rtgh

News

9 ತಿಂಗಳ ನಂತರ ಪೆಟ್ರೋಲ್ ದರದಲ್ಲಿ ಭಾರೀ ಇಳಿಕೆ! ವಾಹನ ಸವಾರರಲ್ಲಿ ಸಂತಸ

Published

on

ಹಲೋ ಸ್ನೇಹಿತರೇ, ಏಪ್ರಿಲ್ 2022 ರಿಂದ ದೇಶದಲ್ಲಿ ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳು ಆಗಿಲ್ಲಾ. ಆದರೆ ಇದೀಗ ಬದಲಾವಣೆಯಾಗಿದೆ. ಜನಸಾಮಾನ್ಯರಿಗೆ ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಪರಿಹಾರ ಸಿಗುತ್ತಿದೆ. ಬೆಲೆಯಲ್ಲಿ ಎಷ್ಟು ಕಡಿಮೆಯಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

petrol price decrease

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 5 ರಿಂದ 10 ರೂ. ಕಡಿಮೆಯಾಗುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಸುಮಾರು 75 ಡಾಲರ್ ಗೆ ಕಡಿತವಾಗಿದೆ.

ತೈಲ ಕಂಪನಿಗಳಿಗೆ ಲಾಭ :
ವರದಿಯ ಪ್ರಕಾರವಾಗಿ, ತೈಲ ಕಂಪನಿಗಳ ಲಾಭವು ಡಿಸೆಂಬರ್ 2023ರ ತ್ರೈಮಾಸಿಕದ ವೇಳೆಗೆ 75000 ಕೋಟಿ ರೂ.ಆಗಿದ್ದು. ತೈಲ ಕಂಪನಿಗಳ ಹೆಚ್ಚುತ್ತಿರುವ ಲಾಭದ ದೃಷ್ಟಿಯಿಂದಾಗಿ, ಕಂಪನಿಗಳು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡಲು ಮುಂದಾಗಿದೆ. ಪೆಟ್ರೋಲ್ & ಡೀಸೆಲ್ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಲಾಗುತ್ತದೆ ಎನ್ನಲಾಗುತ್ತಿದೆ. ವರದಿಯ ಪ್ರಕಾರವಾಗಿ ಪ್ರತಿ ಲೀಟರ್‌ಗೆ 10 ರೂ.ಗಳಷ್ಟು ಲಾಭವನ್ನು ಹೊಂದಬಹುದಾಗಿದೆ. ತೈಲ ದರದಲ್ಲಿ ಕಡಿಮೆ ಮಾಡುವ ಮೂಲಕ ಕಂಪನಿಗಳು ಈ ಮಾರ್ಜಿನ್‌ನ್ನು ಗ್ರಾಹಕರಿಗೆ ರವಾನೆ ಮಾಡಬಹುದು ಎಂದು ಹೇಳಲಾಗುವುದು. 


ಕಚ್ಚಾ ತೈಲ ಬೆಲೆ : 
ಕಚ್ಚಾ ತೈಲ ದರ ಕಡಿತದಿಂದ ತೈಲ ಕಂಪನಿಗಳ ಲಾಭ ಏರಿಕೆಯಾಗಲಿದೆ. ಹೆಚ್ಚಿನ ಮಾರ್ಜಿನ್‌ ನಿಂದಾಗಿ, ತೈಲ ಕಂಪನಿಗಳು ಭಾರಿ ಲಾಭ ಗಳಿಸುತ್ತವೆ & ಅವುಗಳ ನಷ್ಟವನ್ನು ಸಹ ಸರಿದೂಗಿಸಲಾಗುವುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ 2023-24ನೇ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 5826.96 ಕೋಟಿ ರೂ. ಲಾಭ ಗಳಿಸಿದ್ದು, BPCL ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ 8244 ಕೋಟಿ ರೂ.ಲಾಭವನ್ನು ಗಳಿಸಿದೆ. ದೇಶದ 3 ದೊಡ್ಡ ತೈಲ ಕಂಪನಿಗಳಲ್ಲಿ ಸರ್ಕಾರವು ಮುಖ್ಯ ಪ್ರವರ್ತಕ & ಬಹುಪಾಲು ಷೇರುದಾರ. 2023-24ರ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ 3 ತೈಲ ಕಂಪನಿಗಳ ಒಟ್ಟು ನಿವ್ವಳ ಲಾಭವು  57,091.87 ಕೋಟಿಗಳಾಗಿದ್ದು.

ಇತರೆ ವಿಷಯಗಳು

ಪ್ರತಿಯೊಬ್ಬರಿಗೂ 5 ಲಕ್ಷ ನೇರ ನಗದು.! ನೋಂದಾಯಿಸಲು ಈ ಕೇಂದ್ರಕ್ಕೆ ಭೇಟಿ ನೀಡಿ

ಒಂದೇ ಬಾರಿಗೆ ಚಿನ್ನದ ಬೆಲೆ ಇಷ್ಟೊಂದು ಇಳಿಕೆ! ಖರೀದಿದಾರರಿಗೆ ಗುಡ್‌ ನ್ಯೂಸ್

Treading

Load More...