rtgh

Scheme

ಪಡಿತರ ವಿತರಣೆಯಲ್ಲಿ ಮಹತ್ವದ ಬದಲಾವಣೆ.! ಹಣದ ಬದಲು ಇನ್ಮುಂದೆ ಸಿಗಲಿದೆ ಈ ಧಾನ್ಯ

Published

on

ಹಲೋ ಸ್ನೇಹಿತರೇ, ರಾಜ್ಯ ಸರಕಾರವು ರೇಷನ್‌ ಕಾರ್ಡ್‌ದಾರರಿಗೆ ಒಳ್ಳೆಯ ಸುದ್ದಿಯನ್ನು ನೀಡಿದೆ. ಅತೀ ಶೀಘ್ರದಲ್ಲಿ ರೇಷನ್‌ ವಿತರಣೆ ಮಾಡುವುದರ ಜೊತೆಗೆ ಕುಚ್ಚಲಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಯಾವಾಗಿಂದ ಈ ಸೌಲಭ್ಯ ಪ್ರಾರಂಭವಾಗುತ್ತದೆ ಎಂದು ಈ ಲೇಖನದ ಮೂಲಕ ತಿಳಿಯಿರಿ.

anna bhagya scheme karnataka

ರಾಜ್ಯದ ಜನರ ಆರ್ಥಿಕ ಮಟ್ಟವನ್ನ ಸುಧಾರಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಡಿತರ ವಿತರಣೆಯು ಕೂಡ ಒಂದಾಗಿದೆ. ರೇಷನ್‌ ವಿತರಣೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹೊಸ ರೂಲ್ಸ್‌ ಜಾರಿಗೆ ತರಲಾಗುತ್ತಿದೆ. ಇನ್ಮುಂದೆ ರೇಷನ್‌ ಜೊತೆಗೆ ಕುಚ್ಚಲಕ್ಕಿ ವಿತರಣೆ ಮಾಡುವ ಬಗ್ಗೆ ಆಹಾರ ಸಚಿವ ಕೆ.ಹೆಚ್‌ ಮುನಿಯಪ್ಪ ಹೇಳಿಕೆಯನ್ನು ನೀಡಿದ್ದಾರೆ.

ಮುಂದೆ ಬರುವ ದಿನಗಳಲ್ಲಿ ಅಕ್ಕಿ ವಿತರಣೆ ಮಾಡುವ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಅಕ್ಕಿ ಬದಲಿಗೆ ಕುಚ್ಚಲಕ್ಕಿ ನೀಡಲಾಗುವುದು ಎಂದು ಕೆ ಹೆಚ್‌ ಮುನಿಯಪ್ಪ ತಿಳಿಸಿದ್ದಾರೆ. ಕುಚ್ಚಲಕ್ಕಿಯನ್ನು ನೀಡಲು ಈಗಾಗಲೇ ಅನುಮೋದನೆ ಸಿಕ್ಕಿದೆ ಸರ್ಕಾರ ವಿತರಣೆ ಮಾಡುವ ಬಗ್ಗೆ ಸಿದ್ದತೆಯನ್ನು ಮಾಡಿದೆ ಎನ್ನಲಾಗಿದೆ. ತಾಂತ್ರಿಕ ಕಾರಣಗಳಿಗೆ ಯೋಜನೆ ಜನರ ಕೈ ಸೇರುವುದು ತಡವಾಗುತ್ತಿದೆ.


ಮುಂದಿನ ದಿನದಲ್ಲಿ ಈ ಸಮಸ್ಯೆ ನಿವಾರಣೆಯಾಗಿ ಕುಚ್ಚಲಕ್ಕಿಯನ್ನು ನೀಡಲಾಗುವುದು. ಸರ್ಕಾರದ ಈ ನಿರ್ಧಾರ ಕರಾವಳಿ ಭಾಗದ ಜನರಿಗೆ ಹೆಚ್ಚಿನ ಖುಷಿ ತರಲಿದೆ ಏಕೆಂದರೆ ಅಲ್ಲಿನ ಜನರು ಹೆಚ್ಚಾಗಿ ಕುಚ್ಚಲಕ್ಕಿಯನ್ನು ಬಳಕೆ ಮಾಡುತ್ತಾರೆ.

ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ.! ಬಂಗಾರ ಕೊಳ್ಳಲು ಇದೆ ಒಳ್ಳೆ ಘಳಿಗೆ.! ಹೊಸ ವರ್ಷಕ್ಕೆ ಮತ್ತೆ ಏರಿಕೆಯಾಗುವ ಬಗ್ಗೆ ತಜ್ಞರ ಎಚ್ಚರಿಕೆ

ಸೈಲೆಂಟಾಗೇ ಹೆಚ್ಚಾಗ್ತಿದೆ ಬೆಳ್ಳುಳ್ಳಿ ರೇಟ್..! ಇಂದಿನ ಬೆಲೆ ಕೇಳಿದ್ರೆ ದಂಗಾಗ್ತೀರಾ

Treading

Load More...