ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿನ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಸರ್ಕಾರದ ಗ್ಯಾರಂಟೀಗಳಲ್ಲಿ ಒಂದಾದ ಗೃಹಲಕ್ಷ್ಮಿ 4 ನೇ ಕಂತಿನ ಹಣವನ್ನು ಇದೇ ಡಿಸೆಂಬರ್ ನೊಳಗೆ ಎಲ್ಲಾ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು. ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
ಸರ್ಕಾರವು ಈಗಾಗಲೇ ತಿಳಿಸಿರುವಂತೆ ಪ್ರತಿ ತಿಂಗಳ ಕೊನೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಯನ್ನು ಸೇರುತ್ತದೆ. ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣ ಕೂಡ ಸದ್ಯದಲ್ಲೇ ಬಿಡುಗಡೆ ಆಗಲಿದ್ದು ಮೊದಲಿಗೆ ಹದಿನೈದು ಜಿಲ್ಲೆಗಳ ಫಲಾನುಭವಿಗಳಾದ ಮಹಿಳೆಯರ ಖಾತೆಗೆ 2000ರೂ.ಗಳನ್ನು ಜಮಾ ಮಾಡಲಾಗಿದೆ. ಇನ್ನು ರಾಜ್ಯ ಸರ್ಕಾರವೇ ತಿಳಿಸಿರುವಂತೆ ಪ್ರತಿ ತಿಂಗಳ ಕೊನೆಯಲ್ಲಿ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.
ಅಂದಹಾಗೆ ನವೆಂಬರ್ ಕಂತಿನ ಹಣವನ್ನು ಅಂದರೆ 3 ನೇ ಕಂತಿನ ಹಣ ಯಾರೆಲ್ಲಾ ಖಾತೆಗೆ ಬಂದಿಲ್ಲಾ ಅಂತಹವರು ಹಣ ಬಂದಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಈ ಕೆಳಗಿನ ಲಿಂಕ್ ಮೂಲಕ ತಿಳಿಯಬಹುದು.
- ಮೊದಲಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬಂದಿದೆಯೋ ಇಲ್ವಾ ಎಂದು ತಿಳಿಯಲು https://ahara.kar.nic.in/Home/EServices ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೋಮ್ ಪೇಜ್ ತೆರೆದ ನಂತರ ಅಲ್ಲಿ ಮೇಲೆ 3 ಡಾಟ್ ಗಳು ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿರಿ.
- ಈ ಸರ್ವೀಸ್ ವಿಭಾಗದಲ್ಲಿ E-ration card ಮೇಲೆ ಕ್ಲಿಕ್ ಮಾಡಿ.
- ಅನಂತರ ವಿಲೇಜ್ ಲಿಸ್ಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ ಗಳನ್ನು ನಮೂದಿಸಿ ಗೋ ಎಂದು ಕ್ಲಿಕ್ ಮಾಡಿದಾಗ ಮತ್ತೊಂದು ಪೇಜ್ ತೆರೆಯುತ್ತದೆ.
- ಈಗ ರೇಷನ್ ಕಾರ್ಡ್ ಸಂಪೂರ್ಣ ಹೆಸರನ್ನು ಕಾಣಿಸುತ್ತದೆ. ಆ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದೆ ಎಂದು ಅರ್ಥ.
ಇದನ್ನು ಸಹ ಓದಿ: ಇ-ಶ್ರಮ್ ಕಾರ್ಡ್‌ಗೆ 1000 ರೂ. ಹೊಸ ಕಂತು ಬಿಡುಗಡೆ! ಕೋಟಿಗಟ್ಟಲೆ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಮುಂದಾದ ಕೇಂದ್ರ!
ಎಷ್ಟು ಕಂತಿನ ಹಣ ಬಂದಿದೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?
ರಾಜ್ಯ ಸರ್ಕಾರವು ಮೊಬೈಲ್ ನಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಹಾಗೂ ಇತರ ಡಿಬಿಟಿ ಆಗಿರುವಂತಹ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಅದುವೇ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್. ಇದರ ಮೂಲಕ ನೀವು ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಎಷ್ಟು ಹಣ ಬಂದಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.
