rtgh

Information

ಚಿನ್ನ ಅಡವಿಟ್ಟು ಸಾಲ ಪಡೆಯುತ್ತಿದ್ದೀರಾ? ಹಾಗಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ

Published

on

ಹಲೋ ಸ್ನೇಹಿತರೇ, ಸಾಕಷ್ಟು ಜನರು ಚಿನ್ನದ ಮೇಲೆ ಸಾಲವನ್ನು ತೆಗೆದುಕೊಳ್ಳುತ್ತಾರೆ. ಗೃಹ ಸಾಲ, ವೈಯಕ್ತಿಕ ಸಾಲ ಎಲ್ಲದರ ಮೇಲೆ ಸಾಲ ಪಡೆಯುವುದಕ್ಕಿಂತ ಚಿನ್ನದ ಮೇಲೆ ಸಾಲ ಪಡೆಯುವುದು ತುಂಬ ಸುಲಭ. ಆದರೆ ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಹೊಸ ರೂಲ್ಸ್‌ ಮಾಡಲಾಗಿದೆ.

gold loan

ಬ್ಯಾಂಕ್‌ ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳು ಚಿನ್ನದ ಮೇಲೆ ಸಾಲವನ್ನು ಬೇಗನೆ ನೀಡುತ್ತವೆ. ಕೆಲವರು ಚಿನ್ನದ ಮೇಲೆ ಸಾಲವನ್ನು ಮಾಡಿ ಸಾಲವನ್ನು ತೀರಿಸಲಾಗದೆ ಅಡವಿಟ್ಟ ಚಿನ್ನವನ್ನು ಕಳೆದುಕೊಳ್ಳುತ್ತಾರೆ. ಕೆಲ ಕಂಪನಿಗಳು ಅಂತಹ ಚಿನ್ನವನ್ನು ಹರಾಜು ಮಾಡುತ್ತದೆ. ನಮ್ಮ ಭಾರತದಲ್ಲಿ 6 ಲಕ್ಷ ಕೋಟಿ ಚಿನ್ನದ ಮಾರುಕಟ್ಟೆ ಇದು ಇದರಲ್ಲಿ 80% ಪಾಲು ಬ್ಯಾಂಕ್‌ಗಳದ್ದು ಇನ್ನು ಉಳಿದ 20 % ಬ್ಯಾಂಕೇತರ ಹಣಕಾಸು ಸಂಸ್ಥೆಗಳು

ಬೇರೆ ಕಡೆ ಸಾಲವನ್ನು ಮಾಡಿ ಅದನ್ನು ತೀರಿಸಲು ಚಿನ್ನವನ್ನು ಅಡವಿಟ್ಟು ತದನಂತರ ಅದನ್ನು ಕೂಡ ತೀರಸಲಾಗದೆ ಬ್ಯಾಂಕ್‌ ಅಥವ ಹಣಕಾಸು ಸಂಸ್ಥೆಗಳು ಅಂತಹ ಚಿನ್ನವನ್ನು ಹರಾಜು ಕರೆಯುತ್ತವೆ. ಬಡ್ಡಿಯ ಜೊತೆಗೆ ಅಸಲನ್ನು ಸ್ವಲ್ಪ ಸ್ವಲ್ಪವೇ ಕಟ್ಟಿದರೆ ನಿಮ್ಮ ಸಾಲ ಬೇಗನೆ ತೀರಿಹೋಗುತ್ತದೆ.


ಹರಾಜಿನಲ್ಲಿ ಕಳೆದುಕೊಂಡ ಚಿನ್ನ ಮತ್ತೆ ಹಿಂತಿರುಗಿಸಲಾಗುವುದಿಲ್ಲ

ಅಡವಿಟ್ಟ ಚಿನ್ನವನ್ನು ಒಮ್ಮೆ ಹರಾಜು ಕರೆದು ಅದು ನಮ್ಮ ಕೈ ತಪ್ಪಿ ಹೋದರೆ ಮತ್ತೆ ಅದನ್ನು ಹಿಂದಿರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭವನ್ನು ತಪ್ಪಿಸಲು ನೀವು ಚಿನ್ನವನ್ನು ಮಾರಾಟ ಮಾಡುವುದರ ಮೂಲಕ ಸಾಲವನ್ನು ಪಡೆಯುವುದು ಉತ್ತಮ.

ನಿಮ್ಮ ಆಸ್ತಿಗಿಂತಲು ನಿಮ್ಮ ಸಾಲವೇ ಜಾಸ್ತಿ ಇದ್ದರೆ. ಇದರೆ ಮಧ್ಯೆ ಮತ್ತೆ ಹೊಸ ಸಾಲವನ್ನು ಪಡೆಯುವ ಮುನ್ನ ನಿಮ್ಮ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ನಿಮ್ಮ ಸಾಲದ ಹೊರೆಗಳನ್ನು ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಚಿನ್ನದ ಮೊತ್ತ ಸಾಲಕ್ಕಿಂತ ಹೆಚ್ಚಿಗೆ ಇದ್ದರೆ ಸಾಲದ ಅವಧಿ ವಿಸ್ತರಿಸಬಹುದಾಗಿದೆ. ಇದಕ್ಕೆ ಕೆಲವು ಕಂಪನಿಗಳು ಸಹಾಯ ಮಾಡುತ್ತದೆ. ಇಂತಹ ಸಂದರ್ಭದಲ್ಲಿ ಅದನ್ನು ಮತ್ತೊಂದು ಕಂಪನಿಗೆ ವರ್ಗಾಯಿಸಬಹುದಾಗಿದೆ.

ಈ ಜಿಲ್ಲೆಯ ರೈತರಿಗೆ ದಶಕದ ನಂತರ ಎಕರೆಗೆ 5 ಸಾವಿರ ಬೆಳೆ ನಷ್ಟ ಪರಿಹಾರ ಘೋಷಣೆ…!

ಟಿಕೆಟ್ ರಹಿತ ಪ್ರಯಾಣ: ನವೆಂಬರ್‌ನಲ್ಲಿ 7 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ

Treading

Load More...