ಹಲೋ ಸ್ನೇಹಿತರೇ, ಈ ವರ್ಷದ ಮಳೆಯ ಕೊರತೆ ಹೆಚ್ಚಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೃಷಿ ಕೆಲಸಕ್ಕೆ ಸಾಕಷ್ಟು ತೊಂದರೆಯಾಗಿದೆ. ಮಳೆಯಿಲ್ಲದೆ ಬೆಳೆದ ಬೆಳೆಯೆಲ್ಲ ನಾಶವಾಗಿದೆ. ಮತ್ತೊಂದೆಡೆ ಹಸುಗಳಿಗೆ ಮೇವಿನ ಕೊರತೆಯು ಕೂಡ ಆಗಿದ್ದು ಇದನೆಲ್ಲ ಸುಧಾರಣೆ ಮಾಡುವ ನಿಟ್ಟಿನಿಲ್ಲಿ ರಾಜ್ಯ ಸರ್ಕಾರ ಇದರ ಬಗ್ಗೆ ಕ್ರಮವನ್ನು ಕೈಗೊಳ್ಳಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಅಧಿವೇಶನದಲ್ಲಿ ಚರ್ಚೆ:
ಜಾನುವಾರುಗಳಿಗೆ ಮೇವಿನ ಸಮಸ್ಯೆ ಇದು ರೈತರಿಗು ಸಮಸ್ಯೆಯಾಗಲಿದೆ. ರೈತರಿಗೆ ಉಚಿತವಾಗಿ ಮೇವಿನ ಬೀಜದ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತದೆ. ಇದಕ್ಕೆ 22 ಕೋಟಿ ರೂ ಅನುದಾನವನ್ನು ಮೀಸಲಿಡಲಾಗುತ್ತದೆ. ಮೇವಿನ ಉತ್ಪಾದನೆಯನ್ನು ಪ್ರೋತ್ಸಾಯಿಸಲು 8,17,42 ಮೇವಿನ ಬೀಜದ ಸಣ್ಣ ಪೊಟ್ಟಣಗಳನ್ನುಖರೀದಿ ಮಾಡಲಾಗುವುದು. ಯಾವೆಲ್ಲ ತಾಲೂಕಗಳಿಗೆ ಬರ ಘೋಷಣೆ ಮಾಡಲಾಗಿದೆ ಆ ಎಲ್ಲಾ ಜಿಲ್ಲೆಗಳಿಗು ಉಚಿತವಾಗಿ ಮೇವಿನ ಬೀಜಗಳನ್ನು ವಿತರಣೆ ಮಾಡಲಾಗುವುದು.
ಬರಗಾಲದಿಂದ ಈಗಾಗಲೇ ಇಡೀ ರಾಜ್ಯವೇ ಕಂಗೆಟ್ಟಿದೆ ಪ್ರಸ್ತುತವಾಗಿ ಸಂಗ್ರಹವಾಗಿದ್ದ ಮೇವು 26 ವಾರಕ್ಕೆ ಸಾಕಾಗಲಿದೆ. 142 ಲಕ್ಷ ಟನ್‌ನಷ್ಟು ಮೇವು ರಾಜ್ಯದ ರೈತರ ಬಳಿಯಲ್ಲಿ ಲಭ್ಯವಿದೆ. ಸದ್ಯದಲ್ಲಿ ಯಾವುದೇ ತೊಂದರೆಗಳು ಆಗಿಲ್ಲ.
ಪೂರ್ವ ಸಿದ್ಧತೆ:
ಈಗಾಗಲೇ ಬರಗಾಲದಿಂದ ಇಡೀ ರಾಜ್ಯ ಹೈರಾಣಾಗುತ್ತಿದೆ. ಪ್ರಸ್ತುತ ಸಂಗ್ರಹವಾಗಿರುವ ಮೇವು 2 6ವಾರಗಳಿಗೆ ಸಾಕಾಗಲಿದೆ 142ಲಕ್ಷ ಟನ್ ಮೇವು ಈಗ ರಾಜ್ಯದ ರೈತರ ಬಳಿ ಲಭ್ಯವಿದೆ. ಸದ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಅದು ಎಲ್ಲ ಖಾಲಿ ಆಗುವ ಮೊದಲು ಮೇವಿನ ಪೊಟ್ಟಣದ ವಿತರಣೆ ಮತ್ತು ಎಲ್ಲ ಕಾರ್ಯವಿಧಾನದಿಂದ ಪರಿಸ್ಥಿತಿ ಸಮತೋಲನಕ್ಕೆ ತರಲಾಗುವುದು. ಪೂರ್ವ ಸಿದ್ಧತೆ ಬಗ್ಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಹೊರ ರಾಜ್ಯಕ್ಕೆ ಮೇವಿನ ಸಾಗಾಟ ಇಲ್ಲ:
ಮೇವು ಪೂರೈಕೆ ಕಡಿಮೆ ಇರುವ ಕಾರಣ ಬೇರೆ ರಾಜ್ಯಕ್ಕೆ ಮೇವಿನ ರಫ್ತು ಮಾಡುವುದು ಕಡಿತಗೊಳಿಸಲಾಗಿದೆ. ನಮ್ಮಲ್ಲಿ ಕೊರತೆ ಇಲ್ಲದಾಗ ಈ ನಿರ್ಬಂಧ ಇರದು ಆದರೆ ಈಗ ರಾಜ್ಯಕ್ಕೆ ಕಡಿಮೆ ಮೇವು ಇರುವ ಕಾರಣ ಬೇರೆ ರಾಜ್ಯಕ್ಕೆ ಸಾಗಾಟ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಎಲ್ಲ ಜಿಲ್ಲಾವಾರು ಆದೇಶ ಹೊರಡಿಸಿರುವುದಾಗಿ ಪಶುಸಂಗೋಪನೆ ಅಭಿವೃದ್ಧಿ ಸಚಿವ ಕೆ. ವೆಂಕಟೇಶ್ ಅವರು ಹೇಳಿದ್ದಾರೆ.
ಇತರೆ ವಿಷಯಗಳು
ಹೊಸ ವರ್ಷದಿಂದ ಬದಲಾಗಲಿದೆ ಸಿಮ್ ಕಾರ್ಡ್ ನಿಯಮ: ರೂಲ್ಸ್ ಬ್ರೇಕ್ ಮಾಡಿದ್ರೆ 10 ಲಕ್ಷ ದಂಡ..!
ಹಿರಿಯರಿಗೆ ಗುಡ್ ನ್ಯೂಸ್.!! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗಿಲ್ಲ ಯಾವುದೇ ಹಣ; ನೀವು ಒಮ್ಮೆ ಈ ರೀತಿ ಮಾಡಿ