ಹಲೋ ಸ್ನೇಹಿತರೇ, ಇನ್ನು ಮುಂದೆ ವಿವಾಹ ಅರ್ಜಿ ಸಲ್ಲಿಕೆಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ಮಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ನೋಂದಣಿಯನ್ನು ಮಾಡಿಕೊಳ್ಳಲು ಹಿಂದೂ ವಿವಾಹ ನೋಂದಣಿ ಕಾಯ್ದೆಗೆ ರಾಜ್ಯ ಸರ್ಕಾರದಿಂದ ತಿದ್ದುಪಡಿಯನ್ನು ಮಾಡಲಾಗಿದೆ. ನೋಂದಣಿಯನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈ ತಿದ್ದುಪಡಿ ಅನ್ವಯ ಇನ್ನು ಮುಂದೆ ವಿವಾಹ ನೋಂದಣಿಯನ್ನು ಮಾಡಿಕೊಳ್ಳಲು ಸಾರ್ವಜನಿಕರು ತಮ್ಮ ಹತ್ತಿರದ ಗ್ರಾಮ್ ಒನ್ & ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಗತ್ಯ ದಾಖಲಾತಿಯನ್ನು ಸಲ್ಲಿಸಿ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
ಈ ಕುರಿತು ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ಹಂಚಿಕೊಂಡ ಕಾನೂನು ಸಚಿವ ಹೆಚ್ ಕೆ ಪಾಟೀಲ್ ತಂತ್ರಜ್ಞಾನ ಬಳಕೆ ಮಾಡಿಕೊಂಡು ವಿವಾಹ ನೋಂದಣಿಗಳನ್ನು ಸರಳವಾಗಿ ನೋಂದಣಿ ಮಾಡಿಸಿಕೊಳ್ಳುವ ದೇಸೆಯಲ್ಲಿ ಹಿಂದೂ ವಿವಾಹ ನೋಂದಣಿ ಕಾಯ್ದೆಯನ್ನು ತಿದ್ದುಪಡಿ ತರಲು ಸಚಿವ ಸಂಪುಟವು ಒಪ್ಪಿದೆ ನೀಡಿದೆ ಎಂದು ತಿಳಿಸಿದ್ದಾರೆ.
ಹೊಸ ಯೋಜನೆ ವಿಶೇಷವೇನು?
ಇನ್ನು ಮುಂದೆ ವಿವಾಹ ನೋಂದಣಿ ಮಾಡಲು ಆಸಕ್ತಿ ಹೊಂದಿದವರು ನಿಮ್ಮ ಹತ್ತಿರದ ಗ್ರಾಮ ಪಂಚಾಯ್ತಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ / ಗ್ರಾಮ್ ಒನ್ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಕಾವೇರಿ-2 ಸಾಫ್ಟವೇರ್ ಬಳಕೆ ಮಾಡಿ ಈ ಅರ್ಜಿಯನ್ನು ವಿಲೇವಾರಿ ಮಾಡಲಾಗುವುದು.
ಆಧಾರ್ ಕಾರ್ಡ್ ದೃಢೀಕರಣವನ್ನು ಬಳಸಿಕೊಂಡು ವಿವಾಹವನ್ನು ನೋಂದಾವಣಿ ಮಾಡಲಾಗುವುದು.
ಈ ಹಿಂದೆ ಇದ್ದ ನಿಯಮ ಯಾವುದು?
ಈ ಮೊದಲು ಜಾರಿಯಲ್ಲಿದ ವಿಶೇಷ ವಿವಾಹ ಕಾಯ್ದೆ 1954ರ ಪ್ರಕಾರವಾಗಿ ದಂಪತಿ ಮದುವೆಯ ನೊಂದಣಿ ದಿನಾಂಕಕ್ಕೂ 1 ತಿಂಗಳ ಮೊದಲೇ ಸಬ್ ರಿಜಿಸ್ಟ್ರಾರ್ ಕಚೇರಿಗೆ ಸೂಚನೆ ನೀಡಿದ ಬಳಿಕ ಸಬ್ ರಿಜಿಸ್ಟ್ರಾರ್ ಮುಂದೆ ವಧು & ವರ ಕಡ್ಡಾಯವಾಗಿ ಉಪಸ್ಥಿತರಾಗಿದ್ದು ನೋಂದಣಿ ಮಾಡಬೇಕಿತ್ತು.
ವಿವಾಹ ಕಾಯ್ದೆಯ ಕುರಿತು ವಾರ್ತಾ ಇಲಾಖೆಯ ಪ್ರಕಟಣೆ ವಿವರ ಹೀಗಿದೆ:
ವಿವಾಹ ನೋಂದಣಿ ಇನ್ನೂ ಸುಲಭವಾಗಿದೆ, ಕಾವೇರಿ-2 ತಂತ್ರಾಂಶದಲ್ಲಿ ಆನ್ಲೈನ್ ಮೂಲಕ ನೋಂದಾವಣಿ ಮಾಡಲು ಅವಕಾಶವನ್ನು ಕಲ್ಪಿಸುವ ‘ಹಿಂದೂ ವಿವಾಹ ನೋಂದಣಿ ತಿದ್ದುಪಡಿ ನಿಯಮಗಳನ್ನು – 2024 ಸಚಿವ ಸಂಪುಟ ಸಭೆ ಅನುಮೋದಿಸಿದೆ. ಇದರಿಂದಾಗಿ ವಿವಾಹ ನೋಂದಣಿಗೆ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರ & ಗ್ರಾಮ-1 ಕೇಂದ್ರಗಳಲ್ಲಿ ಅವಕಾಶ ಮಾಡಿಕೊಡಲಾಗುವುದು.
ಇತರೆ ವಿಷಯಗಳು
RDPR ಖಾಲಿ ಹುದ್ದೆ ಭರ್ತಿ!! ಜಸ್ಟ್ ಪದವಿ ಪಾಸ್ ಆಗಿದ್ರು ಉದ್ಯೋಗ ಗ್ಯಾರೆಂಟಿ
ಈ 13 ಜಿಲ್ಲೆಗಳಲ್ಲಿ ಮತ್ತೆ ಭಾರೀ ಮಳೆ! ಹವಾಮಾನ ಇಲಾಖೆಯ ಹೊಸ ಅಪ್ಡೇಟ್