ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಸ್ಸ್‌ನಲಿ ಪ್ರಯಾಣಿಸುವವರಿಗೆ ಹೊಸ ನಿಯಮನ್ನು ಜಾರಿ ಮಾಡಿದ್ದಾರೆ. ಇನ್ಮುಂದೆ ಬಸ್ಸ್‌ನಲ್ಲಿ ಪ್ರಯಾಣ ಮಾಡುವಾಗ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿನೆ ಮಾಡಬೇಕು ಎಂದು ಹೇಳಿದ್ದಾರೆ. ಯಾವ ನಿಯಮಗಳನ್ನು ಜಾರಿ ಮಾಡಿದ್ದಾರೆ ಎಂದು ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ, ಮಿಸ್ ಮಾಡದೆ ಕೊನೆಯವರೆಗೂ ಓದಿ.
ಕಳೆದ 3 ವರ್ಷಗಳ ಹಿಂತೆ ಕೊರೊನಾ ಮಹಾಮಾರಿ ದೇಶಾದ್ಯಂತ ಆವರಿಸಿತ್ತು. ಈ ವೈರಸ್ ಜನರನ್ನು ಎಷ್ಟು ಹಿಂಸೆ ಮಾಡಿದೆ ಎಂದು ಇಡಿ ಪ್ರಪಂಚದ ಜನರಿಗೆ ತಿಳಿದಿರುವ ವಿಷಯ.
ಇಡೀ ದೇಶದಲ್ಲಿ ಯಾವುದೇ ಯುದ್ದ ನಡೆಯದೆ ಲಕ್ಷ ಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ, ಇಂತಹ ಸಂದರ್ಭ ಮತ್ತೆ ಇನ್ನೆಂದು ಬರಬಾರದು ಎಂದು ಈಗಲೂ ಸರ್ಕಾರ ಹಲವು ಮಾರ್ಗಸೂಚಿಗಳನ್ನು ತರುತ್ತಿದೆ, ಹೆಚ್ಚಿನ ಮುತುವರ್ಜಿಯನ್ನು ವಹಿಸಿಕೊಂಡು ಬಂದಿದೆ, ಈ ನಿಯಮಗಳನ್ನು ಸಾರ್ವಜನಿಕರು ಪಾಲಿಸುವುದು ಅನಿವಾರ್ಯವಾಗಿದೆ.
ಮತ್ತೆ ಕೋವಿಡ್ ಅಕ್ರಮಣ ( Covid-19)
ಈಗ ಜೆಎನ್ 1 ಸೋಂಕು ಮತ್ತೆ ಬೇರೆ ರೂಪಾಂತರಗಳಲ್ಲಿ ಹುಟ್ಟಿಕೊಂಡಿದೆ, ಇದರ ಬಗ್ಗೆ ಈಗಾಗಲೇ ಇಡೀ ದೇಶಾದ್ಯಂತ ಚರ್ಚೆಗಳು ನಡೆಯುತ್ತಿದೆ. ಬಹಳಷ್ಟು ಜನ ಅನಾರೋಗ್ಯದಿಂದ ಬಳಲುವಂತಾಗಿದೆ. ಆದರೆ ಇದು ದೊಡ್ಡ ಸಮಸ್ಯೆ ಆಗಬರದು. ಮತ್ತೆ ಈ ಸೋಂಕು ಯಾರಿಗೂ ಹರಡಬಾರದು ಎನ್ನುವ ಕಾರಣಕ್ಕೆ ಸರ್ಕಾರ ರಾಜ್ಯದ ಜನತೆಗೆ ಕೆಲವು ಪ್ರಮುಖ ನಿಯಮಗಳನ್ನು ಇಳಿಸಿದೆ.
ಬಸ್ಸಿನಲ್ಲಿ ಪ್ರಯಾಣಿಸುವಾಗ ಈ ನಿಯಮ ಕಡ್ಡಾಯವಾಗಿ ಪಾಲಿಸಬೇಕು
ಬಸ್ಸಿನಲ್ಲಿ ತೆರಳುವವರಿಗೆ ಸರ್ಕಾರ ಹೊಸ ನಿಯಮ ಕಡ್ಡಾಯಗೊಳಿಸಿದೆ. ಇನ್ಮುಂದೆ ಬಸ್ಸಿನಲ್ಲಿ 60 ವರ್ಷ ಮೇಲ್ಪಟ್ಟವರಾಗಿದ್ದರೆ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ತಿಳಿಸಲಾಗಿದೆ. ಹಾಗೆಯೇ ಜನಜಂಗುಳಿ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಜನರು ಸೇರುವ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಸ್ಯಾನಿಟೈಸೇಷನ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಸಹ ಓದಿ: PM-SYM ಫಲಾನುಭವಿಗಳಿಗೆ ಪ್ರತಿ ತಿಂಗಳು ₹3000!! ಈ ಯೋಜನೆಯಡಿ ಇಂದೇ ನಿಮ್ಮ ಹೆಸರನ್ನು ನೋಂದಾಯಿಸಿ
ಸರ್ಕಾರದ ನಿಯಮ ಪಾಲಿಸದೆ ಇದ್ರೆ ಅಪಾಯ ಗ್ಯಾರಂಟಿ!
