rtgh

Scheme

ಅನ್ನಭಾಗ್ಯ ಹಣ ಪ್ರತಿ ರೇಷನ್‌ ಕಾರ್ಡುದಾರರ ಖಾತೆಗೆ ಬಂದಿದೆ! ಇಲ್ಲಿಂದ ಬೇಗ ಸ್ಟೇಟಸ್‌ ಚೆಕ್‌ ಮಾಡಿ

Published

on

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವುನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಕರ್ನಾಟಕ ರಾಜ್ಯ ಸರ್ಕಾರದಿಂದ 5 ಕೆ. ಜಿ ಅಕ್ಕಿಯ ಜೊತೆಗೆ ಹೆಚ್ಚುವರಿ ಅಕ್ಕುಯನ್ನು ಒದಗಿಸಲು ಸಾಧ್ಯವಿಲ್ಲದ ಕಾರಣ ನೇರವಾಗಿ ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.

Deposit rice money to the account

ಕಾಂಗ್ರೆಸ್‌ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 5 ಗ್ಯಾರಂಟೀಗಳಲ್ಲಿ ಅನ್ನಭಾಗ್ಯ ಯೋಜನೆಯು ಒಂದು ಕೇಂದ್ರ ಸರ್ಕಾರವು ಉಚಿತವಾಗಿ 5 ಕೆ.ಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದಲೂ 5 ಕೆ.ಜಿ ಅಕ್ಕಿಯನ್ನು ಕೊಡುವುದಾಗಿ ರಾಜ್ಯ ಕಾಂಗ್ರೆಸ್‌ ಸರ್ಕಾರವು 5 ಗ್ಯಾರಂಟೀ ಯೋಜನೆಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಯ ಮೂಲಕ ಎಲ್ಲಾ ನಾಗರೀಕರಿಗೂ ಒಟ್ಟು 10 ಕೆ.ಜಿ ಅಕ್ಕಿಯನ್ನು ಕೊಡುವುದಾಗಿ ಘೋಷಣೆ ಮಾಡಿತ್ತು.

10 ಕೆ.ಜಿ ಉಚಿತ ಅಕ್ಕಿಯನ್ನು BPL ಕಾರ್ಡ್‌ ಹಾಗೂ ಅಂತ್ಯೋದಯ ಕಾರ್ಡು ಹೊಂದಿರುವವರು ಪಡೆಯಬಹುದಾಗಿತ್ತು. ಆದರೆ ಸರ್ಕಾರಕ್ಕೆ ಮಾತ್ರ ಇದುವರೆಗೆ ಹೆಚ್ಚುವರಿ ಅಕ್ಕಿಯನ್ನು ಒದಗಿಸಲು ಸಾಧ್ಯವಾಗದೆ ಉಚಿತ 5 ಕೆ.ಜಿ ಅಕ್ಕಿಯ ಬದಲಿಗೆ ಪ್ರತಿಯೊಬ್ಬ ಫಲಾನುಭವಿಗಳ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಲಾಗುತ್ತದೆ.


ಪ್ರತಿಯೊಬ್ಬರಿಗೂ ತಿಳಿದಿರುವಂತೆ ಪ್ರತಿ ಕೆ.ಜಿ ಅಕ್ಕಿಗೆ 34 ರೂಪಾಯಿಗಳಂತೆ 5 ಕೆ.ಜಿ ಅಕ್ಕಿಗೆ ಪ್ರತಿ ಕಾರ್ಡಿನ ಸದಸ್ಯರಿಗೂ 170 ರೂಪಾಯಿಗಳಂತೆ ನೇರ ಖಾತೆಗೆ ಆ ಹಣವನ್ನು ಮನೆಯ ಯಜಮಾನಿಯ ಖಾತೆಗೆ ವರ್ಗಾಯಿಸಲಾಗುತ್ತದೆ. ಪ್ರತಿ ತಿಂಗಳು ಹಣ ಜಮಾವಾಗುತ್ತದೆ. ಈ ಹಣವು KYC ಆಗಿರುವಂತಹ ಖಾತೆಗೆ ಸಂದಾಯವಾಗುತ್ತದೆ.

ಇದನ್ನು ಸಹ ಓದಿ: ಡಿಸೆಂಬರ್‌ 31ರೊಳಗೆ ITR ಫೈಲ್‌ ಸಲ್ಲಿಸಿ; ಇಲ್ಲದಿದ್ರೆ 5 ಸಾವಿರ ದಂಡ ಕಡ್ಡಾಯ!

ಕಳೆದ 4 ತಿಂಗಳಿನಿಂದಲೂ ಸರ್ಕಾರ ಅಕ್ಕಿಯನ್ನು ಒದಗಿಸುವ ಬಗ್ಗೆ ಮಾತಾನಾಡುತ್ತಿದೆ ಆದರೆ ಹೆಚ್ಚುವರಿಯ ಅಕ್ಕಿಯನ್ನು ಒದಗಿಸಲೂ ಈಗಲೂ ಕೂಡ ಸಾಧ್ಯವಾಗದ ಕಾರಣ ಫಲಾನುಭವಿಗಳ ಖಾತೆಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುತ್ತಿದೆ.

