ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟೀ ಯೋಜನೆಗಳಲ್ಲಿ ಈಗಾಗಲೇ 4 ಗ್ಯಾರಂಟೀಗಳನ್ನು ಜಾರಿಗೆ ತಂದಿದ್ದು ಇದೀಗ 5 ನೇ ಗ್ಯಾರಂಟೀಯಾದ ಯುವನಿಧಿ ಯೋಜನೆಗೂ ಸಹ ಚಾಲನೆಯನ್ನು ನೀಡಿದೆ. ಅಂತೆಯೇ ಈ ಯೊಜನೆಗೆ ಬೇಕಾಗುವಂತಹ ದಾಖಲೆಗಳೇನು ಹಾಗೂ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ಪಡೆಯಬಹುದಾಗಿದೆ. ಕೊನೆಯವರೆಗೂ ಓದಿ.
ರಾಜ್ಯ ಸರ್ಕಾರವು ವಿಧಾಸಭಾ ಚುನಾವಣೆಯ ಸಮಯದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ 5 ಗ್ಯಾರಂಟೀ ಯೋಜನೆಗಳನ್ನು ಫಲಪ್ರದವಾಗಿ ಅಧಿಕೃತವಾಗಿ ಚಾಲನೆಯನ್ನು ನೀಡಲಾಗಿದೆ. ಅಂತೆಯೇ ನಿನ್ನೆ ತನ್ನ ಅಧಿಕೃತ ಟ್ವಿಟರ್ (X) ಖಾತೆಯಲ್ಲಿ ಮಾನ್ಯ ಸಿದ್ದರಾಮಯ್ಯನವರು ಹೇಳಿಕೊಂಡಿರುವಂತೆಯೇ ಯುವ ಜನತೆ ದೇಶದ ಆಸ್ತಿ ಅವರನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ. ಅಂತೆಯೇ ಅವರಿಗೆ ಕೆಲಸ ಸಿಗುವವರೆಗೂ ಸಹ ಸರ್ಕಾರದಿಂದ ನಿರುದ್ಯೋಗ ಭತ್ಯೆಯನ್ನು 1500- 3 ಸಾವಿರದವರೆಗೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಯುವನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಯುವನಿಧಿ ಯೋಜನೆಗೆ ಡಿಸೆಂಬರ್ 26, 2023 ಮಂಗಳವಾರ ಅರ್ಜಿ ಹಾಕುವಂತಹ ಪ್ರಕ್ರಿಯೆಗೆ ಚಾಲನೆಯನ್ನು ನಿಡಲಾಗಿದೆ. ಅಂತೆಯೇ ಪದವಿ ಮುಗಿಸಿರುವಂತಹ ಮತ್ತು ಡಿಪ್ಲೋಮಾ ಕೋರ್ಸ್ ಆಗಿರುವಂತಹವರು ಯಾವುದೇ ಯುವಕ ಯುವತಿಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕಳೆದ 6 ತಿಂಗಳಿನಿಂದ ಕೆಲಸ ಸಿಗದೇ ಇದ್ದಲ್ಲಿ ಅಂತಹವರ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಬಹುದು. 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ.
ದಾಖಲೆಗಳು
- ಕರ್ನಾಟಕದಲ್ಲಿಯೇ ಶಿಕ್ಷಣವನ್ನು ಪೂರೈಸಿರಬೇಕು.
- ಕಳೆದ 6 ವರ್ಷಗಳಿಂದ ಕರ್ನಾಟಕದಲ್ಲಿ ವಾಸವಾಗಿರಬೇಕು.
- ಪದವಿ ಶಿಕ್ಷಣ ಮುಗಿಸಿರುವವರು10ನೇ ತರಗತಿಯ ಮಾರ್ಕ್ಸ್ ಕಾರ್ಡ್,
- ಪಿಯುಸಿ ಮಾರ್ಕ್ಸ್ ಕಾರ್ಡ್
- ಡಿಪ್ಲೋಮಾ ಮುಗಿಸಿರುವಂತಹವರು 8 9ನೇ ತರಗತಿಯ ಮಾರ್ಕ್ಸ್ ಕಾರ್ಡ್
- ಡಿಪ್ಲೋಮೋ ಹಾಗೂ ಪದವಿ ಕೋರ್ಸ್ ಮುಗಿಸಿರುವಂತಹವರು 10ನೇ ತರಗತಿ ಹಾಗೂ ಸೆಕೆಂಡ್ ಪಿಯುಸಿ
- ಆಧಾರ್ ಕಾರ್ಡ್
- ಬ್ಯಾಂಕ್ ಅಕೌಂಟ್ ಡೀಟೆಲ್ಸ್
ಇದನ್ನು ಸಹ ಓದಿ: ಇನ್ಮುಂದೆ ಗೃಹಲಕ್ಷ್ಮಿ ಸಮಸ್ಯೆ ಬಂದ್! ಹಣ ಸಿಗದವರಿಗೆ ಸ್ಪಾಟ್‌ನಲ್ಲೇ ಪರಿಹಾರ
ಅರ್ಜಿ ಸಲ್ಲಿಸುವುದು ಹೇಗೆ?
