ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ರಾಜ್ಯದ ಕಂದಾಯ ಸಚಿವರು ರಾಜ್ಯಾದ್ಯಂತ ಇರುವ ಎಲ್ಲಾ ರೈತರಿಗೆ ಬಿಗ್ ಶಾಕ್ ನೀಡಿದ್ದಾರೆ. ಈಗಾಗಲೇ ಬರ ಪರಿಹಾರ ಮತ್ತು ಬೆಳೆ ಹಾನಿ ಹಣವನ್ನು ಹಾಕಲಾಗುತ್ತದೆ ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಏನೆಂದು ನಾವು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇವೆ.
NDRF ಅನ್ವಯ ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರಕ್ಕೆ ಬರ ಪರಿಹಾರ ಹಣ ಹಾಗೂ ಬೆಳೆ ಹಾನಿ ಹಣ ಮನವಿ ಕೋರಿ ಮನವಿ ಈ ಹಿಂದೆಯೇ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೂ ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ಬಿಡುಗಡೆಯಾಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ರೈತರ ಖಾತೆಗೆ ಬರ ಪರಿಹಾರ ಹಣ ಬಿಡುಗಡೆ ಮಾಡಲಿದ್ದು, ಈಗ ಸದ್ಯಕ್ಕೆ ಇದೇ ವಾರದಲ್ಲಿ ರಾಜ್ಯದ ಎಲ್ಲಾ ರೈತರ ಖಾತೆಗೆ ಮೊದಲ ಕಂತಿನ ಹಣವನ್ನು ರೈತರ ಖಾತೆಗೆ 2000 ರೂ. ಹಣವನ್ನು ಜಮೆ ಮಾಡಲಾಗುತ್ತದೆ.
ರಾಜ್ಯದ ಕಂದಾಯ ಸಚಿವರು ರಾಜ್ಯದಲ್ಲಿರುವ ಎಲ್ಲಾ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ಬರ ಪರಿಹಾರ ಹಣ ನೇರ ನಗದು ವರ್ಗಾವಣೆ ಮೂಲಕ ಹಾಕಲು ನಿರ್ಧರಿಸಲಾಗಿತ್ತು. ರೈತರ ಆಧಾರ್ ಸಂಖ್ಯೆ ಲಿಂಕ್ ಆದಂತಹ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ. ಆದರೆ ರೈತರು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿರಬೇಕು. ಜೊತೆಗೆ ಯಾವ ರೈತರು ತಮ್ಮ ಸಂಪೂರ್ಣ ದಾಖಲೆಗಳನ್ನು ನೀಡದೇ ಇದ್ದರೆ ಅಂತಹವರ ಖಾತೆಗೆ ಹಣ ವರ್ಗಾವಣೆ ಆಗಲ್ಲ.
ಇದನ್ನೂ ಸಹ ಓದಿ: ಶಾಲೆಗಳಿಗೆ ದಿಢೀರ್ ರಜೆ ಘೋಷಣೆ!! 21 ದಿನಗಳ ಕಾಲ ಈ ಜಿಲ್ಲೆಯ ಎಲ್ಲ ಶಾಲೆಗಳು ಬಂದ್
ಕೇಂದ್ರ ಸರ್ಕಾರದಿಂದಲೂ ಹಣವನ್ನು ಜಮೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಎಲ್ಲಾ ರೈತರ ಖಾತೆಗೆ 3 ಕಂತಿನ ಮೂಲಕ ಬರ ಪರಿಹಾರ ಹಣ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬರ ಪರಿಹಾರ ಹಣ ಪಡೆಯಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ಮಾಹಿತಿಯನ್ನು ನಮೂದಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಮೂದಿಸದೇ ಇದ್ದರೆ ಅಂತಹ ರೈತರಿಗೆ ಬರ ಪರಿಹಾರ ಹಣ ಸಂದಾಯವಾಗುವುದಿಲ್ಲ. ಫ್ರೂಟ್ ತಂತ್ರಾಂಶದಲ್ಲಿ ನಮೂದಿಸುವುದಕ್ಕೆ ಅವಕಾಶ ನೀಡಲಾಗಿದೆ.
ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು https://igr.karnataka.gov.in/new-page/FRUITS/kn ದಲ್ಲಿ ನಮೂದಿಸುವುದಕ್ಕೆ ಕಳೆದ ಎರಡು ತಿಂಗಳಿನಿಂದ ನಮೂದಿಸುವುದಕ್ಕೆ ಅವಕಾಶ ನೀಡಲಾಗಿದೆ. ಆದರೂ ಕೂಡ ರೈತರ ದಾಖಲೆಗಳು ಶೇ. 75% ಅನ್ನು ಮೀರಿಲ್ಲ. ಪಿರಿಸ್ಥಿತಿ ಹೀಗೆ ಇದ್ದರೆ ರೈತರಿಗೆ ಅನ್ಯಾಯವಾಗಲಿದೆ ಎಂದರು. ಪರಿಹಾರ ಫ್ರೂಟ್ಸ್ ದಂತ್ತಾಂಶವನ್ನು ಆಧರಿಸುವ ಕಾರಣ ಜಿಲ್ಲಾಧಿಕಾರಿಗಳು ಮಾಡುವ ಸಣ್ಣ ತಪ್ಪು ಸಹ ರೈತರಿಗೆ ಹೊರೆ ಬೀಳಲಿದೆ. ಒಟ್ಟಾರೆಯಾಗಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನಮೂದಿಸಬೇಕು. ಇಲ್ಲದಿದ್ದರೆ ನಿಮ್ಮ ಖಾತೆಗೆ ಬರ ಪರಿಹಾರ ಹಣ ವರ್ಗಾವಣೆಯಾಗುವುದಿಲ್ಲ.
ಇತರೆ ವಿಷಯಗಳು:
ಏಷ್ಯಾಕ್ಕೆ ಇನ್ಮುಂದೆ ಇವರೇ ದೊಡ್ಡಣ್ಣ.!! ಚೀನಾದ ಮಂಡಿ ಮುರಿದ ಭಾರತ; ಏನಿದರ ಅಸಲಿಯತ್ತು?