ಹಲೋ ಸ್ನೇಹಿತರೇ, ರಾಜ್ಯದ ಸಾಕಷ್ಟು ಪ್ರದೇಶಗಳನ್ನ ಬರಪೀಡಿತ ಪ್ರದೇಶ ಎಂದು ಗುರುತಿಸಲಾಗಿದೆ. ಈ ಬಾರಿ ಮುಂಗಾರು ಮಳೆಯ ಕೊರತೆಯಿಂದ ಹಲವು ಪ್ರದೇಶದಲ್ಲಿ ರೈತರು ಸರಿಯಾಗಿ ಫಸಲು ಬೆಳೆಯಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ರೈತರಿಗಾಗಿ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಈ ಯೋಜನೆಯಲ್ಲಿ ಯಾರಿಗೆಲ್ಲಾ ಲಾಭ ಸಿಗಲಿದೆ ಎಂದು ಲೇಖನದಲ್ಲಿ ತಿಳಿಯಿರಿ.
ಹೀಗಾಗಿ ಮಳೆಯಾಶ್ರಿತ ರೈತರ ಜೀವನದ ಮಟ್ಟವನ್ನು ಸುಧಾರಿಸುವ ಸಲುವಾಗಿ ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿದೆ.
ರಾಜ್ಯದಲ್ಲಿ 24 ಜಿಲ್ಲೆಗಳನ್ನು ಬರಪೀಡಿತ ಎಂದು ಗುರುತಿಸಲಾಗಿದ್ದು ಅವುಗಳಲ್ಲಿ 106 ತಾಲ್ಲೂಕುಗಳ ರೈತರಿಗೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಆರ್ಥಿಕ ನೆರವು ನೀಡಲು ಸರ್ಕಾರ ನಿರ್ಧಾರ ಮಾಡಿದೆ. ಹಾಗಾಗಿ ಫಲಾನುಭವಿ ರೈತರು ಅರ್ಜಿ ಸಲ್ಲಿಸಿ ಸಹಾಯಧನ ಪಡೆಯಬಹುದಾಗಿದೆ.
ಸುಸ್ಥಿರ ಕೃಷಿಗಾಗಿ ಸಹಾಯಧನ!
ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಅದರ ಉಪಯುಕ್ತವಾದ ಬಳಕೆಯ ಬಗ್ಗೆ ರೈತರಿಗೆ ತಿಳಿಸುವುದು ಹಾಗೂ ಕೃಷಿ ಚಟುವಟಿಕೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಳೆಯ ನೀರು ವ್ಯರ್ಥವಾಗದೇ ಇರುವ ರೀತಿಯಲ್ಲಿ ಕೃಷಿ ಹೋಂಡವನ್ನು ತೆಗೆದು ಅದರಲ್ಲಿ ನೀರು ಸಂಗ್ರಹಿಸಿ ನೀರಾವರಿಗೆ ಬಳಸಿಕೊಳ್ಳುವಂತೆ ರೈತರಿಗೆ ಸಹಾಯಧನವನ್ನು ನೀಡಲಾಗುವುದು.
ಯೋಜನೆಯನ್ನು ಪ್ಯಾಕೇಜ್ ಮಾದರಿಯಲ್ಲಿ ಅನುಷ್ಠಾನಕ್ಕೆ ತರಲು ಚಿಂತನೆ ನಡೆಸಲಾಗಿದೆ, ಘಟಕ ಮಾರ್ಗಸೂಚಿ ಅನುಸರಿಸುವ ರೈತರಿಗೆ ಈ ಯೋಜನೆಯ ಲಾಭ ಸಿಗುತ್ತದೆ. ಅರ್ಜಿ ಸಲ್ಲಿಸಿ ಆಯ್ಕೆಯಾಗುವ ರೈತರು ಒಂದು ಸರ್ವೆ ನಂಬರ್ ನಲ್ಲಿ ಕನಿಷ್ಠ1 ಎಕರೆ ವಿಸ್ತೀರ್ಣದ ಸಾಗುವಳಿ ಭೂಮಿಯನ್ನು ಹೊಂದಿರಬೇಕಾಗುತ್ತದೆ. ಕಳೆದ ವರ್ಷ ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡ ಹಾಗೂ ಮತ್ತಿತರ ಪ್ರಯೋಜನ ಪಡೆದುಕೊಂಡವರು ಮತ್ತೆ ಈಗ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ಕೃಷಿ ಭಾಗ್ಯ ಯೋಜನೆಯಡಿ ಸರ್ಕಾರದಿಂದ ಬಿಡುಗಡೆ ಆಗುವ ಸಹಾಯಧನ ಪಡೆಯಲು ಇಚ್ಚಿಸುವ ರೈತರುಗಳು ಡಿಸೆಂಬರ್ 31ರ ಒಳಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ / ಸಹಾಯಕ ಕೃಷಿ ನಿರ್ದೇಶಕರ ಕಛೇರಿಯನ್ನ ಭೇಟಿ ನೀಡಲು, ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಸಿಗುವ ಸೌಲಭ್ಯಗಳು!
- ಕ್ಷೇತ್ರ ಬದು ನಿರ್ಮಾಣಕ್ಕೆ ಸಹಾಯಧನ.
- ಕೃಷಿ ಹೊಂಡ ನಿರ್ಮಾಣಕ್ಕೆ ಸಹಾಯಧನ.
- ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ.
- ಕೃಷಿಹೊಂಡದ ಸುತ್ತಲೂ ತಂತಿ ಬೇಲಿ.
- ಹೊಂಡದಿಂದ ನೀರೆತ್ತುವ ಸಲುವಾಗಿ ಸೋಲಾರ್ / ಡೀಸೆಲ್ ಪಂಪ್ ಸೆಟ್ ಒದಗಿಸುಲಾಗುವುದು.
- ನೀರನ್ನು ಬೆಳೆಗೆ ಹಾಯಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಘಟಕ ವಿತರಿಸುವುದು.
ಇತರೆ ವಿಷಯಗಳು
ಅನ್ನಭಾಗ್ಯ ಸ್ಕೀಮ್: ಜನವರಿಯಿಂದ 10 ಕೆಜಿ ಅಕ್ಕಿ ಜೊತೆ ಈ 3 ಸೌಲಭ್ಯಗಳು ಉಚಿತ..!
ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿ: 15 ದಿನ ಎಲ್ಲಾ ಬ್ಯಾಂಕ್ ಕ್ಲೋಸ್..!