ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಈ ಬಾರಿ ಮಳೆ ಸರಿಯಾಗಿ ಆಗದ ಕಾರಣ ರೈತರು ತಮ್ಮ ಹೊಲದಲ್ಲಿ ಬೆಳೆದ ಬೆಳೆಗಳೆಲ್ಲ ನಾಶವಾಗಿದೆ. ಈ ಬಾರಿ ಮಳೆಯಾಗಬಹುದು ಎನ್ನುವ ನಿರೀಕ್ಷೆಯಿಂದ ರೈತರು ಸಾಲ ಸೋಲ ಮಾಡಿ ಗೊಬ್ಬರ, ಬೇಜ ಎಲ್ಲವನ್ನು ಭಿತ್ತನೆ ಮಾಡಿದ್ದರೆ. ಆದರೆ ಮುಂಗಾರು ತೀರಾ ದುರ್ಬಲವಾಗಿರುವುದರಿಂದ ಭಿತ್ತಿದ ಬೀಜಗಳು ಮೊಳಕೆಯೊಡೆಯಲೇ ಇಲ್ಲ. ಇದರಿಂದ ರೈತರಿಗೆ ಬಹಳಷ್ಟು ನಷ್ಟವಾಗಿದೆ.
ಮಳೆ ಇಲ್ಲದೆ ಬೆಳೆ ಕೈಗೆ ಬಾರದಿರುವುದರಿಂದ ರೈತರು ಜೀವನ ಮಾಡುವುದು ಹೇಗೆ ಎನ್ನುವ ಚಿಂತೆ ಶುರುವಾಗಿದೆ. ಇದಲ್ಲದೆ ಇದರ ಜೊತೆಗೆ ಗೊಬ್ಬರ ಬೇಜ ಗಳ ಖರೀದಿಗೆ ಖರ್ಚು ಮಾಡಿದ ಸಾಲವನ್ನು ತೀರಿಸಬೇಕಿದೆ.
ಇಂತಹ ಪರಿಸ್ಥಿಯಲ್ಲಿ ಸರ್ಕಾರ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದೆ, ಇದರಿಂದ ರೈತರಿಗೆ ಸ್ವಲ್ಪ ಮಟ್ಟಿಗಾದರೂ ಸಮಾದಾನವಾಗಿದೆ ಎನ್ನುವುದು ಎಲ್ಲರ ಭಾವನೆಯಾಗಿದೆ.
ಬೆಳೆ ಪರಿಹಾರ ಹಣ ಬಿಡುಗಡೆಗಾಗಿ ರಾಜ್ಯ ಸರ್ಕಾರ ಈಗಾಗಲೇ ಹಲವು ಬಾರಿ ಕೇಂದ್ರಸರ್ಕಾರಕ್ಕೆ ಮನವಿ ಮಾಡಿದೆ. ಕೇಂದ್ರ ಸರ್ಕಾರ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ ರಾಜ್ಯದ 236 ತಾಲೂಕುಗಳನ್ನು ಬರಪೀಡಿತವೆಂದು ಘೋಷನೆ ಮಾಡಿ, ಅಲ್ಲಿಗೆ ಬೇಟಿ ಮಾಡಿ ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಆದ್ದರಿಂದ ಆದಷ್ಟು ಬೇಗ ಕೇಂದ್ರ ಸರ್ಕಾರ ಬರ ಪರಿಹಾರದ ಹಣ ಬಿಡುಗಡೆ ಮಾಡಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿದೆ.
ಕೇಂದ್ರದ ನೆರವಿಗಾಗಿ ರಾಜ್ಯ ಸರ್ಕಾರ ಹೂಡ ಕಾದು ಕುಳಿತಿದೆ. ಆದರೆ ಕೇಂದ್ರ ಸರ್ಕಾರದ ನೆರವಿಗೆ ಕಾಯದೆ ರಾಜ್ಯ ಸರ್ಕಾರ ಶೀಘ್ರವೇ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ರೈತ ಸಮಾಧನಕ್ಕೆ ಸುದ್ದಿಯನ್ನು ನೀಡಿದೆ.
ಅದೇನು ಎಂದು ಹೆಳುವುದಾದರೆ ಕಳೆದ ವಾರವಷ್ಟೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರು ಸ್ವತಹ ಹೋಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬೇಟಿ ಮಾಡಿ ಬರ ಪರಿಹಾರದ ಹಣ ಬಿಡುಗಡೆಯ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಕೇಂದ್ರವೂ ರಾಜ್ಯದಲ್ಲಿ ಬರ ಪರಿಸ್ಥಿತಿಯ ಬಗ್ಗೆ ತಿಳಿದಿದ್ದು ಆದಷ್ಟು ಬೇಗ ಬರ ಪರಿಹಾರದ ಹಣ ಬಿಡುಗಡೆ ಮಾಉತ್ತೇವೆ ಎಂದು ಭರವಸೆ ನೀಡಿದೆ. ಹಾಗಾಗಿ ಇದಕ್ಕೆ ರಾಜ್ಯ ಸರ್ಕಾರ ಕೂಡ ಸಿದ್ದತೆ ನಡೆಸಿದೆ. ಈ ಬಾರಿ ಹಣವನ್ನು ಫ್ರೂಟ್ಸ್ ಐಡಿ (FRUITS ID) ಬಳಕೆ ಮಾಡಿ ವರ್ಗಾವಣೆ ಮಾಡಲು ನಿರ್ಧರಿಸಿದೆ. ಆದ್ದರಿಂದ ಪ್ರತಿಯೊಬ್ಬ ರೈತನು ಕೂಡ ಈ ಫ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳಬೇಕು, ಮಾಡಿಸಿಲ್ಲ ಅಂದ್ರೆ ಹಣ ಖಾತೆಗೆ ಜಮಾ ಆಗುವುದಿಲ್ಲ.
ಫ್ರೂಟ್ಸ್ ಐಡಿಯ ಮಾಡಿಸಿದರೆ ಈ ಐಡಿ ಮೂಲಕ ಹಣ ರೈತರ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ಇದರಿಂದ ಯಾವುದೆ ಮದ್ಯವರ್ತಿಗಳ ತೊಂದರೆ ಇಲ್ಲದೆ ನಿಮ್ಮ ಹಣ ನೀವು ಪಡೆಯಬಹುದು.
ಇತರೆ ವಿಷಯಗಳು:
ಮನೆ ನಿರ್ಮಿಸುವವವರಿಗೆ ಗುಡ್ ನ್ಯೂಸ್! ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡ ಕಬ್ಬಿಣ ಹಾಗೂ ಸಿಮೆಂಟ್
9 ಕೋಟಿ ರೈತರಿಗೆ 16 ನೇ ಕಂತಿನ 2000+2000 ಖಾತೆಗೆ! ಗಂಡ- ಹೆಂಡತಿ ಇಬ್ಬರಿಗೂ ಯೋಜನೆಯ ಲಾಭ ಫಿಕ್ಸ್!