rtgh

Scheme

ಗೃಹಲಕ್ಷ್ಮಿ ಹಣ ಸಿಗದ ಮಹಿಳೆಯರಿಗೆ ಹೊಸ ಅಪ್ಡೇಟ್: ಈ ಕೆಲಸ ಮಾಡಿದರೆ ಹಣ ಬರೋದ್ರಲ್ಲಿ ಡೌಟೇ ಇಲ್ಲ.!

Published

on

ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಗೃಹಲಕ್ಷ್ಮಿ ಯೊಜನೆ (Gruha lakshmi scheme) ಅಡಿಯಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು ಮನೆಯ ಖರ್ಚು ನಿಭಾಯಿಸಲು ಸರ್ಕಾರ ಉಚಿತವಾಗಿ 2000 ರೂಪಾಯೊಗಳನ್ನು ನೀಡುತ್ತಿದ್ದು, ಲಕ್ಷಾಂತರ ಮಹಿಳೆಯರು ಇದರ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ 4ನೇ ಕಂತಿನ(4th installment) ಹಣವು ಹಲವು ಜಿಲ್ಲೆಗಳಿಗೆ ತಲುಪಿದ್ದು, ಹಂತ ಹಂತವಾಗಿ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಆಗುತ್ತಿದೆ.

Gruha lakshmi Yojane

ಗೃಹಲಕ್ಷ್ಮಿ ಹಣ ಎಲ್ಲಾ ಮಹಿಳೆಯರ ಖಾತೆಗೆ ತಲುಪ್ಪಿದ್ದರೂ ಕೂಡ ಇನ್ನೂ ಹಲವು ಮಹಿಳೆಯರು ಇದರ ಲಾಭ ಪಡೆಯಲು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಯಾರಿಗೆಲ್ಲ ಇನ್ನು ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತವರು ನಿಮ್ಮ ಖಾತೆಯಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ನಿಮ್ಮ ಖಾತೆಗೆಗೂ ಪ್ರತಿ ತಿಂಗಳು 2 ಸಾವಿರ ರೂ ಬರುತ್ತದೆ.

ಈ ಕೆ ವೈ ಸಿ ಕಡ್ಡಾಯ!

ಗ್ರಾಮೀಣ ಭಾಗದಲ್ಲಿ ಸರ್ಕಾರ ಈಗಾಗಲೇ ಈ ಯೋಜನೆಯ 3 ದಿನಗಳ ಶಿಬಿರವನ್ನು ಆಯೋಜನೆಯನ್ನು ಮಾಡಿತ್ತು. ಈ ಮೂಲಕ ಮಹಿಳೆಯರಿಗೆ ತಮ್ಮ ಖಾತೆಯಲ್ಲಿನ ಏನೆ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಿಕೊಳ್ಳುವುದಾಗಿ ಅದಕ್ಕೆ ಮಾರ್ಗ ದರ್ಶನ ನೀಡಲಾಗಿದೆ.


ಈಗಾಗಲೇ ಸರ್ಕಾರ ತಿಳಿಸಿರುವಂತೆ ತಮ್ಮ ಬ್ಯಾಂಕ್‌ ಖಾತೆಗೆ ಮಹಿಳೆಯರು ಆಧಾರ್‌ ಲಿಂಕ್‌ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಲಿಂಕ್‌ ಆಗಿಲ್ಲ ಅಂದರೆ ಕೂಡಲೇ ಬ್ಯಾಂಕಿಗೆ ಹೋಗಿ ಆಧಾರ್‌ ಲಿಂಕ್‌ ಮಾಡಿಸಿಕೊಳ್ಳಿ. ಲಿಂಕ್‌ ಆದರೆ ನಿಮಗೆ ಯಾವುದೇ ಸಮಸ್ಯೆ ಇಲ್ಲದೆ ಪ್ರತಿ ತಿಂಗಳು ಹಣ ಬರುತ್ತದೆ.

ಸಿಡಿಪಿಓ ಅಧಿಕಾರಿಗಳನ್ನು ಭೇಟಿ ಮಾಡಿ!