ಕರ್ನಾಟಕ ಸರ್ಕಾರ ಈಗಾಗಲೇ ಕೊರೊನಾದ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ರಾಜ್ಯದಲ್ಲಿಯೂ ಕೂಡ ಕೊರೊನಾ ಹೊಸ ಪ್ರಕರಣಗಳು ಪಟ್ಟಿಯಾಗುತ್ತಿವೆ. ಹಾಗಾಗಿ ಜನರು ಹೆಚ್ಚು ಮುತುವರ್ಜಿಯಿಂದ ಇರುವುದು ಒಳ್ಳೆಯದು. ಅವರ ಆರೋಗ್ಯಕ್ಕೆ ಅವರೇ ಜವಾಬ್ದಾರರಾಗಿರುತ್ತಾರೆ. ಸಾರ್ವಜನಿಕ ಬಸ್ಸ್ ಗಳಲ್ಲಿ ಪ್ರಯಾಣಿಸುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಲೇಬೇಕು ಎಂದು ಕಡ್ಡಾಯ ನಿಯಮವನ್ನು ಸರ್ಕಾರ ಹೊರಡಿಸಿದೆ. ಇದರ ಬಗ್ಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮಾಧ್ಯಮದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜ್ಯದ ಪ್ರತಯೊಬ್ಬರು ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದು ಸಚಿವರು ತಿಳಿಸಿದ್ದಾರೆ, ಅದರಲ್ಲೂ ವಿಶೇಷವಾಗಿ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸುವವರು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಅವರು ಹೇಳಿದ್ದಾರೆ.
ಸರ್ಕಾರದ ಕೋವಿಡ್ ಮಾರ್ಗಸೂಚಿಯಲ್ಲಿ ಏನಿದೆ?
- ಜ್ವರ, ಕೆಮ್ಮು ಹಾಗೂ ಉಸಿರಾಟದ ಸಮಸ್ಯೆ ಇದ್ದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು.
- ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಬಳಿ ವಾಸಿಸುವವರು ಕೆಮ್ಮು ಶೀತ ಕೆಮ್ಮು ಅಥವಾ ಜ್ವರದ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕು.
- ಅವರ ಆರೋಗ್ಯಕ್ಕೆ ಅವರೆ ಜವಬ್ದಾರರು, ವೈಯಕ್ತಿಕ ಸ್ವಚ್ಛತೆ ಬಗ್ಗೆ ಜನರು ಜಾಗರೂಕತೆಯಿಂದ ಇರಬೇಕು, ಪದೆ ಪದೆ ಕೈಗಳನ್ನು ತೊಳೆಯುವುದು ಸ್ವಚ್ಛವಾಗಿ ಇರುವುದು ಬಹಳ ಮುಖ್ಯ .
- ಹಾಗೆಯೇ ಸರ್ಕಾರದ ಈ ಎಲ್ಲಾ ನಿಯಮಗಳನ್ನು ನೀವು ಪಾಲಿಸುತ್ತಿರೋ ಇಲ್ಲವೋ ಗೊತ್ತಿಲ್ಲ. ಆದರೆ ನಿಮ್ಮ ಸುರಕ್ಷತೆ ಜೊತೆಗೆ ನಿಮ್ಮ ಕುಟುಂಬದ ಸುರಕ್ಷತೆಯನ್ನು ನೀವು ಮಾಡಿಕೊಳ್ಳಲೇ ಬೇಕು. ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ.
ಇತರೆ ವಿಷಯಗಳು:
ಬರಗಾಲದಿಂದ ಕಂಗೆಟ್ಟ ರೈತರಿಗೆ ಸರ್ಕಾರದ ಆರ್ಥಿಕ ನೆರವು.! ರಾಜ್ಯದ ರೈತರಿಗೆ ಎಲ್ಲಾ ಬೆಳೆಯ ಬೀಜದ ಕಿಟ್ ಉಚಿತ
ಗ್ಯಾಸ್ ಸಬ್ಸಿಡಿ ಪಡೆಯಲು ಕೇಂದ್ರದಿಂದ ಕೊನೆಯ ಅವಕಾಶ!! ಡಿಸೆಂಬರ್ ಒಳಗೆ ಮನೆಯಲ್ಲೇ KYC ಅಪ್ಡೇಟ್ ಮಾಡಿ