ಯುವ ನಿಧಿ ಯೋಜನೆಯ ಅಡಿಯಲ್ಲಿ ಪದವಿಯನ್ನು ಪೂರ್ಣಗೊಳಿಸಿರುವವರಿಗೆ 3 ಸಾವಿರ ಹಾಗೂ ಡಿಪ್ಲೋಮಾ ಶಿಕ್ಷಣ ಪೂರೈಸಿದವರಿಗೆ 1500 ರೂಪಾಯಿಗಳನ್ನು ಸರ್ಕಾರ ನಿರುದ್ಯೋಗಿಗಳಿಗೆ ನೀಡುತ್ತಿದೆ. 2 ವರ್ಷಗಳ ಅವಧಿಗೆ ನೀಡಲಾಗುತ್ತದೆ. online ಹಾಗೂ ofline ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದಾದರೆ ಈ ಎಲ್ಲಾ ದಾಖಲೆಗಳನ್ನು ಹತ್ತಿರದ ಕರ್ನಾಟಕ ಒನ್ ಬೆಂಗಳೂರು ಒನ್ ಹಾಗೂ ಗ್ರಾಮ್ ಒನ್, ಬಾಪೂಜಿ ಕೇಂದ್ರ ಮೊದಲಾದ ಸೇವಾ ಕೇಂದ್ರಗಳಿಗೆ ಹೋಗಿ ಆಫ್ಲೈನ್ ಅರ್ಜಿಯನ್ನು ಕೂಡ ಸಲ್ಲಿಸಬಹುದು.
ಇನ್ನು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವುದಾದರೆ ಸೇವಾಸಿಂಧು ಪೋರ್ಟಲ್ ಮೂಲಕ ಅಧಿಕೃತ ವೆಬ್ಸೈಟ್ ನಲ್ಲಿ ಲಾಗ್‌ಇನ್ ಆಗಬೇಕಾಗುತ್ತದೆ. ಒಂದು ವೇಳೇ ನೀವು ಸೇವಾ ಸಿಂಧುವಿನ ಹೊಸ ಬಳಕೆದಾರರಾಗಿದ್ದರೆ ಸೇವಾ ಸಿಂಧು ಅಪ್ಲೀಕೇಶನ್ ರಿಜಿಸ್ಟರ್ ಐಡಿಯನ್ನು ಕ್ರಿಯೇಟ್ ಮಾಡಬೇಕಾಗುತ್ತದೆ.
ಅದೇ ರೀತಿಯಾಗಿ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ವಿವರಗಳನ್ನು ಧೃಢಪಡಿಸುವ ಮೂಲಕ ತಮ್ಮ ದಾಖಲೆಗಳನ್ನು ಸಲ್ಲಿಸಿ ಶಿಕ್ಷಣ ದೃಢೀಕರಿಸಿ ಪಡೆದುಕೊಳ್ಳಬೇಕಾಗುತ್ತದೆ. ಆ ಬಳಿಕ ವೇ ಅಗತ್ಯವಿರುವಂತಹ ಮಾಹಿತಿಗಳನ್ನು ನೀಡಿ ಅರ್ಜಿ ಪ್ರಕ್ರಿಯೆ ಕಂಪ್ಲೀಟ್ ಮಾಡಿಕೊಳ್ಳಬಹುದು.
12 ಜನವರಿ 2024 ರಂದು ಯುವನಿಧಿ ಯೋಜನೆಗೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಈಗಾಗಲೇ ಸರ್ಕಾರ ಮಾಹಿತಿಯನ್ನು ನೀಡಿದೆ. ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಇದೂವರೆಗೂ ಸರ್ಕಾರ ನಿಗದಿಪಡಿಸಿಲ್ಲ. ಆದರೂ ಕೂಡ ಈ ಯೋಜನೆಗೆ ಆದಷ್ಟು ಬೇಗನೇ ಅರ್ಜಿಯನ್ನು ಸಲ್ಲಿಸಿ ಅರ್ಹರು ಯುವನಿಧಿ ಯೋಜನೆಯ ಪ್ರಯೋಜನವನ್ನು ಪಡೆಯಿರಿ. ಹಾಗೂ ನಿರುದ್ಯೋಗ ಭತ್ಯೆಯನ್ನು ಪಡೆಯಿರಿ.
ಇತರೆ ವಿಷಯಗಳು:
ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಹೊಸ ರೂಲ್ಸ್! ಕಾರ್ಡ್ ವಿತರಣೆಗೂ ಮುನ್ನ ಆಹಾರ ಇಲಾಖೆ ಹೊಸ ಆದೇಶ
ಸಾಲ ತೀರಿಸಲು ಹೊಸ ರೂಲ್ಸ್!! ಮುಂಚಿತವಾಗಿ ಮರುಪಾವತಿಸಲು ಕಟ್ಟಬೇಕು ಶುಲ್ಕ