ಆಧಾರ್‌ ಲಿಂಕ್‌ ಮಾಡಿದರೂ ಹಣ ಬಂದಿಲ್ಲ ಅಂದ್ರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದರೆ ನಿಮ್ಮ ಖಾತೆಯಲ್ಲಿ ಯಾವುದೇ ಸಮಸ್ಯೆ ಇದ್ದರೂ ಕೂಡ ಅವರು ಅದಕ್ಕೆ ಸೂಕ್ತ ಪರಿಹಾರವನ್ನು ನೀಡುತ್ತಾರೆ. ಆದ್ದರಿಂದ ಯಾರಿಗೆಲ್ಲ ಇನ್ನು ಹಣ ಬಂದಿಲ್ಲ ಅವರು ಸ್ಥಳೀಯ ಸಿಡಿಪಿಓ ಕಚೇರಿಗಳಿಗೆ ಭೇಟಿ ನೀಡಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಪರಿಶೀಲನೆ ಮಾಡಿಸಿಕೊಳ್ಳಬಹುದು.

ಇದನ್ನೂ ಸಹ ಓದಿ: ಗೃಹಲಕ್ಷ್ಮಿ ಯೋಜನೆಗೆ ಅಂತ್ಯ ಹಾಡಿದ ಸರ್ಕಾರ, ಮಹಿಳೆಯರಿಗೆ ಫುಲ್ ಟೆನ್ಷನ್.!

ನಾಲ್ಕನೇ ಕಂತಿನ ಹಣ ಬಿಡುಗಡೆ!

ಗೃಹಲಕ್ಷ್ಮಿ ಯೋಜನೆ 4ನೇ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಿದೆ. ನಿಮ್ಮ ಬ್ಯಾಂಕ್‌ ಖಾತೆ ಸರಿಯಾಗಿದ್ದರೆ ಅಂದರೆ ಬ್ಯಾಂಕ್ ಖಾತೆ ಆಕ್ಟಿವ್ ಆಗಿದ್ದರೆ ಹಾಗೂ ನಿಮ್ಮ ಖಾತೆ ಆಧಾರ್ ಸೀಡಿಂಗ್ (Aadhaar seeding with Bank Account) ಆಗಿದ್ದರೆ ಕೂಡಲೇ ಕಂತಿನ ಹಣ ಖಾತೆಗೆ ಜಮಾ ಆಗುತ್ತದೆ.

ಈಗಾಗಲೇ ದಕ್ಷಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ರಾಯಚೂರು, ಮೈಸೂರು, ಚಾಮರಾಜನಗರ, ಮಂಡ್ಯ ಮೊದಲಾದ 15 ಜಿಲ್ಲೆಗಳಿಗೆ 4ನೇ ಕಂತಿನ ಹಣ ಖಾತೆಗ ಜಮಾ ಆಗಿದೆ. ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ಹಣ ತಲುಪಲಿದೆ.

ಮಹಿಳ ಫಲಾನುಭವಿಗಳು ಇದುವರೆಗೆ ಈ ಯೋಜನೆಯ ಒಂದೇ ಒಂದು ಕಂತಿನ ಹಣ ಪಡೆಯದೆ ಇದ್ದರೆ, ಈ ಲೇಖನದಲ್ಲಿ ನಾವು ನೀಡಿದ ಹಂತ ಹಂತದ ಸಣ್ಣ ಕೆಲಸಗಳನ್ನು ಮಾಡಿಕೊಂಡರಡ ಹೊಸ ವರ್ಷಕ್ಕೆ 8000 ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಆದರಿಂದ ತಕ್ಷಣ ನಿಮ್ಮ ಬ್ಯಾಂಕಿನ ಯಾವುದೇ ಸಮಸ್ಯೆ ಇದ್ದರು ಪರಿಹರಿಸಿಕೊಳ್ಳಿ ಎಂದು ಸರ್ಕಾರ ಮಾಹಿತಿ ನೀಡಿದೆ.

ಹೊಸ ವರ್ಷದಲ್ಲಿ ನಿರುದ್ಯೋಗಿಗಳಿಗೆ ಸಿಕ್ತು ದೊಡ್ಡ ಉಡುಗೊರೆ: ಸರ್ಕಾರದ ಘೋಷಣೆ

ಸರ್ಕಾರಿ ಉದ್ಯೋಗಿಗಳಿಗೆ ಡಬಲ್‌ ಜಾಕ್‌ಪಾಟ್‌: ತುಟ್ಟಿಭತ್ಯೆಯ ಜೊತೆ HRA ಯಲ್ಲಿಯೂ ಹೆಚ್ಚಳ!

Treading

Load More...