rtgh

News

ಬ್ಯಾಂಕ್ ಅಕೌಂಟ್, ಗ್ಯಾಸ್ ಸಿಲಿಂಡರ್‌ ನಿಯಮದಲ್ಲಿ ಹೊಸ ಬದಲಾವಣೆ.! ಫೆಬ್ರವರಿ 1 ರಿಂದ ಜಾರಿ

Published

on

ಹಲೋ ಸ್ನೇಹಿತರೇ, ಪ್ರತಿ ತಿಂಗಳು ಮುಗಿದು ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ ಸರ್ಕಾರ ಕೆಲವು ಕ್ಷೇತ್ರದಲ್ಲಿ ಹಲವು ಬದಲಾವಣೆ ಮಾಡುತ್ತದೆ. ಅದು ಬ್ಯಾಂಕಿಂಗ್ ಕ್ಷೇತ್ರ ಅಥವಾ ಇನ್ನಿತರ ಯಾವುದೆ ವ್ಯವಹಾರ ಆಗಿರಬಹುದು, ಹೊಸ ಬದಲಾವಣೆ ಹಾಗೂ ನಿಯಮಗಳ ಪರಿಷ್ಕರಣೆ ಮಾಡಲಾಗುವುದ. ಫೆಬ್ರವರಿಯಿಂದ ಯಾವೆಲ್ಲಾ ನಿಯಮಗಳು ಬದಲಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ujjwala yojana gas cylinder update

ಫೆಬ್ರುವರಿ ತಿಂಗಳಿನಲ್ಲಿ ಬ್ಯಾಂಕ್ ಅಕೌಂಟ್, Gas Cylinder, Fastag ಹೀಗೆ ಮೊದಲಾದ ವಿಚಾರದಲ್ಲಿ ನಿಯಮಗಳು ಬದಲಾವಣೆಯಾಗುತ್ತದೆ.

ಆರ್ ಬಿ ಐ ರೂಲ್ಸ್! (RBI new rules)

ಫೆಬ್ರವರಿಯಲ್ಲಿ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಸಾಕಷ್ಟು ಜನ ಕೇಂದ್ರ ಬಜೆಟ್ ಮೇಲೆ ಈ ಬಾರಿ ನಿರೀಕ್ಷೆಯನ್ನಿಟ್ಟಿದ್ದಾರೆ. ಬ್ಯಾಂಕ್ ಖಾತೆಯ ಕನಿಷ್ಠ ಬ್ಯಾಲೆನ್ಸ್ ಹಾಗೂ ಸಿಬಿಲ್ ಸ್ಕೋರ್ ಗೆ ಸಂಬಂಧಪಟ್ಟಿರುವ ಹಾಗೆ, ಫೆಬ್ರವರಿ 1.2024ಕ್ಕೆ ಹೊಸ ನಿಯಮ ಜಾರಿಗೆ ಬರುತ್ತದೆ.


IMPS ನಿಯಮ ಪರಿಷ್ಕರಣೆ!

IMPS ಹಣಕಾಸಿನ ವಹಿವಾಟು ಮತ್ತೊಂದು ಹಂತವನ್ನು ತಲುಪಲಿದೆ. ಇನ್ಮುಂದೆ ಮತ್ತೊಬ್ಬ ಬ್ಯಾಂಕ್ ಖಾತೆದಾರನ ಹೆಸರು ನೋಂದಾಯಿಸಿಕೊಂಡರೆ 5 ಲಕ್ಷ ವಹಿವಾಟು ನಡೆಸಬಹುದಾಗಿದೆ. ಬಹಳ ಬೇಗನೆ ಹಣಕಾಸು ವ್ಯವಹಾರ ಮಾಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. ಇದು ವೈಯಕ್ತಿಕ ಬಳಕೆದಾರರಿಗೆ ಹೆಚ್ಚು ಪ್ರಯೋಜನ ನೀಡುತ್ತದೆ. ಕೇವಲ 10 ಸೆಕೆಂಡ್ ಗಳಲ್ಲಿ ಹಣಕಾಸು ವಹಿವಾಟನ್ನು ನಡೆಸಬಹುದಾಗಿದೆ. ಜೊತೆಗೆ ಗೃಹ ಸಾಲದ ಮೇಲೆ 65 ಬಿಪಿಎಸ್ ವರೆಗೂ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಇದು ಕೆಲವೇ ದಿನಗಳ ಅಭಿಯಾನವಾಗಿದ್ದು ಕೂಡಲೇ ಗೃಹ ಸಾಲಕ್ಕೆ ಅರ್ಜಿಯನ್ನು ಸಲ್ಲಿಸಿದವರಿಗೆ ಮಾತ್ರ ಲಭ್ಯವಾಗುತ್ತದೆ.

ಫಾಸ್ಟ್ ಟ್ಯಾಗ್ ಗೆ ಕೆವೈ ಸಿ!

ಇನ್ಮುಂದೆ ಟೋಲ್ ಗೇಟ್ ನಲ್ಲಿ ಮುಂದೆ ಹೋಗಲು ಫಾಸ್ಟ್ ಟ್ಯಾಗ್ ನಲ್ಲಿ KYC ಕೂಡ ಕಡ್ಡಾಯವಾಗಿದೆ. ನಗದು ವ್ಯವಹಾರ ತಡೆಗಟ್ಟುವುದು ಸರ್ಕಾರದ ಉದ್ದೇಶ ಹಾಗೂ ವಂಚನೆಯನ್ನು ತಡೆಗಟ್ಟಲು ಈ ನಿಯಮ ಜಾರಿಗೆಯಾಗಲಿದೆ. ಇನ್ನು ಮುಂದೆ KYC ಮಾಡಿಸಿಕೊಳ್ಳದಿದ್ದರೆ FASTag ನಿಷೇಧಿಸಲಾಗುವುದು ಹಾಗೂ ಬ್ಲಾಕ್ ಲಿಸ್ಟ್ ಸೇರಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಉಜ್ವಲ ಯೋಜನೆಯಲ್ಲಿ ಭಾರಿ ಬದಲಾವಣೆ!

ಮಹಿಳೆಯರಿಗೆ ಫ್ರೀಯಾಗಿ ಗ್ಯಾಸ್ ಕನೆಕ್ಷನ್ ನೀಡುತ್ತಿರುವ ಪಿಎಂ ಉಜ್ವಲಾ ಯೋಜನೆಯಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವವರು, ಗ್ಯಾಸ್ ಬುಕ್ ಗೆ KYC ಮಾಡಿಸಿಕೊಳ್ಳಬೇಕಾಗುವುದು. ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗೆ ಹೋಗಿ KYC ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಇದನ್ನು ಮಾಡಿಸಿಕೊಳ್ಳದೆ ಇದ್ದವರಿಗೆ ಸಬ್ಸಿಡಿ ಹಣ ಸಿಗುವುದಿಲ್ಲ.

ಇತರೆ ವಿಷಯಗಳು

ಬಜೆಟ್‌ಗೂ ಮುನ್ನ ಅಗ್ಗವಾಯ್ತು ಅಡುಗೆ ಎಣ್ಣೆ.! ಸರ್ಕಾರದಿಂದ ಹೊಸ ಬೆಲೆ ನಿಗದಿ

ಇನ್ನು ಆಯುಷ್ಮಾನ್ ಕಾರ್ಡ್ ಇದ್ದರೂ ಉಚಿತ ಚಿಕಿತ್ಸೆ ಸಿಗಲ್ಲ!!

Treading

Load More...