ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಇತ್ತೀಚಿನ ದಿನಗಳಲ್ಲಿ ಸರ್ಕಾರ ಬಡ ಹೆಣ್ಣು ಮಕ್ಕಳಿಗಾಗಿ ಹಲವಾರು ಹೊಸ ಹೊಸ ಅನುಕೂಲಕರ ಯೋಜನೆಗಳನ್ನು ಜಾರಿಗೆ ತಂದಿದೆ, ಅವುಗಳಲ್ಲಿ ಮನೆಯಲ್ಲಿ ಕಷ್ಟಪಟ್ಟು ಕಟ್ಟಿಗೆ ಒಲೆ ಬೆಂಕಿ ಹೊತ್ತಿಸಿ, ಒಲೆ ಉರಿಸಿ ಅಡುಗೆ ಮಾಡುತ್ತಿರುವ ಹೆಣ್ಣು ಮಕ್ಕಳಿಗೆ ಬಿಗ್ ರಿಲೀಫ್ ನೀಡುವಂತೆ ಉಚಿತ ಗ್ಯಾಸ್ ಸಿಲಿಂಡರ್ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಾವು ನಿಮಗೆ ಈ ಲೇಖನದಲ್ಲಿ ನೀಡುತ್ತೇವೆ, ಮಿಸ್ ಮಾಡದೆ ಓದಿ.
ಉಚಿತ ಗ್ಯಾಸ್ ಕನೆಕ್ಷನ್ ನೀಡುತ್ತಿರುವ ಸರ್ಕಾರ
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಿಗೆ ಸರ್ಕಾರ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ನೀಡುತ್ತಿದೆ, ಇದರಿಂದ ಇನ್ಮುಂದೆ ಅಡುಗೆ ಮಾಡಲು ಮಹಿಳೆಯರು ಕಷ್ಟಪಡುವ ಅಗತ್ಯವಿಲ್ಲ.
ಮಹಿಳೆಯರು ಈ ಯೋಜನೆ ಅಡಿಯಲ್ಲಿ ಮನೆ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (LPG gas cylinder connection) ಅನ್ನು ಉಚಿತವಾಗಿ ಪಡೆದುಕೊಳ್ಳಬಹುದು.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಪ್ರಯೋಜನ
ಬಡ ಕುಟುಂಬದಲ್ಲಿ ವಾಸಿಸುವ ಮಹಿಳೆಯರಿಗಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದ್ದು ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ಮಹಿಳೆಯರಿಗೆ ನೀಡಲಾಗುತ್ತಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ಒಂದು ಸಿಲಿಂಡರ್ ಹಾಗೂ ಉಚಿತ ಗ್ಯಾಸ್ ಸ್ಟವ್, ಲೈಟರ್ ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ. ಒಂದು ವರ್ಷ ಸಿಲಿಂಡರ್ ಪಡೆದುಕೊಂಡರೆ 300 ರೂ. ಸಬ್ಸಿಡಿ (gas subsidy) ಸಿಗುತ್ತದೆ. ಅಂದರೆ ಒಂದು ಸಿಲಿಂಡರ್ ಬೆಲೆ ಕೇವಲ 603 ರೂ. ಗೆ ಸಿಲಿಂಡರ್ ಖರೀದಿ ಮಾಡಬಹುದು.
ಯಾರಿಗೆ ಸಿಗಲಿದೆ ಉಚಿತ ಗ್ಯಾಸ್ ಕನೆಕ್ಷನ್
- ಈಗಾಗಲೇ ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಇದ್ದರೆ ಅರ್ಜಿ ಸಲ್ಲಿಸುವಂತಿಲ್ಲ.
- ಮಹಿಳೆಯರ ಹೆಸರಿಗೆ ಮಾತ್ರ ಗ್ಯಾಸ್ ಕನೆಕ್ಷನ್ ನೀಡಲಾಗುತ್ತದೆ.
- 18 ವರ್ಷ ಮೇಲ್ಪಟ್ಟವರುಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಅಂತ್ಯೋದಯ ಕಾರ್ಡ್ ಮತ್ತು ಬಿಪಿಎಲ್ ಕಾರ್ಡ್ (BPL card) ಹೊಂದಿರುವವರು ಅರ್ಜಿ ಸಲ್ಲಿಸಬಹುದು.
- ಎಸ್ ಸಿ/ ಎಸ್ ಟಿ ವರ್ಗಕ್ಕೆ ಸೇರಿದವರು ಹಿಂದುಳಿದ ವರ್ಗದವರು ಬುಡಕಟ್ಟು ಜನಾಂಗ ಮೊದಲಾದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳಾ ಸದಸ್ಯ ಅರ್ಜಿ ಸಲ್ಲಿಸಬಹುದು.
ಇದನ್ನೂ ಸಹ ಓದಿ: ಹಳೆಯ ನೋಟುಗಳನ್ನು ಹೊಂದಿದ್ದವರಿಗೆ RBI ಖಡಕ್ ವಾರ್ನಿಂಗ್!!
