ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಎಷ್ಟೋ ಜನ ರೈತರಿಗೆ ಸ್ವಂತ ಕೃಷಿಭೂಮಿ ಇರುವುದಿಲ್ಲ, ಅಂತಹವರು ಸರ್ಕಾರಿ ಜಮೀನನ್ನೇ ಕೃಷಿಗೆ ಬಳಸಿಕೊಳ್ಳುತ್ತಿದ್ದರು. ಅಂತಹ ಸರ್ಕಾರಿ ಜಮೀನನ್ನು ಈಗ ರೈತರು ತಮ್ಮದೇ ಹೆಸರಿಗೆ ಮಾಡಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.
ಇದು ತುಂಬಾನೇ ಹಿಂದಿನ ಪದ್ಧತಿ, ಸ್ವಂತ ಕೃಷಿ ಭೂಮಿ ಹೊಂದಿರದ ರೈತರು ಗೋಮಾಳವನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ತಮ್ಮ ಜೀವನಕ್ಕೆ ಆ ಭೂಮಿಯನ್ನು ಬಳಸಿಕೊಳ್ಳುತ್ತಿದ್ದರು.
ಪ್ರತಿಯೊಂದು ಗ್ರಾಮಕ್ಕೆ ಎಷ್ಟೆಷ್ಟು ಭೂಮಿಯನ್ನು ನೀಡಬೇಕು ಎನ್ನುವುದನ್ನೂ ಸಹ ಸರ್ಕಾರವೇ ನಿರ್ಧಾರ ಮಾಡುತ್ತದೆ. ಸಾಗುವಳಿ ಜಮೀನನು ತಮ್ಮ ಹೆಸರಿಗೆ ಮಾಡಿಕೊಳ್ಳುವುದಕ್ಕೆ ಸರ್ಕಾರ ಅವಕಾಶವನ್ನು ನೀಡಿದೆ.
ಸರ್ಕಾರದ ಭೂಮಿ ಯಾವುದು ?
ಜಾನುವಾರುಗಳಿಗೆ ಮೇಯಲು ಬಿಟ್ಟ ಗೋಮಾಳ ಅಥವಾ ಒಂದು ಗ್ರಾಮದಲ್ಲಿ ಯಾವುದೇ ರೀತಿಯ ಬಳಕೆಯಾಗದ ಉಪಯೋಗವಿಲ್ಲದ ಭೂಮಿ ಆಗಿರಬಹುದು. ಅದನ್ನು ಸರ್ಕಾರಿ ಜಮೀನು ಎಂದು ಪರಿಗಣಿಸಲಾಗುತ್ತದೆ
ಪ್ರತಿಯೊಂದು ಗ್ರಾಮದಲ್ಲಿಯೂ 100 ದನಕರುಗಳಿಗೆ 12 ಹೆಕ್ಟೇರ್ ಭೂಮಿಯನ್ನು ಗೋಮಾಳವಾಗಿ ಸರ್ಕಾರ ಬಿಟ್ಟಿದೆ ಎಂಬುದು ಭೂ ಕಂದಾಯ ನಿಯಮ 1966, 97 (1) ಆಗಿದೆ.
ಹೀಗೆ 12 ಹೆಕ್ಟೇರ್ ಗಿಂತಲೂ ಹೆಚ್ಚು ಜಾಗವನ್ನು ಗೋಮಾಳಕ್ಕೆಂದು ಬಿಟ್ಟಿದ್ದರೆ ಹೆಚ್ಚಿಗೆ ಇರುವ ಜಾಗವನ್ನು ರೈತರು ಸಾಗುವಳಿ ಮಾಡುತ್ತಿದ್ದರು, ಅಂತಹ ಜಾಗವನ್ನು ಪರಿಶೀಲಿಸಿ ಅಕ್ರಮ ಸಕ್ರಮಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ.
ಗೋಮಾಳದ ಜಮೀನು ಯಾರಿಗೆ ಸಿಗುತ್ತದೆ?
- ಗೋಮಾಳ ಅಲ್ಲದೇ ಹೆಚ್ಚಿಗೆ ಜಮೀನು ಇದ್ದ ರೈತರಿಗೆ ಮಾತ್ರ ಅಂತಹ ಜಮೀನಿನಲ್ಲಿ ಕೃಷಿ ಮಾಡುವವರಿಗೆ ಸಕ್ರಮ ಜಮೀನು ಪತ್ರ ಸಿಹುತ್ತದೆ.
- ಯಾವುದೇ ಖಾಸಗಿ ಕಂಪನಿಗಳು ಯಾವ ಕಾರಣಕ್ಕೂ ಗೋಮಾಳದ ಜಮೀನನ್ನು ಬಳಸುವಂತಿಲ್ಲ
- ಕೃಷಿ ಕೆಲಸ ಅಲ್ಲದೇ ಇತರ ಕೆಲಸವನ್ನು ಆ ಜಮೀನಿನಲ್ಲಿ ಮಾಡಿದರೆ ಅದು ರೈತರಿಗೆ ಸಿಗುವುದಿಲ್ಲ
ಇತರ ವಿಷಯಗಳು
ದುಬಾರಿ ಔಷಧಿಗಳು ಇನ್ನು ಸಿಕ್ಕಾಪಟ್ಟೆ ಅಗ್ಗ! ಜನಸಾಮಾನ್ಯರಿಗೆ ಔಷಧಿ ಭಾರ ಇಳಿಸಿದ ಸರ್ಕಾರ!
ಸರ್ಕಾರದಿಂದ ಸಿಗುವ 15,000 ಮಿಸ್ ಮಾಡ್ಕೋಬೇಡಿ.! ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ಸಲ್ಲಿಸಿ
CBSE ಬೋರ್ಡ್ ಪರೀಕ್ಷೆ ದಿನಾಂಕ ಬದಲಾವಣೆ: 2024ರ ಹೊಸ ವೇಳಾಪಟ್ಟಿ ಬಿಡುಗಡೆ