rtgh

News

ಇನ್ಮುಂದೆ ಅಗ್ಗದ ಬೆಲೆಯಲ್ಲಿ ಹಿಟ್ಟು-ಬೇಳೆ-ಈರುಳ್ಳಿ.! ಮೋದಿ ಸರ್ಕಾರದ ಬಹು ದೊಡ್ಡ ಕೊಡುಗೆ

Published

on

ಹಲೋ ಸ್ನೇಹಿತರೇ, ಈ ಅಂಗಡಿಗಳ ಮೂಲಕ ನೀವು ಬೇಳೆಕಾಳುಗಳನ್ನು ಅಗ್ಗದ ಬೆಲೆಯಲ್ಲಿ ಪಡೆಯಬಹುದು. ಈ ಮಳಿಗೆಗಳಲ್ಲಿ ನೀವು ಬೇಳೆಕಾಳುಗಳು, ಹಿಟ್ಟು, ಅಕ್ಕಿ & ಸಕ್ಕರೆ ಸೇರಿದಂತೆ ಮನೆಯ ಪಡಿತರಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಪಡೆಯಬಹುದಾಗಿದೆ. ನೀವು ಪಡೆಯಲು ಬಯಸಿದರೆ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

bharat brand

ಭಾರತ್ ಬ್ರಾಂಡ್‌ನ ಯಶಸ್ಸು
ಭಾರತ್ ಬ್ರ್ಯಾಂಡ್‌ನ ಉತ್ಪನ್ನಗಳನ್ನು ಇದೀಗ ದೇಶಾದ್ಯಂತ ಮಾರಾಟ ಮಾಡಲು ಸಿದ್ಧತೆ ಮಾಡಲಾಗಿದೆ. ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾತ್ತಿದೆ. ಹಾಗೂ ಭಾರತ್ ಬ್ರಾಂಡ್‌ನ ವ್ಯಾಪ್ತಿಯಲ್ಲಿ ಹೆಚ್ಚು ಹೆಚ್ಚು ಆಹಾರ ಪದಾರ್ಥಗಳನ್ನು ತರಲು ಸಿದ್ಧತೆಯನ್ನು ನಡೆಸಲಾಗುತ್ತಿದೆ.

ಫ್ರಾಂಚೈಸಿ ವಿತರಿಸಲು ಯೋಜನೆ ರೂಪಿಸಲಾಗಿದೆ
ದೇಶಾದ್ಯಂತ ಏರಿಕೆಯಾಗುತ್ತಿರುವ ಹಣದುಬ್ಬರವನ್ನು ನಿಯಂತ್ರಣ ಮಾಡಲು ಭಾರತ್ ಬ್ರಾಂಡ್ ಅನ್ನು ಆರಂಭಿಸಲಾಗಿದೆ. ಸರ್ಕಾರ ಈ ಬ್ರಾಂಡ್‌ನಲ್ಲಿ ಹಿಟ್ಟು, ಬೇಳೆಕಾಳು & ಈರುಳ್ಳಿ ಮಾರಾಟ ಮಾಡುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕ ನಂತರ, ಅದರ ಫ್ರಾಂಚೈಸಿಯನ್ನು ವಿತರಣೆಗೆ ಸರ್ಕಾರ ಯೋಜಿಸುತ್ತಿದೆ.


ರಾಜೀವ್ ಚೌಕ್ ನಲ್ಲಿ ಮಳಿಗೆಗಳನ್ನು ತೆರೆಯಲಾಗಿದೆ
ಆಂಗ್ಲ ಮಾಧ್ಯಮದ ವೃತ್ತ ಪತ್ರಿಕೆಯ ವರದಿಯ ಪ್ರಕಾರ ಭಾರತ್ ಬ್ರಾಂಡ್‌ನ ಈ ಫ್ರಾಂಚೈಸಿ ಮೂಲಕ ಸರ್ಕಾರ ಕಡಿಮೆ ಬೆಲೆಯಲ್ಲಿ ಬೇಳೆಕಾಳುಗಳನ್ನು ನೀಡುತ್ತಿದೆ. ಸದ್ಯ ದೇಶದ ರಾಜಧಾನಿ ದೆಹಲಿಯಲ್ಲಿ ಮೊದಲು 50 ಮಳಿಗೆಗಳನ್ನು ಓಪನ್‌ ಮಾಡಲು ಯೋಜಿಸಲಾಗಿದೆ. ಈ ಮಳಿಗೆಗಳ ಕಾರ್ಯ ನಿರ್ವಹಿಸಲು ಸರ್ಕಾರ ಜನರನ್ನು ಹುಡುಕುತ್ತಿದೆ. ಕಳೆದ ತಿಂಗಳು ಸರ್ಕಾರ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಭಾರತ್ ಬ್ರಾಂಡ್‌ನ 2 ಮಳಿಗೆಗಳನ್ನು ತೆರೆದಿದೆ. 

ಎನ್ಸಿಸಿಎಫ್ ಮೂಲಕ ಮಳಿಗೆಗಳನ್ನು ತೆರೆಯಲಾಗುತ್ತಿದೆ
ದೆಹಲಿಯಲ್ಲಿ ತೆರೆದಿರುವ ಮಳಿಗೆಗಳಿಗೆ ಜನರು ಉತ್ತಮ ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದ್ದಾರೆ. ಭಾರತ್ ಬ್ರ್ಯಾಂಡ್‌ನ ಈ ಮಳಿಗೆಗಳನ್ನು ಭಾರತೀಯ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಅಡಿಯಲ್ಲಿ ಓಪನ್‌ ಮಾಡಲಾಗಿದೆ. ಇದೇ ವೇಳೆಗೆ, NCCF ಸರ್ಕಾರದ ಪರವಾಗಿ ಬೇಳೆಕಾಳುಗಳು, ಈರುಳ್ಳಿ, ಮಸಾಲೆಗಳು ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತದೆ. ಈ ಎಲ್ಲಾ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಯಶಸ್ಸಿನ ನಂತರ, ಅನೇಕ ನಗರಗಳಲ್ಲಿ ಮಳಿಗೆಗಳನ್ನು ತೆರೆಯಲಾಗುತ್ತದೆ
ಈ ಮಳಿಗೆಗಳು ಉತ್ತಮ ಯಶಸ್ಸನ್ನು ಕಂಡ ನಂತರ ಅಂತಹ ಅನೇಕ ಮಳಿಗೆಗಳನ್ನು ಮುಂಬೈ, ಚೆನ್ನೈ & ಬೆಂಗಳೂರಿನಲ್ಲಿ ತೆರೆಯಲಾಗುತ್ತದೆ. ನಂತರ ಹಂತಹಂತವಾಗಿ ಎಲ್ಲಾ ಕಡೆ ತೆರೆಯಲಾಗುತ್ತದೆ.

ಇತರೆ ವಿಷಯಗಳು

ಗೃಹಲಕ್ಷ್ಮಿ 6 ನೇ ಕಂತಿನ ಹಣ ಯಾವಾಗ? ಈ ಕೆಲಸ ಮಾಡಿದವರ ಖಾತೆಗೆ ಮಾತ್ರ ದುಡ್ಡು.! ಹೊಸ ರೂಲ್ಸ್

ವಿದ್ಯಾರ್ಥಿಗಳ ಗಮನಕ್ಕೆ.! SSLC ಮತ್ತು 2nd PUC ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

Treading

Load More...