನುಭವಿಗಳು ಈ ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಯಾವೆಲ್ಲ ಪ್ರಯೋಜನ ಪಡೆಯಬವುದು:

  • ಸಾವಯವ ಗೊಬ್ಬರ ತಯಾರಿಕೆ.
  • ಎರೆಹುಳು ಗೊಬ್ಬರ ತಯಾರಿಕೆ. 
  • ಜೈವಿಕ ಗೊಬ್ಬರ ಉತ್ಪಾದನೆ.
  • ಕಾಂಪೋಸ್ಟ್ ಗೊಬ್ಬರ ತಯಾರಿಕೆ.
  • ತೋಟಗಾರಿಕೆ ಹೂವು ಹಣ್ಣು ಬೆಳೆಗಳ ನರ್ಸರಿ.
  • ನೀರು ಮತ್ತು ಮಣ್ಣು ಪರೀಕ್ಷೆ ಮಾಡುವಂತಹ ಘಟಕ.
  • ಪಶು ಆಹಾರ ಮತ್ತು ಮೇವು ಉತ್ಪಾದನಾ ಘಟಕ.
  • ಹೂವು, ಹಣ್ಣು, ಸಾಂಬಾರು ಪದಾರ್ಥ ಇತ್ಯಾದಿ ವಸ್ತುಗಳ ಪೂರ್ವ ಸಿದ್ಧತೆಗೊಳಿಸಿ  ಮಾರುಕಟ್ಟೆಗೆ ತಲುಪಿಸುವುದು.
  • ಉಪ್ಪಿನಕಾಯಿ ತಯಾರಿಕಾ ಘಟಕ., 
  • ಜಾಮ್ ಅರಿಶಿಣ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ತಯಾರಿಕ ಘಟಕ.
  • ಜೇನು ಸಾಕಾಣಿಕೆ, ಅಣಬೆ ಬೇಸಾಯ.
  • ಅಡಿಕೆ ತೆಂಗು ಬಾಳೆ ನಾರಿನ ಉತ್ಪನ್ನಗಳ ತಯಾರಿಕೆ. 
  • ಬಿದಿರು ಉತ್ಪನ್ನಗಳ ತಯಾರಿಕೆ. 
  • ಅಲೋವೆರಾ ಉತ್ಪನ್ನಗಳ ತಯಾರಿಕೆ.
  • ರೇಷ್ಮೆ ಉತ್ಪನ್ನಗಳ ತಯಾರಿಕೆ.
  • ಹೊಸ ತಳಿಯ ಕುರಿಮರಿ ಹೋ ರಿ ಸಾಕಾಣಿಕೆ.
  • ಅತ್ತಿಬೆಲೆ ಉಳಿಕೆಯ ಉತ್ಪನ್ನಗಳ ತಯಾರಿಕೆ, ಬಯೋಗ್ಯಾಸ್ ಉತ್ಪಾದನಾ ಘಟಕ.
  • ಅಡಿಕೆಯ ಹಾಳೆ ಉತ್ಪನ್ನಗಳ ತಯಾರಿಕ ಘಟಕ, ಜೀವಾಮೃತ ತಯಾರಿಕಾ ಘಟಕ, ಕಬ್ಬಿನ ಜ್ಯೂಸ್  ತಯಾರಿಕಾ ಘಟಕ.

ಎಲ್ಲಿ ಅರ್ಜಿ ಸಲ್ಲಿಸಬೇಕು:

ಅರ್ಜಿದಾರರು ಅಗತ್ಯ ದಾಖಲಾತಿಗಳ ತೆಗೆದುಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಬೇಕಾಗುವ ದಾಖಲಾತಿಗಳು:

  1. ಆರ್ ಟಿ ಸಿ.
  2. ಆಧಾರ್ ಕಾರ್ಡ್.
  3. ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್.
  4. ಪಾಸ್ಪೋರ್ಟ್ ಸೈಜ್ ಫೋಟೋ 2.
  5. ಜಾಬ್ ಕಾರ್ಡ್ ( ಇದ್ದರೆ ಮಾತ್ರ).

ಇತರೆ ವಿಷಯಗಳು

LPG ಗ್ಯಾಸ್‌ ಸಿಲಿಂಡರ್‌ ಸಬ್ಸಿಡಿಯಲ್ಲಿ ಬಿಗ್‌ ಚೇಂಜ್.! ಈ ಪೋರ್ಟಲ್‌ನಲ್ಲಿ ನೋಂದಣಿ ಮಾಡುವುದು ಕಡ್ಡಾಯ

ರಾಜ್ಯದಲ್ಲಿ ಮುಂದಿನ 7 ದಿನ ಭಾರೀ ಮಳೆ..! ಈ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ

Treading

Load More...