ಹಲೋ ಸ್ನೇಹಿತರೇ ನಮಸ್ಕಾರ, ನಿಮಗೆಲ್ಲರಿಗೂ ನಮ್ಮ ಲೇಖನಕ್ಕೆ ಸ್ವಾಗತ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರವುದಾಗಿ ಘೋಷಣೆ ಮಾಡಿತ್ತು. ಇದರಂತೆಯೇ ಇದೀಗ ಎಲ್ಲಾ ಯೋಜನೆಗಳು ಚಾಲನೆಗೆ ಬಂದಿವೆ. ಯುವನಿಧಿ ಯೋಜನೆ ಕೂಡ ಚಾಲನೆ ಬಂದಿದ್ದು, ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ ಕಡಿಮೆಯಿದೆ. ಯಾಕೆ ಕಡಿಮೆ ಇದೆ ಎಂಬ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ತಿಳಿಸಿದ್ದೇವೆ.
ಯುವ ನಿಧಿ ಯೋಜನೆಗೆ ಅರ್ಜಿ ಹಾಕಲು ಅವಕಾಶ ಕೊಟ್ಟು 15 ದಿನಗಳು ಕಳೆದಿವೆ. 15 ದಿನಗಳಲ್ಲಿ ಅರ್ಜಿ ಹಾಕುವವರ ಸಂಖ್ಯೆ ತುಂಬಾ ಕಡಿಮೆಯಿದೆ. ರಾಜ್ಯ ಸರ್ಕಾರದ ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿದ್ದು, ಆದರೆ ಇದೀಗ ಯುವನಿಧಿ ಯೋಜನೆಗೆ ಹೆಚ್ಚಿನ ಪ್ರತಿಕ್ರಿಯೆ ಬಂದಿಲ್ಲ. ಇಲ್ಲಿಯವರೆಗೂ ಅರ್ಜಿ ಹಾಕಿದವರ ಸಂಖ್ಯೆ 50 ಸಾವಿರನೂ ಆಗಿಲ್ಲ. 30 ಸಾವಿರದ ಮೇಲೆ ಅರ್ಜಿ ಹಾಕಿದ್ದಾರೆ ಎಂದು ಮಾಹಿತಿ ಬಂದಿದೆ. 30 ಸಾವಿರ ಅರ್ಜಿ ಹಾಕಿದ್ದಲ್ಲಿ 5 ಸಾವಿರ ಅರ್ಜಿಗಳು ಸ್ಪಷ್ಟವಾಗಿದ್ದು ಈ ಅರ್ಜಿಗಳು ಅರ್ಹವಾಗಿವೆ ಎಂದು ತಿಳಿಸಲಾಗಿದೆ.
ಅರ್ಜಿ ಹಾಕಿರುವ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು, 4 ಸಾವಿರಕ್ಕೂ ಹೆಚ್ಚಿನ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡನೇ ಸ್ಥಾನದಲ್ಲಿ ಬೆಂಗಳೂರು ಇದ್ದು ಇಲ್ಲಿ 2500 ಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದಾರೆ. ಮೂರನೇ ಸ್ಥಾನದಲ್ಲಿ ಬಾಗಲಕೋಟೆ ಜಿಲ್ಲೆಯಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಅರ್ಜಿ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಎಲ್ಲೆಲ್ಲಿ ಕಾಲೇಜುಗಳು ಜಾಸ್ತಿ ಇರುವ ಜಿಲ್ಲೆಗಳಲ್ಲಿ ಅರ್ಜಿ ಹಾಕುವವರ ಸಂಖ್ಯೆ ಜಾಸ್ತಿಯಿದೆ. ವಿಜಯಪುರದಲ್ಲಿ 1500 ಕ್ಕೂ ಹೆಚ್ಚು, ರಾಯಚೂರಿನಲ್ಲಿ 1800 ಕ್ಕೂ ಹೆಚ್ಚು ಅರ್ಜಿ, ಹಾಗೂ ಉಡುಪಿ ಕೊಡಗು, ರಾಮನಗರ, ಚಾಮರಾಜನಗರ ಈ ಜಿಲ್ಲೆಗಳಲ್ಲಿ ಅತಿ ಕಡಿಮೆ ಅರ್ಜಿ ಹಾಕಿದ್ದಾರೆ.
