ಹಲೋ ಸ್ನೇಹಿತರೇ, ಗೃಹಜ್ಯೋತಿ ಯೋಜನೆಯ ಪ್ರಯೋಜನ ಪಡೆಯುತ್ತಿರುವವರು ತಿಳಿದುಕೊಳ್ಳಲೇಬೇಕಾದ ಮಾಹಿತಿ. ಜ.18ರಂದು ನಡೆದ ಸಂಪುಟ ಸಭೆಯಲ್ಲಿ ಈ ಯೋಜನೆ ನಿಯಮದಲ್ಲಿ ಅಲ್ಪ ಬದಲಾವಣೆ ಮಾಡಲು ನಿರ್ಧಾರ ಕೈಗೊಂಡಿದ್ದಾರೆ. 48 ಯೂನಿಟ್‌ಗಿಂತ ಕಡಿಮೆ ಬಳಸುವವರಿಗೆ 10 ಯೂನಿಟ್ ಫ್ರೀ ಕೊಡಲು ನಿರ್ಧಾರವನ್ನು ಮಾಡಲಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.
ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಪೈಕಿ ಗೃಹಜ್ಯೋತಿ ಯೋಜನೆ ಒಂದಾಗಿದ್ದು. ಈ ಯೋಜನೆಯಲ್ಲಿ 200 ಯೂನಿಟ್ ವರೆಗೂ ವಿದ್ಯುತ್ ಫ್ರೀಯಾಗಿ ನೀಡುತ್ತಿದ್ದು. ಗ್ರಾಹಕರು ತಾವು ಬಳಕೆ ಮಾಡಿದ 200 ಮೀಟರ್ ಒಳಗಿನ ವಿದ್ಯುತ್ ಯೂನಿಟ್‌ಗಿಂತ ಹೆಚ್ಚುವರಿಯಾಗಿ ಬಲಸಿದ್ರೆ 10% ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು. ಆದರೆ ಇದರಲ್ಲಿ ಈಗ ಬದಲಾವಣೆಯನ್ನು ತರಲಾಗಿದೆ.
ಗುರುವಾರ ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು. ಅದರ ಪ್ರಕಾರ ಈವರೆಗೆ ನೀಡಲಾಗುತ್ತಿದ್ದ ಶೇ 10% ಬದಲಾಗಿ 10 ಯೂನಿಟ್ ವಿದ್ಯುತ್‌ನ್ನು ರಿಯಾಯಿತಿ ನೀಡಲು ಸರ್ಕಾರ ನಿರ್ಧಾರವನ್ನು ಮಾಡಿದೆ. ಇದರಿಂದ ಅತಿ ಕಡಿಮೆ ವಿದ್ಯುತ್ ಬಳಸುವವರಿಗೆ ಹೆಚ್ಚು ಲಾಭ, 200 ಯೂನಿಟ್ ಹತ್ತಿರದವರೆಗೂ ವಿದ್ಯುತ್‌ನ್ನು ಬಳಕೆ ಮಾಡುತ್ತಿರುವವರಿಗೆ ಈ ಹೊಸ ನಿಯಮಗಳಿಂದ ಯೂನಿಟ್‌ನ ಲೆಕ್ಕಾಚಾರದಲ್ಲಿ ಫ್ರೀಯಾಗಿ ಸಿಗುವ ಯೂನಿಟ್‌ನಲ್ಲಿ ಕೊಂಚ ಕಡಿತವಾಗಲಿದೆ.
ಉದಾಹರಣೆಗೆ ಓರ್ವ ಗ್ರಾಹಕ ಸರಾಸರಿಯಾಗಿ 43 ಯೂನಿಟ್ ವಿದ್ಯುತ್ ಬಳಕೆ ಮಾಡಿದ್ರೆ ಈವರೆಗಿನ ನಿಯಮದ ಪ್ರಕಾರ ಅದಕ್ಕೆ 10% ಹೆಚ್ಚುವರಿ ರಿಯಾಯಿತಿ ನೀಡಿ ಫ್ರೀಯಾಗಿ ವಿದ್ಯುತ್ ನೀಡಲಾಗುತ್ತಿತ್ತು. ಅಂದರೆ, ಆತನು 4.8 ಯೂನಿಟ್‌ನ್ನು ಹೆಚ್ಚುವರಿಯಾಗಿ ಬಳಸಬಹುದಾಗಿತ್ತು. ಆದರೆ ಈಗ ಶೇ. 10 ಬದಲಾಗಿ 10 ಯೂನಿಟ್ ಮಾಡಿದ್ದಾರೆ. 43 ಯೂನಿಟ್ ಬಳಕೆ ಮಾಡುವ ಗ್ರಾಹಕನಿಗೆ ಮುಂದೆ 53 ಯೂನಿಟ್ ಸಿಗುತ್ತದೆ.
ಇತರೆ ವಿಷಯಗಳು
ವಿದ್ಯಾರ್ಥಿಗಳ ಗಮನಕ್ಕೆ.! SSLC ಮತ್ತು 2nd PUC ಅಂತಿಮ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ
ಪ್ರತಿ ಪಡಿತರ ಕಾರ್ಡ್‌ದಾರರಿಗೆ ಅಕ್ಕಿ ಜೊತೆ ಗೋಧಿ, ಎಣ್ಣೆ ವಿತರಣೆ!!