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
- ಮಹಿಳೆಯರ ಗುರುತಿನ ಚೀಟಿ, ಅಂದರೆ ಆಧಾರ್ ಕಾರ್ಡ್
- ವಿಳಾಸ ಪುರಾವೆ
- ಮೊಬೈಲ್ ಸಂಖ್ಯೆ
- ಬಿಪಿಎಲ್ ಅಥವಾ ಅಂತ್ಯೋದಯ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಫೋಟೋ
- ಬ್ಯಾಂಕ್ ಖಾತೆಯ ವಿವರ (ಕೆ ವೈ ಸಿ ಮಾಡಿಸಿರುವುದು ಕಡ್ಡಾಯ)
ಅರ್ಜಿ ಸಲ್ಲಿಸುವುದು ಹೇಗೆ?
- ಪ್ರಧಾನ ಮಂತ್ರಿ ಉಜ್ವಲ ಯೋಜನೆ (https://www.pmuy.gov.in/ujjwala2.html) ಅಧಿಕೃತ ವೆಬ್ಸೈಟ್ ಬೇಟಿನೀಡಬೇಕು.
- ಉಜ್ವಲ 2.0 ಯೋಜನೆ ಅಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನೀವು ಯಾವ ಗ್ಯಾಸ್ ಏಜೆನ್ಸಿಯಿಂದ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲು ಬಯಸುತ್ತೀರಿ ಎನ್ನುವ ಆಯ್ಕೆಯನ್ನು ಮಾಡಿಕೊಳ್ಳಿ.
- ನಂತರ ಆಯಾ ಗ್ಯಾಸ್ ಏಜೆನ್ಸಿ ಲೋಗೋ ಮೇಲೆ ಕಾಣಿಸುವ click here to apply ಎಂದು ಆಯ್ಕೆ ಮಾಡಿ.
- ಈಗ ಅರ್ಜಿ ಫಾರಂ ನಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಭರ್ತಿ ಮಾಡಿ, ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿದ್ರೆ ನಿಮ್ಮ ಅರ್ಜಿ ಸಲ್ಲಿಕೆಯಾಗುತ್ತದೆ.
- ಅರ್ಜಿ ಪರಿಶೀಲನೆ ನಡೆಸಿ ನಂತರ ಗ್ಯಾಸ್ ಕನೆಕ್ಷನ್ ಕೊಡಲಾಗುವುದು.
- ಈಗಾಗಲೇ ಅರ್ಜಿ ನೀವು ಸಲ್ಲಿಸಿದ್ದರೆ ಇದೇ ವೆಬ್ಸೈಟ್ನಲ್ಲಿ ಅರ್ಜಿಯನ್ನು ಪರಿಶೀಲನೆ ಮಾಡಬಹುದು. ಗ್ಯಾಸ್ ಏಜೆನ್ಸಿ (Gas agency) ಆಯ್ಕೆ ಮಾಡಿಕೊಂಡಿ ಅರ್ಜಿ ಪರಿಶೀಲನೆ ಮಾಡಿಕೊಳ್ಳಿ ಅಥವಾ ಗ್ಯಾಸ್ ಏಜೆನ್ಸಿ ಕಚೇರಿಗೆ ಹೋಗಿ ನಿಮ್ಮ ಅರ್ಜಿ ಪರಿಶೀಲನೆ ಮಾಡಿಕೊಳ್ಳಿ.
ಕೆ ವೈ ಸಿ (E-KYC) ಆಗದೆ ಇದ್ರೆ ಫಲಾನುಭವಿಗಳಿಗೆ ಸಿಗುವುದಿಲ್ಲ ಇನ್ನು ಮುಂದೆ ಸಿಲಿಂಡರ್!
ಉಚಿತ ಗ್ಯಾಸ್ ಕನೆಕ್ಷನ್ಗು ಆಧಾರ್ ಕಾರ್ಡ್ ಲಿಂಕ್ ಕೂಡ KYC ಮಾಡಿಸಬೇಕು, ಮಾಡಿಸದೆ ಇದ್ದರೆ ಅಂತವರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡಲಾಗುವುದಿಲ್ಲ. ಹಾಗೆಯೇ ಈಗಾಗಲೇ ಗ್ಯಾಸ್ ಕನೆಕ್ಷನ್ ಇದ್ದವರು ಕೆವೈಸಿ ಮಾಡಿಸಿಕೊಳ್ಳದೆ ಇದ್ದರೆ ಅಂತವರ ಗ್ಯಾಸ್ ಕನೆಕ್ಷನ್ ಕಡಿತಗೊಳಿಸಲಾಗುವುದು.
ಇತರೆ ವಿಷಯಗಳು:
ಹೊಸ ವರ್ಷಕ್ಕೆ ಮೋದಿ ಹೊಸ ಸ್ಕೀಮ್!! ಜನವರಿ 1 ರಿಂದ ಬದಲಾಗಲಿದೆ ರೇಷನ್ ಕಾರ್ಡ್ ನಿಯಮ
ಎಲ್ಲಾ ರೈತರ ಖಾತೆಗೆ 6000 ರೂ. ಜಮಾ ಮಾಡಿದ ಮೋದಿ..! ಕೂಡಲೇ ನಿಮ್ಮ ಖಾತೆ ಚೆಕ್ ಮಾಡಿ