*https://play.google.com/store/apps/details?id=com.dbtkarnataka ನೀವು ಸ್ಮಾರ್ಟ್ ಫೋನ್ ಬಳಕೆದಾರರಾಗಿದ್ದರೆ ಪ್ಲೇ ಸ್ಟೋರ್ ನಲ್ಲಿ DBT Karnataka ಎಂದು ಸರ್ಚ್ ಮಾಡಿದರೆ ಅಥವಾ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ನೇರವಾಗಿ ನಿಮಗೆ ಕರ್ನಾಟಕ ಸರ್ಕಾರದ ಮೊಬೈಲ್ ಅಪ್ಲೀಕೇಶನ್ ಕಾಣಿಸುತ್ತದೆ. ಆ ಆಪ್ ಅನ್ನು ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿರಿ.
ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಅಲ್ಲಿ ನಮೂದಿಸಿ ಮೊಬೈಲ್ ಸಂಖ್ಯೆಗೆ OTP ಅನ್ನು ಕಳುಹಿಸಲಾಗುತ್ತದೆ. ಅದನ್ನು ಅಲ್ಲಿ ಹಾಕಿ 4 ಅಂಕೆಯ Mpin ಸೆಟ್ ಮಾಡಬೇಕು. ಆ ರೀತಿ ಪಾಸ್ವರ್ಡ್ ಕನ್ಪರ್ಮ್ ಆದ ನಂತರ ನಿಮಗೆ ಡಿಬಿಟಿ ಕರ್ನಾಟಕ ಅಪ್ಲೀಕೇಶನ್ ಸಂಪೂರ್ಣವಾಗಿ ಬಳಕೆಗೆ ಸಿಗುತ್ತದೆ. ಇದರಲ್ಲಿ ಕೆಲವು ಆಯ್ಕೆಗಳನ್ನು ನೀಡಲಾಗಿದೆ. ನಿಮ್ಮ ಖಾತೆಗೆ ಬಂದಿರುವಂತಹ ಹಣವನ್ನು ಇಲ್ಲಿ ಚೆಕ್ ಮಾಡಬಹುದು.
4 ಕಂತಿನ ಹಣವನ್ನು ಡಿಸೆಂಬರ್ ಕೊನೆಯ ಒಳಗೆ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು. ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಅವರು ಈಗಾಗಲೇ ಹೇಳಿರುವಂತೆ ಈ ತಿಂಗಳು ಕೊನೆಯಾಗುವುದರೊಳಗೆ ಪ್ರತಿಯೊಬ್ಬ ಫಲಾನುಭವಿಯಾದ ಮಹಿಳೆಯರ ಖಾತೆಗಳಿಗೆ 6,000 ಒಟ್ಟಿಗೆ ಜಮಾ ಆಗಲಿದೆ. ಒಂದು ವೇಳೆ ಹಣ ಬಾರದೆ ಇದ್ದರೆ ಮಹಿಳೆಯರು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಹೋದ ನಂತರ ಅವರ ಸಹಾಯ ಪಡೆಯಬಹುದು ಹಾಗೂ ಗೃಹಲಕ್ಷ್ಮಿ ಅದಾಲತ್ ಮೂಲಕವು ಕೂಡ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ದೂರನ್ನು ಸಲ್ಲಿಸಿ ಖಾತೆಯಲ್ಲಿರುವಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದು ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಇತರೆ ವಿಷಯಗಳು:
1.41 ಲಕ್ಷ ರೈತರ ಖಾತೆಗೆ ನಾಳೆಯಿಂದಲೇ ಬೆಳೆ ವಿಮಾ ಹಣ ಜಮಾ! ಸರ್ಕಾರದ ಮಹತ್ವದ ಘೋಷಣೆ!!
ಯುವನಿಧಿ ಯೋಜನೆಗೆ ಬಂತು ಹೊಸ ಕಂಡೀಷನ್! ಇಂಥೋರಿಗೆ ಮಾತ್ರ ಸಿಗಲಿದೆ ಕಾಸು!