ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ತಂದ 5 ಗ್ಯಾರಂಟಿಗಳಲ್ಲಿ ಒಂದಾದ ಯುವನಿಧಿ ಯೋಜನೆಯು 5 ನೇ ಗ್ಯಾರಂಟೀ ಯೋಜನೆ ಬಗ್ಗೆ ಜನರಲ್ಲಿ ಕುತೂಹಲ ಸಾಕಷ್ಟಿದೆ. ನಿರುದ್ಯೋಗ ಭತ್ಯೆಯು ಯಾರಿಗೆಲ್ಲಾ ಸಿಗಲಿದೆ ಹಾಗೂ ಹೇಗೆ ಅಪ್ಲೈ ಮಾಡಬೇಕು. ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಕೊನೆಯವರೆಗೂ ಓದಿ.
BPL ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ನಿರುದ್ಯೋಗ ಭತ್ಯೆ ಸಿಗುವುದೇ, ರೇಷನ್ ಕಾರ್ಡ್ ಕಡ್ಡಾಯವೇ ಎಂಬ ಹತ್ತು ಹಲವು ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರವನ್ನು ಕಾಣಬಹುದಾಗಿದೆ.
ಯುವ ನಿಧಿ ಯೋಜನೆಗೆ ಚಾಲನೆ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ!
ಯುವನಿಧಿ ಯೋಜನೆಗೆ ಚಾಲನೆ ನೀಡಲು ಈಗಾಗಲೇ ಸರ್ಕಾರ ಡೇಟ್ ಫಿಕ್ಸ್ ಮಾಡಿದೆ. ರಾಜ್ಯದಲ್ಲಿ ವಾಸಿಸುವಂತಹ ನಿರುದ್ಯೋಗಿ ಯುವಕ ಯುವತಿಯರಿಗಾಗಿ ಕಾಂಗ್ರೆಸ್‌ನ 5 ನೇ ಗ್ಯಾರಂಟೀಯನ್ನು ಜಾರಿಗೆ ತರಲಾಗುವುದು. ಡಿಸೆಂಬರ್ 26 ರಿಂದ ಅರ್ಜಿ ಪ್ರಕ್ರಿಯೆ ಕೂಡ ಆರಂಭವಾಗಲಿದೆ. ಆರಂಭದಲ್ಲಿಯೇ ನಿರುದ್ಯೋಗಿಗಳು ನಿರುದ್ಯೋಗ ಭತ್ಯೆಯನ್ನು ಪಡೆಯಬಹುದು.
ಯುವನಿಧಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು
- ಸರ್ಕಾರ ಈಗಾಗಲೇ ತಿಳಿಸಿರುವಂತೆ ಯುವ ನಿಧಿ ಯೋಜನೆಯ ಅಡಿಯಲ್ಲಿ ಯುವಕ ಮತ್ತು ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
- 2022 ಹಾಗೂ 23ನೇ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮಾ ಮುಗಿಸಿರುವಂತಹ ಆರು ತಿಂಗಳಾದರು ಕೆಲಸ ಸಿಗದೇ ಮನೆಯಲ್ಲಿರುವಂತಹ ಯುವಕರಿಗೆ ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
- ಪದವಿ ಶಿಕ್ಷಣವನ್ನು ಮುಗಿಸಿರುವಂತಹ ಯುವಕ ಯುವತಿಯರಿಗೆ ಪ್ರತಿ ತಿಂಗಳು ತಲಾ 3000 ರೂಪಾಯಿ ಹಾಗೂ ಡಿಪ್ಲೋಮೋ ಮುಗಿಸಿರುವಂತಹವರಿಗೆ ಪ್ರತಿ ತಿಂಗಳು 1500 ಭತ್ಯೆಯನ್ನು ನೀಡಲಾಗುವುದು.
- ಈ ಯೋಜನೆಯು ಮುಂದಿನ 2 ವರ್ಷಗಳ ವರೆಗೆ ಚಾಲ್ತಿಯಲ್ಲಿ ಇರುತ್ತದೆ. 2 ವರ್ಷದ ಒಳಗೆ ಯುವಕ ಯುವತಿಯರು ಕೂಡ ಕೆಲಸವನ್ನು ಪಡೆದುಕೊಳ್ಳಬೇಕು.
ಇದನ್ನು ಸಹ ಓದಿ: ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗುವ ಮುನ್ಸೂಚನೆ!! ಮುಂದಿನ 24 ರಿಂದ 48 ಗಂಟೆಗಳ ಕಾಲ ಪ್ರವಾಹದ ಮಳೆ ಸಾಧ್ಯತೆ
ಇಂಥವರಿಗೆ ಯುವನಿಧಿ ನಿರುದ್ಯೋಗ ಭತ್ಯೆ ಸಿಗುವುದಿಲ್ಲ!
- 2022 23ನೇ ಸಾಲಿನಲ್ಲಿ ಪದವಿ OR ಡಿಪ್ಲೋಮಾ ಶಿಕ್ಷಣ ಮುಗಿಸಿದ ನಂತರ ಉನ್ನತ ವ್ಯಾಸಂಗದಲ್ಲಿ ತೊಡಗಿಸಿಕೊಂಡವರಿಗೆ ನಿರುದ್ಯೋಗ ಭತ್ಯೆ ದೊರೆಯುವುದಿಲ್ಲ.
- ಯೋಜನೆಯ ಮೂಲಕ ಆರ್ಥಿಕ ನೆರವನ್ನು ಪಡೆದುಕೊಳ್ಳುತ್ತಿರುವಂತಹ ಯುವಕ ಯುವತಿಯರಿಗೆ ಯುವನಿಧಿ ಯೋಜನೆಯ ಭತ್ಯೆ ಸಿಗೋದಿಲ್ಲ.
- ಸ್ವಂತ ಉದ್ಯಮ ಮಾಡುವವರಿಗೂ ಕೂಡ ನಿರುದ್ಯೋಗ ಭತ್ಯೆ ಸಿಗುವುದಿಲ್ಲ.
ಬೇಕಾಗಿರುವ ದಾಖಲೆಗಳು:
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಕಳೆದ ಆರು ತಿಂಗಳ ಬ್ಯಾಂಕ್ನ ವಹಿವಾಟಿನ ಪ್ರತಿ
- 2022 23ನೇ ಸಾಲಿನಲ್ಲಿ ಪದವಿ (degree) ಅಥವಾ ಡಿಪ್ಲೋಮೋ (diploma) ಮುಗಿಸಿರುವುದಕ್ಕೆ ಮಾರ್ಕ್ಸ್ ಕಾರ್ಡ್
- ಆದಾಯ ಪ್ರಮಾಣ ಪತ್ರ
ಸರ್ಕಾರವು ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಗೆ ಬಗ್ಗೆ ಇನ್ನಷ್ಟು ಸ್ಪಷ್ಟನೆಯನ್ನು ನೀಡಬೇಕಿದೆ.
ಇತರೆ ವಿಷಯಗಳು:
ರಾತ್ರೋ-ರಾತ್ರಿ ಬಂತು ದಿಢೀರ್ ಆದೇಶ.! 10 ವರ್ಷದ ಹಳೆಯ ಆಧಾರ್ ಕಾರ್ಡ್‌ಗಳು ರದ್ದು
ರಾಜ್ಯದ 24 ಜಿಲ್ಲೆಗಳ ರೈತರಿಗೆ ಬೆಳೆ ವಿಮೆ ಹಣ ಜಮಾ..! ಯಾರಿಗೆಲ್ಲ ಬರಲಿದೆ ಗೊತ್ತಾ?