ಇದನ್ನೂ ಸಹ ಓದಿ: ರೈತರ ಬಳಿ ಈ ಕಾರ್ಡ್ ಇದ್ದರೆ ಮಾತ್ರ ಸಾಲ ಮನ್ನಾ! ಕೇಂದ್ರ ಸರ್ಕಾರದಿಂದ ಆದೇಶ
- ಯುವ ನಿಧಿ ಯೋಜನೆ ಅರ್ಜಿ ಸಲ್ಲಿಸಲು ಸಾಕಷ್ಟು ತಾಂತ್ರಿಕ ದೋಷಗಳಿರುವುದರಿಂದಾಗಿ ಅರ್ಜಿ ಹಾಕುವವರ ಸಂಖ್ಯೆ ಕಡಿಮೆಯಿದೆ.
- ಮಾರ್ಕ್ಸ್ ಕಾರ್ಡ್ ಗಳನ್ನು ಅಪ್ಲೋಡ್ ಮಾಡಲು ಆಗುತ್ತಿಲ್ಲ, ಒರಿಜಿನಲ್ ಮಾರ್ಕ್ಸ್ ಕಾರ್ಡ್ ಅನ್ನು ಕೊಡದೇ ಇರುವುದರಿಂದ ಅಪ್ಲೇ ಮಾಡಲು ಆಗುತ್ತಿಲ್ಲ.
- ವಿದ್ಯಾರ್ಥಿಗಳಿಗೆ ಸಮರ್ಪಕ ಮಾಹಿತಿ ಕೂಡ ಇಲ್ಲದೇ ಇರುವುದರಿಂದ ಅರ್ಜಿ ಹಾಕುವರ ಸಂಖ್ಯೆ ಕಡಿಮೆಯಿದೆ.
- 5 ಸಾವಿರ ಅರ್ಜಿಗಳು ಮಾತ್ರ ಇಲ್ಲಿಯವರೆಗೆ ಸ್ಪಷ್ಟವಾಗಿದೆ.
ಈ ಯೋಜನೆಗೆ ಹೋಲಿಸಿ ನೋಡಿದರೆ, ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳಿಗೆ ಉತ್ತಮ ಪ್ರತಿಕ್ರಿಯೆ ಇತ್ತು. ಆದರೆ ಯುವನಿಧಿ ಯೋಜನೆಗೆ ಅರ್ಜಿ ಹಾಕುವವರು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಹಾಗೆಯೇ ಸರ್ಕಾರ ಕೇಳಿರುವ ದಾಖಲೆಗಳು ಸಲ್ಲಿಸಲು ವಿಫಲವಾಗಿರುವುದರಿಂದ ಅರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆಯಿದೆ. ಆದರೆ ಆರಂಭದ 14 ದಿನಗಳನ್ನು ನೋಡಿದರೆ ಸರ್ಜಿ ಸಲ್ಲಿಸುವವರ ಸಂಖ್ಯೆ ಕಡಿಮೆ ಇದೆ. ಇನ್ಮುಂದೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಬಹುದು ಎಂಬ ನಿರೀಕ್ಷೆಯಿದೆ.
ಇತರೆ ವಿಷಯಗಳು:
ಬಾಕಿ ಇರುವ ಎಲ್ಲರ ವಿದ್ಯುತ್ ಬಿಲ್ ಮನ್ನಾ! ಸರ್ಕಾರದಿಂದ ಬೃಹತ್ ಆದೇಶ
ಕಾರ್ಮಿಕರಿಗೆ ಸಿಗುತ್ತೆ 10 ಲಕ್ಷ! ಈ ಲಾಭ ಪಡೆಯಲು ನೋಂದಣಿ ಮಾಡಿಸಿ