ಇದೀಗ 4 ನೇ ಕಂತಿನ ಹಣವು ಹಂತ-ಹಂತವಾಗಿ ಪ್ರತಿ ಜಿಲ್ಲೆಯ ಜನರಿಗೂ ಕೂಡ ತಲುಪುತ್ತಿದೆ. ನಿಮ್ಮ ಖಾತೆಗೂ ಕೂಡ ನವೆಂಬರ್‌ ತಿಂಗಳಿನ ಹಣ ಖಾತೆಗೆ ಬಂದಿದೆಯೋ ಇಲ್ಲವೋ ಎಂಬುದನ್ನು ಡಿ.ಬಿಟಿ ಮೂಲಕ ಕರ್ನಾಟಕ ಮೊಬೈಲ್‌ APP ಮೂಲಕ ನೀವು ಸ್ಟೇಟಸ್‌ ಚೆಕ್‌ ಮಾಡಬಹುದು. ಹಾಗೂ ಅಧಿಕೃತ ವೆಬ್ಸೈಟ್‌ ಗೆ ಹೋಗಿ ಚೆಕ್‌ ಮಾಡಬಹುದು.

DBT ಸ್ಟೇಟಸ್ ಚೆಕ್ ಮಾಡುವುದು ಹೇಗೆ ?

  • ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ https://ahara.kar.nic.in/lpg/ ಗೆ ಭೇಟಿ ನೀಡಿ.
  • ಈ ಸರ್ವಿಸ್ ವಿಭಾಗಕ್ಕೆ ಹೋಗಿ ಎಡ ಭಾಗದಲ್ಲಿ ಕಾಣುವ ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿರಿ.
  • 3ನೆಯ ಹಂತವಾಗಿ ಡಿ ಬಿ ಟಿ ಸ್ಟೇಟಸ್ ಚೆಕ್ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಬಳಿಕ ಜಿಲ್ಲಾವಾರು ವಿಭಜನೆ ಮಾಡಲಾಗಿರುವಂತಹ ಬೇರೆ ಬೇರೆ ಜಿಲ್ಲೆಯ ಹೆಸರುಗಳು ಕಾಣಿಸುತ್ತವೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಆ ಜಿಲ್ಲೆಯ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಈಗ DBT ವರ್ಗಾವಣೆ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಹೊಸ ಪುಟ ತರೆದುಕೊಳ್ಳುತ್ತದೆ ಅಲ್ಲಿ ನೀವು ವರ್ಷ ತಿಂಗಳು ರೇಷನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚರ್ ಕೋಡ್ ನಮೂದಿಸಿ ‌GO ಎಂದು ಕ್ಲಿಕ್ ಮಾಡಿ.
  • ಇಷ್ಟು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆಯ ವಿವರ, ಮನೆಯಲ್ಲಿ ಎಷ್ಟು ಸದಸ್ಯರಿದ್ದೀರಿ ಹಾಗೂ ಎಷ್ಟು ಹಣ ಸಿಗುತ್ತದೆ ಎಂಬ ಎಲ್ಲಾ ಮಾಹಿತಿಗಳನ್ನು ನೀವು ಅಲ್ಲಿ ತಿಳಿದುಕೊಳ್ಳಬಹುದು.

ಸಾಕಷ್ಟು ಜನರು ಬ್ಯಾಂಕ್‌ ಖಾತೆಗೆ KYC ಮಾಡಿಸಿಕೊಳ್ಳದೆ ಹಾಗೂ ಆಧಾರ್‌ ಲಿಂಕ್‌ ಆಗದೇ ಇರುವಂತಹ ಖಾತೆಗೆ ಹಣ ವರ್ಗಾವಣೆ ಆಗುವುದಿಲ್ಲ. ಹಾಗೂ ಈಗಲೂ ಕೂಡ ನಿಮ್ಮ ಖಾತೆಗೆ ಕೆವೈಸಿ ಮಾಡಿಸಿಕೊಂಡರೆ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೂ ಕೂಡ ಅಕ್ಕಿ ಹಣವು ಖಾತೆಗೆ ಬರುತ್ತದೆ. ಬ್ಯಾಂಕ್‌ ಖಾತೆಗೆ ಹೋಗಿ ಕೆವೈಸಿ ಮಾಡಿಸಿಕೊಳ್ಳುವುದರ ಜೊತೆಗೆ ರೇಷನ್‌ ಕಾರ್ಡ್‌ ಕೆವೈಸಿ ಸಹ ಮಾಡಿಸಿಕೊಳ್ಳಬೇಕಾಗುತ್ತದೆ.

ಇತರೆ ವಿಷಯಗಳು:

ಆರ್‌ಬಿಐ ನೀಡುತ್ತೆ 20 ಲಕ್ಷ ರೂ.; ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ??

1.41 ಲಕ್ಷ ರೈತರ ಖಾತೆಗೆ ನಾಳೆಯಿಂದಲೇ ಬೆಳೆ ವಿಮಾ ಹಣ ಜಮಾ! ಸರ್ಕಾರದ ಮಹತ್ವದ ಘೋಷಣೆ!!

Treading

Load More...