ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ ಪಡೆಯಲು ಮರು ಪರಿಶೀಲನೆಯ ಪ್ರಕ್ರಿಯೆಯನ್ನು ಸಂಬಂಧಪಟ್ಟ ಇಲಾಖೆಯ ವತಿಯಿಂದ ಆರಂಭಿಸಲಾಗಿದೆ. ಈ ಯೋಜನೆಯಡಿ ಈಗಾಗಲೇ ಅರ್ಥಿಕ ನೆರವನ್ನು ಪಡೆಯುತ್ತಿರುವ, ಮುಂದಿನ ಕಂತಿನ ಹಣ ಪಡೆಯಲು ಈ ಪ್ರಕ್ರಿಯೆಯನ್ನು ಪಾಲಿಸಿದ್ರೆ ನಿಮ್ಮ ಖಾತೆಗೆ ಹಣ ಜಮಾ ಆಗಲಿದೆ. ಯಾವುದು ಆ ಪ್ರಕ್ರಿಯೆ ಎಂದು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.
ಗೃಹಲಕ್ಷ್ಮಿ ಯೋಜನೆಯಡಿ ಅರ್ಥಿಕ ನೆರವನ್ನು ಪಡೆಯುತ್ತಿರುವ ಫಲಾನುಭವಿಗಳ ನೈಜತೆಯನ್ನು ತಿಳಿಯಲು & ಅರ್ಹ ಫಲಾನುಭವಿಗಳಿಗೆ ಈ ಯೋಜನೆಯಡಿ ಅರ್ಥಿಕ ನೆರವು ವರ್ಗಾವಣೆ ಆಗುತ್ತಿದೆಯೇ ಎಂದು ತಿಳಿಯಲು ಗ್ರಾಮ & ಕರ್ನಾಟಕ ಒನ್ ಕೇಂದ್ರಗಳ ಮೂಲಕವಾಗಿ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ E-kyc ಮಾಡಲಾಗುವುದು.
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರು ಪರಿಶೀಲನೆ ಪ್ರಕ್ರಿಯೆ ಹೇಗೆ ನಡೆಯುವುದು?
ಈ ಯೋಜನೆಯಡಿಯಲ್ಲಿ ಪ್ರಸ್ತುತ ಅರ್ಥಿಕ ನೆರವು ಪಡೆಯುತ್ತಿರುವ ಫಲಾನುಭವಿಗಳು ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕಂಪ್ಯೂಟರ್ ಕೇಂದ್ರವನ್ನು ರೇಷನ್ ಕಾರ್ಡ & ಆಧಾರ್ ಕಾರ್ಡ್ & ಅಧಾರ್ ನಲ್ಲಿರುವ ಮೊಬೈಲ್ ನಂಬರ್ ಪೋನ್ ತೆಗೆದುಕೊಂಡು ಭೇಟಿ ಮಾಡಿ ಒಟಿಪಿ ಆಧಾರಿತ ekyc ಮಾಡುವ ಮೂಲಕ ನಿಮ್ಮ ಅರ್ಜಿಯ ಮರುಪರೀಶಿಲನೆ ಮಾಡಿಕೊಂಡು ಮುಂದಿನ ತಿಂಗಳ ರೂ 2,000 ಹಣವನ್ನು ಪಡೆಯಲು ಅರ್ಹರಾಗಿರುವಿರಿ.
ಮರು ಪರಿಶೀಲನೆ ಎಲ್ಲಿ ಮಾಡಿಸುವುದು?
ಈ ಯೋಜನೆಯ ಫಲಾನುಭವಿಗಳು ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ e-kyc ಮಾಡಿಸಬೇಕಾಗುತ್ತದೆ.
ಮರು ಪರಿಶೀಲನೆ ಯಾವ ಕಾರಣಕ್ಕೆ ಮಾಡಲಾಗುವುದು?
ಈ ಯೋಜನೆ ಅನುಷ್ಥಾನವು ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ನೇರ ನಗದು ವರ್ಗಾವಣೆ DBT ಮೂಲಕ ವರ್ಗಾವಣೆ ಮಾಡಲಾಗುತ್ತದೆ ರೂ 2,000 ಅರ್ಹ ಫಲಾನುಭವಿಗಳ ಖಾತೆಗೆ ಜಮಾ ಆಗುತ್ತಿದೆಯೋ ಇಲ್ಲವೋ ಎಂದು ಫಲಾನುಭವಿಗಳ ನೈಜತೆ ತಿಳಿಯಲು ಈಗ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆಯನ್ನು ಮಾಡಲಾಗುವುದು.
ಯೋಜನೆಗೆ ಹೊಸ ಅರ್ಜಿ:
ಹೊಸ ಅರ್ಜಿಯನ್ನು ಸಲ್ಲಿಸಲು ಅವಕಾಶ, ಕುಟುಂಬದ ಮುಖ್ಯಸ್ಥರನ್ನು ಬದಲಿಸಿದ ಕಾರ್ಡ್, ಹೊಸ ರೇಷನ್ ಕಾರ್ಡ್‌ಗಳು, ಇನ್ನಿತರ ಬದಲಾವಣೆ ಮಾಡಿಸಿದ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸದ ಎಲ್ಲಾ ಕಾರ್ಡ್‌ದಾರರಿಗೆ ಅರ್ಜಿ ಸಲ್ಲಿಸಲು ಗ್ರಾಮ ಒನ್ – ಕರ್ನಾಟಕ ಒನ್ ಕೇಂದ್ರದಲ್ಲಿ ಅವಕಾಶ ಮಾಡಿಕೊಡಲಾಗುವುದು.
ಇತರೆ ವಿಷಯಗಳು
ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್ ನಿಯಮದಲ್ಲಿ ಹೊಸ ಬದಲಾವಣೆ.! ಫೆಬ್ರವರಿ 1 ರಿಂದ ಜಾರಿ
ಬೆಳೆ ಪರಿಹಾರದ ಹಣ ಜಮಾ.! ಸರ್ಕಾರದಿಂದ ಹೊಸ ಫಲಾನುಭವಿ ರೈತರ ಪಟ್ಟಿ ಬಿಡುಗಡೆ